»   »  ಹೊಸ ಮುಖಗಳ ಜೋಶ್ ಮೊದಲ ಪ್ರತಿ ಸಿದ್ಧ

ಹೊಸ ಮುಖಗಳ ಜೋಶ್ ಮೊದಲ ಪ್ರತಿ ಸಿದ್ಧ

Posted By:
Subscribe to Filmibeat Kannada
Josh movie still
ಎಸ್.ವಿ.ಪೊಡಕ್ಷನ್ಸ್ ಸಂಸ್ಥೆಯ ಹೆಮ್ಮೆಯ ಕೊಡುಗೆ ಜೋಶ್. ಚಿತ್ರಕ್ಕೆ ಚಿತ್ರೀಕರಣ ಸೇರಿದಂತೆ ನಂತರದ ಚಟುವಟಿಕೆಗಳು ಸಂಪೂರ್ಣವಾಗಿದ್ದು ಮೊದಲಪ್ರತಿ ಸಿದ್ದವಾಗಿದೆ. ಸದ್ಯದಲ್ಲೇ ಸೆನ್ಸಾರ್ ಮುಂದೆ ಕಾಣುವ ಚಿತ್ರ ಬೇಸಿಗೆ ರಜೆಯಲ್ಲಿ ಮಜಾ ನೀಡಲು ಚಿತ್ರಮಂದಿರಕ್ಕೆ ಆಗಮಿಸಲಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಆರಂಭದ ದಿನಂದಿಂದಲ್ಲೂ ಜೋಶ್ ಜನಪ್ರಿಯ. ಏಕೆಂದರೆ ತಮ್ಮ ಚಿತ್ರ ನೂತನಮಯವಾಗಿರಬೇಕೆಂದು ನಿರ್ಮಾಪರಿಗಿದ್ದ ಹಂಬಲ. ಚಿತ್ರ ಆರಂಭಕ್ಕೆ ಪೂರ್ವಭಾವಿಯಾಗಿ ಸಾಕಷ್ಟು ಸ್ಪರ್ಧೆಗಳನ್ನು ಏರ್ಪಡಿಸಿದ್ದ ಎಸ್.ವಿ.ಬಾಬು ಅವರು ಅದರಲ್ಲಿ ಸಿಕ್ಕ ಕಲಾವಿದ ಹಾಗೂ ತಂತ್ರಜ್ಞರನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ಕನ್ನಡದ ಮಟ್ಟಿಗೆ ಇದು ವಿನೂತನ ಪ್ರಯತ್ನವೆಂದರೆ ತಪ್ಪಾಗಲಾರದು. ಆಯ್ಕೆಯಿಂದ ಹಿಡಿದು ಚಿತ್ರ ಮುಕ್ತಾಯವಾಗುವವರೆಗೂ ಸಂಪೂರ್ಣ ಸಹಕಾರ ನೀಡಿದ ನಿರ್ದೇಶಕ ಶಿವಮಣಿ ಅವರಿಗೆ ಎಸ್.ವಿ.ಬಾಬು ಅಭಿನಂದನೆ ತಿಳಿಸಿದ್ದಾರೆ.

ಎಸ್.ವಿ.ಬಾಬು ಅವರ ಪುತ್ರ ಸಂತೋಷ್‌ಬಾಬು ನಿರ್ಮಾಣದ ಈ ಚಿತ್ರಕ್ಕೆ ಶಿವಮಣಿ ಅವರು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ವರ್ಧನ್ ಸಂಗೀತ, ಬಿ.ಎ.ಮಧು ಸಂಭಾಷಣೆ, ಕೆ.ಎಂ.ಪ್ರಕಾಶ್ ಸಂಕಲನ, ಮೋಹನ್ ಕಲೆ, ನಾಗೇಂದ್ರಪ್ರಸಾದ್, ಕವಿರಾಜ್, ಹೃದಯಶಿವ ಹಾಗೂ ಆನಂದ್ ಗೀತರಚನೆಯಿದೆ. ರವಿವರ್ಮ, ಜಾಲಿಬಾಸ್ಟಿನ್ ಸಾಹಸ, ಸ್ಟಾನ್ಲಿ ಡಿ ಕೋಸ್ಟಾ, ನೋಬಲ್, ಬೃಂದಾ ನೃತ್ಯ, ಮೈಸೂರ್ ಕೃಷ್ಣ ನಿರ್ಮಾಣ ನಿರ್ವಹಣೆಯಿರುವ ಚಿತ್ರದ ತಾರಾಬಳಗದಲ್ಲಿ ರಾಕೇಶ್, ವಿಷ್ಣು, ಅಕ್ಷಯ್, ಅಲೋಕ್, ಅಮಿತ್, ಜಗನ್ನಾಥ್, ಪೂರ್ಣ, ಸ್ನೇಹ, ಚೇತನ್, ಕರಿಬಸವಯ್ಯ, ರೋಮ ಗಣೇಶ್, ಮಂಡ್ಯ ರಮೇಶ್, ತುಳಸಿ ಶಿವಮಣಿ, ಸುಧಾ ಬೆಳವಾಡಿ ಮುಂತಾದವರಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!
'ಜೋಶ್'ನಲ್ಲಿ ಅಪಾರ ವೆಚ್ಚದ ಸುಂದರ ಗೀತೆ
ಕನ್ನಡಕ್ಕೆ ರಾಘವೇಂದ್ರ ಎಂಬ ಚಾಕ್ಲೆಟ್ ಹೀರೊ!
ನಿತ್ಯಾ ಎಂಬ ಚಿಗರೆ ಕಂಗಳ ಪೋರಿಯ ಚಿತ್ರಮಾಲಿಕೆ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada