»   »  ಮೈಸೂರಲ್ಲಿ ನಟನ ತಂಡದ ಕನ್ನಡ ಚಿತ್ರೋತ್ಸವ

ಮೈಸೂರಲ್ಲಿ ನಟನ ತಂಡದ ಕನ್ನಡ ಚಿತ್ರೋತ್ಸವ

Subscribe to Filmibeat Kannada
Natana film festival in Mysuru
ಮಾರ್ಚ್ 1 ರಿಂದ 3ನೇ ತಾರೀಖಿನವರೆಗೆ ಮೂರು ದಿನಗಳ ಕಾಲ ಕನ್ನಡ ಚಿತ್ರರಂಗದ ಅಮೃತ ಮಹೋತ್ಸವ. ವರ್ಣರಂಜಿತ ಅಮೃತ ಮಹೋತ್ಸವದ ಪೂರ್ವಭಾವಿ ಸಿದ್ಧತೆಗಾಗಿ ಇಂದಿನಿಂದ 15 ದಿನಗಳ ಕಾಲ ಕನ್ನಡ ಚಿತ್ರರಂಗಕ್ಕೆ ರಜೆ ಘೋಷಿಸಲಾಗಿದೆ. ಇದೇ ಸಂದರ್ಭದಲ್ಲಿ ದೂರದ ಮೈಸೂರಿನ ನಟನ ರಂಗಮಂಟಪ 25 ಕನ್ನಡ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಅಮೃತ ಮಹೋತ್ಸವನ್ನು ಅರ್ಥವತ್ತಾಗಿ ಆಚರಿಸಲು ನಿರ್ಧರಿಸಿದೆ. ಈ ಕುರಿತು ನಟನ ರಂಗ ತಂಡದ ರೂವಾರಿ ಮಂಡ್ಯ ರಮೇಶ್ ದಟ್ಸ್ ಕನ್ನಡಕ್ಕೆ ವಿವರ ನೀಡಿದರು.

ಫೆ.17ರಿಂದ ಮಾರ್ಚ್ 10ರವರೆಗೆ ಪ್ರತಿ ದಿನ ಸಂಜೆ 7ಗಂಟೆಗೆ ಅಪರೂಪದ ಕನ್ನಡ ಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಕನ್ನಡದ ಚಿತ್ರರಂಗದ ಹಿರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. 25 ಕನ್ನಡ ಚಿತ್ರಗಳ ಉತ್ಸವಕ್ಕೆ ಮಂಡ್ಯ ರಮೇಶ್ ಸೇರಿದಂತೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ಬಿ.ಸುರೇಶ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಉಪಾಧ್ಯಕ್ಷ ವಿ.ಎಚ್.ಸುರೇಶ್ ಮತ್ತು ನ್ಯೂಯಾರ್ಕ್ ಕನ್ನಡ ಸಂಘದ ಅಧ್ಯಕ್ಷ ವಾಸು ಸಿ. ಮೂರ್ತಿ ಸಹ ಕೈ ಜೋಡಿಸಿದ್ದಾರೆ.

ವಸಂತ ಸೇನ, ಹರಿಶ್ಚಂದ್ರ, ರಾಜವಿಕ್ರಮ, ಕರುಣೆಯೇ ಕುಟುಂಬದ ಕಣ್ಣು, ಬೇಡರ ಕಣ್ಣಪ್ಪ, ನಾಂದಿ, ಭೂದಾನ, ಸಂಸ್ಕಾರ, ಚೋಮನ ದುಡಿ, ರಣಧೀರ ಕಂಠೀರವ, ಫಣಿಯಮ್ಮ, ವಂಶವೃಕ್ಷ, ಬೆಳ್ಳಿಮೋಡ, ಪರಸಂಗದ ಗೆಂಡೆತಿಮ್ಮ, ಪ್ರೇಮಲೋಕ, ಬರ, ಆಕ್ಸಿಡೆಂಟ್, ಕೊಟ್ರೇಸಿ ಕನಸು, ಜನುಮದ ಜೋಡಿ, ಮಿಥಿಲೆಯ ಸೀತೆಯರು, ಸೀತಾ, ಗುಬ್ಬಚ್ಚಿಗಳು, ಗುಲಾಬಿ ಟಾಕೀಸ್, ಹಂಸಗೀತೆ ಈ ಅಪರೂಪದ ಚಿತ್ರಗಳು ಉತ್ಸವದಲ್ಲಿ ಪ್ರದರ್ಶನ ಕಾಣಲಿವೆ.

ಹೆಚ್ಚಿನ ಮಾಹಿತಿಗೆ: ನಟನ ರಂಗಮಂಟಪ, ರಾಮಕೃಷ್ಣ ನಗರ, ಮೈಸೂರು. ದೂರವಾಣಿ ಸಂಖ್ಯೆಗಳು: 94804 68327, 99455 18452.

(ದಟ್ಸ್ ಕನ್ನಡ ಚಿತ್ರವಾರ್ತೆ)

ಪೂರಕ ಓದಿಗೆ
ಎಪ್ಪತ್ತೈದರ ಯೌವನದಲ್ಲಿ ಕನ್ನಡ ಚಿತ್ರರಂಗ
ಕನ್ನಡ ಸಿನಿಮಾ 75ಕ್ಕೆ 75ಪುಸ್ತಕ: ಜಯಮಾಲಾ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada