»   »  ಸವಾರಿಯಲ್ಲಿ ಹಯಬುಸ ಬೈಕ್ ಚಿತ್ರಾನ್ನವಾದ ಕತೆ

ಸವಾರಿಯಲ್ಲಿ ಹಯಬುಸ ಬೈಕ್ ಚಿತ್ರಾನ್ನವಾದ ಕತೆ

Posted By:
Subscribe to Filmibeat Kannada
Srinagara Kitty and Raghu Mukherjee
ಬೆಳ್ಳಿ ಪರದೆ ಮೇಲೆ ಸುಜುಕಿ 'ಹಯಬುಸ' ಮೋಟರ್ ಬೈಕನ್ನು ಓಡಿಸಿದ ಘನತೆ ಬಾಲಿವುಡ್ ನಟ ಜಾನ್ ಅಬ್ರಹಾಂ ಖಾತೆಯಲ್ಲಿತ್ತು. ಈಗ ಹಯಬುಸ ಮೇಲೆ 'ಸವಾರಿ' ಹೊರಟ ಘನತೆ ಶ್ರೀನಗರ ಕಿಟ್ಟಿ ಮತ್ತು ರಘು ಮುಖರ್ಜಿ ಪಾಲಾಗಿದೆ.

ಸುಜುಕಿ ಕಂಪನಿಯ1200 ಸಿಸಿ ಸಾಮರ್ಥ್ಯದ ಲಿಮಿಟೆಡ್ ಎಡಿಶನ್ ಹಯಬುಸ ಮೋಟರ್ ಬೈಕ್ ನಬೆಲೆ ಬರೋಬ್ಬರಿ ರು.12 ಲಕ್ಷಗಳು. ಆದರೆ ಸವಾರಿ ಚಿತ್ರದಲ್ಲಿ ಸೆಕೆಂಡ್ ಹ್ಯಾಂಡ್ ಬೈಕನ್ನು ಬಳಸಲಾಗಿದೆ. ಈ ಬಗ್ಗೆ ಮಾತನಾಡಿದ ನಟ ಶ್ರೀನಗರ ಕಿಟ್ಟಿ, ಸವಾರಿ ಚಿತ್ರಕ್ಕಾಗಿ ಸೆಕೆಂಡ್ ಹ್ಯಾಂಡ್ ಹಯಬುಸ ಬೈಕನ್ನು ಖರೀದಿಸಿದ್ದೆವು. ಅದರ ಬೆಲೆ ಆಗ 7 ಲಕ್ಷ ರುಪಾಯಿಗಳು. ಚಿತ್ರೀಕರಣ ಆರಂಭವಾದಾಗ ಗಾಡಿ ಒಳ್ಳೆ ಕಂಡಿಷನಲ್ಲಿತ್ತು. ಚಿತ್ರೀಕರಣದ ಕೊನೆಗೆ ಆ ಬೈಕ್ ಗಬ್ಬೆದ್ದು ಹೋಗಿತ್ತು. ಈಗ ಅದಕ್ಕೆ ಒಂದು ಲಕ್ಷ ರುಪಾಯಿ ಕೊಟ್ಟರು ಹೆಚ್ಚು ಎನ್ನುತ್ತಾರೆ.

ಸವಾರಿ ಚಿತ್ರದ ಮತ್ತೊಬ್ಬ ನಟ ರಘು ಮುಖರ್ಜಿ ಮಾತನಾಡುತ್ತಾ, ಅತ್ಯುತ್ತಮವಾದ ರಸ್ತೆಗಳನ್ನು ಗಮನದಲ್ಲಿಟ್ಟುಕೊಂಡು ಹಯಬುಸ ಬೈಕನ್ನು ತಯಾರಿಸಿದ್ದಾರೆ. ರಸ್ತೆ ಹೊಂಡಗಳು, ಸ್ಪೀಡ್ ಬ್ರೇಕರ್ ಗಳಿಂದ ನಮ್ಮ ಹಯಬುಸ ಚಿತ್ರಾನ್ನವಾಯಿತು. ಚಿತ್ರೀಕರಣದಲ್ಲಿ ನಿರ್ದೇಶಕರು ಬೈಕ್ ನ ಮಹತ್ವವನ್ನು ಪ್ರತಿ ಹಂತದಲ್ಲೂ ಹೇಳುತ್ತಿದ್ದರು ಎಂದರು.

ಚಿತ್ರೀಕರಣದ ರೋಚಕ ಸನ್ನಿವೇಶಗಳ ಬಗ್ಗೆ ಮಾತನಾಡುತ್ತಾ, ಚಿತ್ರದ ಕೆಲವೊಂದು ದೃಶ್ಯಗಳನ್ನು ಅರಣ್ಯ ಪ್ರದೇಶದಲ್ಲಿ ಮಳೆಯ ಹಿನ್ನೆಲೆಯಲ್ಲಿ ಚಿತ್ರೀಕರಿಸಲಾಗಿದೆ. ಒಂದು ಹಂತದಲ್ಲಿ ಆಯ ತಪ್ಪಿ ಬೈಕ್ ಕಾಲಿನ ಕಾಲಿನ ಮೇಲೆ ಬಿದ್ದು ಬಿಡ್ತು. 400 ಕೆಜಿ ತೂಕದ ಬೈಕ್ ಬಿದ್ದಾಗ ಜೀವ ಹೋದಂಗಾಗಿತ್ತು. ನಾಲ್ಕು ಮಂದಿ ಬಂದು ಅದನ್ನು ಎತ್ತಬೇಕಾಯಿತು ಎನ್ನುತ್ತಾರೆ ರಘು ಮುಖರ್ಜಿ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಗಲ್ಲಾಪೆಟ್ಟಿಗೆಯಲ್ಲಿ ಜೋಶ್, ಸವಾರಿಗಳ ಗದ್ದಲ
ಏ ಮಚ್ಚಾ ಶಿವಮಣಿ ಜೋಶ್ ಸೂಪರ್ ಮಗಾ!
ಜೋಶ್ ನಟರಿಗೆ ಪಲ್ಸಾರ್ ಬೈಕ್ ಗಳ ಸಂಭಾವನೆ!
ಕೇಬಲ್ ಪ್ರಶಸ್ತಿ:ಅತ್ಯುತ್ತಮ ಧಾರಾವಾಹಿ ಮುಕ್ತಮುಕ್ತ
ಈ ಚಿತ್ರದ ನಾಯಕಿ ಯಾರೆಂದು ನೀವೇ ಊಹಿಸಿ!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada