»   » ಟೆನ್ನಿಸ್ ಅಂಗಳದಿಂದ ಪುಟಿದೇಳಲಿದೆ ಉಪ್ಪಿ ಚಿತ್ರ

ಟೆನ್ನಿಸ್ ಅಂಗಳದಿಂದ ಪುಟಿದೇಳಲಿದೆ ಉಪ್ಪಿ ಚಿತ್ರ

Posted By:
Subscribe to Filmibeat Kannada

ಸರಿಯಾದ ಹೆಸರಿಡದ ಚಿತ್ರದ ಮೂಲಕ ನಿರ್ದೇಶನಕ್ಕೆ ಮತ್ತೆ ಮರಳಿರುವ ಪ್ರತಿಭಾವಂತ ನಿರ್ದೇಶಕ ಉಪೇಂದ್ರ ಅವರಿಗೆ ಸಾಥ್ ನೀಡಿರುವ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಅವರು ಹಣದ ಹೊಳೆ ಹರಿಸಲು ಸಿದ್ಧರಾಗಿದ್ದಾರೆ. ಕೇವಲ ಫೋಟೊ ಶೂಟ್ ಗೆ 25 ಲಕ್ಷ ರು ಸುರಿದ ರಾಕ್ ಲೈನ್, ಉಪ್ಪಿಯ ಆಣತಿಯಂತೆ ಚಿತ್ರದ ಮಹೂರ್ತವನ್ನು ಅದ್ದೂರಿಯಾಗಿ ಮಾಡಲು ಕಬ್ಬನ್ ಪಾರ್ಕ್ ಬಳಿಯ ರಾಜ್ಯ ಟೆನ್ನಿಸ್ ಸ್ಟೇಡಿಯಂ ಅನ್ನು ಬುಕ್ ಮಾಡಿದ್ದಾರೆ.

ಆಹ್ವಾನ ಪತ್ರಿಕೆ ಎಂದಿನಂತೆ ಡಿಫರೆಟ್
ಉಪ್ಪಿ ಜನಮೆಚ್ಚುಗೆ ಗಳಿಸಿದ್ದು ಹಾಗೂ ಇಂದಿಗೂ ಕುತೂಹಲ ಉಳಿಸಿಕೊಂಡಿರುವ ಅವರ ಚಿತ್ರಗಳ ವಿಚಿತ್ರ ಶೀರ್ಷಿಕೆ ಹಾಗೂ ಆಹ್ವಾನ ವಿಧಾನದಿಂದ. ಅವರ ಚಿತ್ರ ವಿಚಿತ್ರಶೈಲಿಗೆ ಮಾರು ಹೋಗದಿರುವವರು ವಿರಳ. ಇದಕ್ಕೆ ಸಾಕ್ಷಿ ಎಂಬಂತೆ, ತಮ್ಮ ಹೊಸ ಚಿತ್ರ ('ಸೂಪರ್'?)ಕ್ಕೆ 16 ಪುಟಗಳ ಆಹ್ವಾನ ಪತ್ರಿಕೆಯನ್ನು ತಯಾರಿಸಿ, ಮಾಧ್ಯಮದವರಿಗೆ ಕಳಿಸಿದ್ದಾರೆ.

ಟೈಮ್ಸ್ ಆಫ್ ಇಂಡಿಯಾ, ಡಿಎನ್ ಎ, ಡೆಕ್ಕನ್ ಹೆರಾಲ್ಡ್ ಹಾಗೂ ಕನ್ನಡದ ಉದಯವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭ, ಪ್ರಜಾವಾಣಿ ಹಾಗೂ ವಿಜಯಕರ್ನಾಟಕ ದಿನಪತ್ರಿಕೆಗಳ ಬ್ಯಾನರ್ ಅಡಿಯಲ್ಲಿ ಸಿನಿಮಾದ ಬಗ್ಗೆ ಎರಡೆರೆಡು ಪುಟಗಳ ಮಾಹಿತಿಯನ್ನು ಈ ಆಹ್ವಾನ ಪತ್ರಿಕೆ ಹೊಂದಿದೆ.

ಚಿತ್ರದ ಆರಂಭಿಕ ಬಜೆಟ್ ರು.7ಕೋಟಿ ಎಂದು ಅಂದಾಜು ಮಾಡಲಾಗಿದೆ. ಸುಮಾರು 100 ದಿನಗಳ ಕಾಲ ಶೂಟಿಂಗ್ ನಡೆಯುವ ಸಾಧ್ಯತೆಯಿದೆ. ಈ ಚಿತ್ರದಿಂದ ಕನಿಷ್ಠವೆಂದರೂ 25 ಕೋಟಿ ಬಾಚುವ ನಿರೀಕ್ಷೆಯಲ್ಲಿದ್ದಾರೆ ರಾಕ್ ಲೈನ್. ಈವರೆಗೂ ಲಭ್ಯವಿರುವ ಚಿತ್ರದ ಸ್ಥಿರ ಚಿತ್ರಗಳಿಂದ ಪಾತ್ರಗಳ ಬಗ್ಗೆ ಯಾವುದೇ ಸುಳಿವು ಸಿಗುತ್ತಿಲ್ಲ.

ಈ ಚಿತ್ರದಲ್ಲಿ ಉಪೇಂದ್ರ ವಿಜ್ಞಾನಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎಂದು ಬಲ್ಲಮೂಲಗಳಿಂದ ತಿಳಿದುಬಂದಿದೆ.ರಾಕ್ ಲೈನ್ ಪ್ರೊಡಕ್ಷನ್ ನ 25ನೇ ಕಾಣಿಕೆಯಾದ ಈ ಚಿತ್ರವು ಕನ್ನಡದ ಜತೆಗೆ ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲೂ ತೆರೆ ಕಾಣಲಿದೆ.

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X