»   » ರಾಣಿ ಚೆನ್ನಮ್ಮ ವಂಶಸ್ಥರ ಮನೆಯಲ್ಲಿ ವೀರ ಪರಂಪರೆ

ರಾಣಿ ಚೆನ್ನಮ್ಮ ವಂಶಸ್ಥರ ಮನೆಯಲ್ಲಿ ವೀರ ಪರಂಪರೆ

Posted By:
Subscribe to Filmibeat Kannada

ಎಸ್.ನಾರಾಯಣ್ ನಿರ್ಮಿಸಿ, ನಿರ್ದೇಶಿಸುತ್ತಿರುವ ವೀರ ಪರಂಪರೆ ಚಿತ್ರಕ್ಕೆ ಈಗಾಗಲೇ ಗೋಕಾಕ್‌ನ ತಲ್ಲೂರು ಗ್ರಾಮ ಹಾಗೂ ಗುಲ್ಬರ್ಗಾದಲ್ಲಿ ಸುಮಾರು 35ದಿನಗಳ ಕಾಲ ನಿರಂತರ ಚಿತ್ರಿಕರಣವನ್ನು ನಡೆಸಿಕೊಂಡು ಬೆಂಗಳೂರಿಗೆ ವಾಪಸ್ ಆಗಿದ್ದಾರೆ. ಚೆಲುವಾಂಬಿಕ ಪಿಚ್ಚರ್ಸ್ ಲಾಂಛನದಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುತ್ತಿದೆ.

ಕಿತ್ತೂರ್ ರಾಣಿ ಚೆನ್ನಮ್ಮ ವಂಶಸ್ಥರಿಗೆ ಸೇರಿದ 150 ವರ್ಷಗಳಿಗೂ ಹಿಂದಿನ ಮನೆಯನ್ನು ವರದೆಗೌಡನ (ಅಂಬರೀಶ್) ಮನೆಯನ್ನಾಗಿಸಿ ಕೆಲವು ಸನ್ನಿವೇಶಗಳನ್ನು ಹಾಗೂ ಗುಲ್ಬರ್ಗಾದಲ್ಲಿ ಹಲವಾರು ಸಾಹಸ ಸನ್ನಿವೇಶಗಳನ್ನು ಸುದೀಪ್ ಅಭಿನಯದಲ್ಲಿ ಚಿತ್ರೀಕರಿಸಲಾಗಿದ್ದು ಮೇ.16 ರಿಂದ ಐತಿಹಾಸಿಕ ನಗರ ಮೈಸೂರಿನ ಸುತ್ತಮುತ್ತ ಶ್ರೀರಂಗಪಟ್ಟಣ ಮೊದಲಾದ ಕಡೆ 30 ದಿನಗಳ ಕಾಲ ನಿರಂತರ ಚಿತ್ರೀಕರಣ ನಡೆಸಲಿದ್ದಾರೆ.

ಎಸ್.ನಾರಾಯಣ್ ನಿರ್ಮಾಣದ 17ನೇ ಚಿತ್ರವಾಗಿ ಹೊರ ಹೊಮ್ಮಲಿರುವ ವೀರ ಪರಂಪರೆಯಲ್ಲಿ ಕನ್ನಡದ ಇಬ್ಬರು ಸೂಪರ್ ಸ್ಟಾರ್‌ಗಳು ಅಭಿನಯಿಸಲಿರುವದರಿಂದ ಸಹಜವಾಗಿಯೇ ಪ್ರೇಕ್ಷಕರಲ್ಲಿ ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ. ನಾರಾಯಣ್ ಅವರೇ ಕಥೆ-ಚಿತ್ರಕಥೆ-ಸಂಭಾಷಣೆ ಹಾಗೂ ಸಾಹಿತ್ಯ ಬರೆದು ನಿರ್ದೇಶಿಸಿದ್ದಾರೆ. ಆರ್.ಗಿರಿ ಛಾಯಾಗ್ರಹಣ ಇದ್ದು, ಐಂದ್ರಿತಾ ರೇ, ವಿಜಯಲಕ್ಷ್ಮೀ ಸಿಂಗ್, ಶೋಭರಾಜ್, ಶರಣ್ ಮೊದಲಾದವರ ತಾರಾಗಣವಿದೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada