Just In
Don't Miss!
- News
ಜೋ ಬೈಡನ್ ಅಧ್ಯಕ್ಷೀಯ ಭಾಷಣ ಬರೆದುಕೊಟ್ಟವರು ಯಾರು?
- Lifestyle
ಗರ್ಭಾವಸ್ಥೆಯಲ್ಲಿ ಮಧುಮೇಹ: ಪ್ರಾರಂಭದಲ್ಲಿಯೇ ವ್ಯಾಯಾಮದಿಂದ ತಡೆಗಟ್ಟಲು ಸಾಧ್ಯ
- Sports
ಐಸಿಸಿ ಟೆಸ್ಟ್ ರ್ಯಾಂಕಿಂಗ್: 4ನೇ ಸ್ಥಾನಕ್ಕೆ ಕುಸಿದ ಕೊಹ್ಲಿ, ಕೀಪರ್ಗಳ ಪೈಕಿ ಪಂತ್ಗೆ ಅಗ್ರ ಸ್ಥಾನ
- Automobiles
ಸ್ಥಗಿತಗೊಳಿಸಲಾಗಿದ್ದ ರ್ಯಾಪಿಡ್ ರೈಡರ್ ಮಾದರಿಯನ್ನು ಮರುಬಿಡುಗಡೆ ಮಾಡಿದ ಸ್ಕೋಡಾ
- Finance
ಅಂತರರಾಷ್ಟ್ರೀಯ ವಹಿವಾಟಿಗೆ ಎಸ್ ಬಿಐ ಖಾತೆದಾರರು ಹೀಗೆ ಮಾಡಿ...
- Education
AAI Recruitment 2021: 7 ಸಲಹೆಗಾರ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಅಂದು 'ಅಪ್ಪು' ಸಿನಿಮಾ ನೋಡಿ ರಜನಿಕಾಂತ್ ಹೀಗೆ ಹೇಳಿದ್ದರು
'ಅಪ್ಪು', ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕನಾಗಿ ಸ್ಯಾಂಡಲ್ ವುಡ್ ಎಂಟ್ರಿ ಕೊಟ್ಟ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೆ ಅದ್ಭುತ ನಟನೆಯ ಮೂಲಕ ಅಭಿಮಾನಿಗಳ ಮನ ಗೆದ್ದಿದ್ದರು ಪುನೀತ್. ಡಾ ರಾಜ್ ಕುಮಾರ್ ಮುದ್ದಿನ ಮಗನ ಸಿನಿಮಾಗೆ ಚಿತ್ರಪ್ರಿಯರು ಮಾತ್ರವಲ್ಲದೆ ಸ್ಟಾರ್ ನಟರು ಫಿದಾ ಆಗಿದ್ದರು.
ಸೂಪರ್ ಸ್ಟಾರ್ ರಜನಿಕಾಂತ್ ಕೂಡ ಪುನೀತ್ ಅಭಿನಯದ 'ಅಪ್ಪು' ಸಿನಿಮಾ ನೋಡಿ ಹಾಡಿಹೊಗಳಿದ್ದರು. ಪವರ್ ಸ್ಟಾರ್ ಪವರ್ ಫುಲ್ ಫೈಟಿಂಗ್, ಡ್ಯಾನ್ಸ್ ನೋಡಿ ರಜನಿಕಾಂತ್ ಬೆರಾಗಿದ್ದರು. ಮೊದಲ ಸಿನಿಮಾದಲ್ಲೆ ಸೆಂಚುರಿ ಬಾರಿದ 'ಅಪ್ಪು' ಸಿನಿಮಾ ರಿಲೀಸ್ ಆಗಿ ಇವತ್ತಿಗೆ 17 ವರ್ಷಗಳಾಗಿದೆ.
ಮುತ್ತುರಾಜನ ಮುತ್ತಿನಂಥ ಮಾತುಗಳನ್ನು ಅವರ ಧ್ವನಿಯಲ್ಲೇ ಕೇಳಿ
ಮಗನ ಮೊದಲ ಸಿನಿಮಾ ನೋಡಿ ಡಾ.ರಾಜ್ ಕುಮಾರ್ ಸಂತಸಗೊಂಡಿದ್ದರು. 'ಅಪ್ಪು' ನೂರು ದಿನ ಪೂರೈಸಿದ ಸಂತಸವನ್ನು ಅದ್ಧೂರಿಯಾಗಿ ಆಚರಣೆ ಮಾಡಿತ್ತು ಚಿತ್ರತಂಡ. ಶತಕದ ಸಂಭ್ರಮದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅತಿಥಿಯಾಗಿ ಆಗಮಿಸಿದ್ರು. ಮುಂದೆ ಓದಿ..

ಪುನೀತ್ ನಾಯಕನಾಗಿ ಎಂಟ್ರಿ ಕೊಟ್ಟು 17ವರ್ಷ
ಬಾಲನಟನಾಗಿ ಸಾಕಷ್ಟು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದ ಪವರ್ ಸ್ಟಾರ್ 'ಅಪ್ಪು' ಸಿನಿಮಾ ಮೂಲಕ ನಾಯಕನಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಅದ್ಭುತ ಅಭಿನಯದ ಮೂಲಕ ಮೊದಲ ಚಿತ್ರದಲ್ಲೆ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದರು ಪುನೀತ್. 'ಅಪ್ಪು' ತೆಲುಗಿನ ಖ್ಯಾತ ನಿರ್ದೇಶಕ ಪೂರಿ ಜಗನ್ನಾಥ್ ಸಾರಥ್ಯದಲ್ಲಿ ಚಿತ್ರ ಮೂಡಿ ಬಂದ ಸಿನಿಮಾ. ಈ ಸಿನಿಮಾದ ಮೂಲಕ ಪೂರಿ ಜಗನ್ನಾಥ್ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದರು.

ಶತದಿನೋತ್ಸವದ ಸಂಭ್ರಮದಲ್ಲಿ ರಜನಿಕಾಂತ್
ಪುನೀತ್ ರಾಜ್ ಕುಮಾರ್ ಅಭಿನಯದ ಚೊಚ್ಚಲ ಚಿತ್ರ ಯಶಸ್ವಿ 100 ದಿನಗಳನ್ನು ಪೂರೈಸಿತ್ತು. ಈ ಸಂತಸದಲ್ಲಿ ರಾಜ್ ಕುಟುಂಬ ನೂರರ ಸಂಭ್ರಮವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಸಂಭ್ರಮ ಕೂಟದಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ವಿಶೇಷ ಅತಿಥಿಯಾಗಿ ಭಾಗಿಯಾಗಿದ್ರು. ಪುನೀತ್ ಅಭಿನಯದ 'ಅಪ್ಪು' ಸಿನಿಮಾ ನೋಡಿ ರಜನಿಕಾಂತ್ ಹಾಡಿಹೊಗಳಿದ್ದರು.
ರಾಧಿಕಾ ಶರತ್ ಕುಮಾರ್ ಜೊತೆ ಸೆಲ್ಫಿ ತೆಗೆದುಕೊಂಡ ಪುನೀತ್

ಅಪ್ಪು ಜೊತೆ ಕೂತು ಸಿನಿಮಾ ವೀಕ್ಷಿಸಿದ್ದ ತಲೈವಾ
ರಜನಿಕಾಂತ್ ರಾಜ್, ಪವರ್ ಸ್ಟಾರ್ ಅಭಿನಯದ ಮೊದಲ ಚಿತ್ರವನ್ನು ರಾಜ್ ಕುಟುಂಬದ ಜೊತೆ ಕೂತು ವೀಕ್ಷಿಸಿದ್ದಾರೆ. ನಂತರ ಶತದಿನೋತ್ಸವದಲ್ಲಿ ಮಾತನಾಡಿದ ತಲೈವಾ "ಸಿಂಹದ ಮರಿ ಘರ್ಜನೆ ಶುರುಮಾಡಿದೆ. ಮುಂದೆ ಇನ್ನೂ ಏನೇನು ಮಾಡುತ್ತೆ ಎನ್ನುವುದನ್ನ ನೋಡಬೇಕು. ಪುನೀತ್ ಎಂಟ್ರಿ ದೃಶ್ಯ, ಫೈಟಿಂಗ್ ಮತ್ತು ಡ್ಯಾನ್ಸ್ ಅದ್ಭುತವಾಗಿದೆ. ರಾಜ್ ಕುಮಾರ್ ಮಗ ಅಂತ ಚಪ್ಪಾಳೆ ಬಿದ್ದಿಲ್ಲ, ಪುನೀತ್ ನಟನೆಗೆ ಚಪ್ಪಾಳೆ ಬಿದ್ದಿದೆ. ಪುನೀತ್ ಅವರದ್ದು ಅಂತರಂಗದ ಅಭಿನಯ. ಪಾತ್ರದ ಬಗ್ಗೆ ತಲ್ಲೀನತೆ ಇದೆ" ಎಂದು ಪುನೀತ್ ಬಗ್ಗೆ ಅಂದೇ ಭವಿಷ್ಯ ನುಡಿದಿದ್ದರು ರಜನಿ.

ನಾಯಕಿಯಾಗಿ ರಕ್ಷಿತಾ ಎಂಟ್ರಿ
ಪುನೀತ್ ಅಭಿನಯದ ಅಪ್ಪು ಸಿನಿಮಾದ ಮೂಲಕ ರಕ್ಷಿತಾ ನಾಯಕಿಯಾಗಿ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದರು. ಪುನೀತ್ ಮತ್ತು ರಕ್ಷಿತಾ ಕಾಂಬಿನೇಷನ್ ಚಿತ್ರಪ್ರಿಯರ ಮನಗೆದ್ದಿತ್ತು. ನಾಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 17 ವರ್ಷಗಳು ಪೂರೈಸಿದೆ.