»   » ತೆಲುಗಿನ ಹೊಸ ನಾಗವಲ್ಲಿಯಾಗಿ ಅನುಷ್ಕಾ ಶೆಟ್ಟಿ

ತೆಲುಗಿನ ಹೊಸ ನಾಗವಲ್ಲಿಯಾಗಿ ಅನುಷ್ಕಾ ಶೆಟ್ಟಿ

Posted By:
Subscribe to Filmibeat Kannada

'ಆಪ್ತಮಿತ್ರ'ಚಿತ್ರದಲ್ಲಿ ನಾಗವಲ್ಲಿಯಾಗಿ ಸೌಂದರ್ಯ ಅವರ ಪಾತ್ರ ಪೋಷಣೆ ನಿಜಕ್ಕೂ ಅದ್ಭುತ, ಅಮೋಘ. ಆ ಒಂದು ಕಾಲ್ಪನಿಕ ಪಾತ್ರದಲ್ಲಿ ಸೌಂದರ್ಯ ಪರಕಾಯ ಪ್ರವೇಶ ಮಾಡಿಬಿಟ್ಟಿದ್ದರು. ಇದೀಗ ನಾಗವಲ್ಲಿ ಎಂದರೆ ಕಣ್ಮುಂದೆ ನಿಲ್ಲುವುದು ಸೌಂದರ್ಯಮಾತ್ರ. ಅಷ್ಟರ ಮಟ್ಟಿಗೆ ಸೌಂದರ್ಯ ಪ್ರಭಾವ ಬೀರಿದ್ದಾರೆ. ಇದೀಗ ನಾಗವಲ್ಲಿ ಪಾತ್ರಕ್ಕಾಗಿ ತೆಲುಗಿನಲ್ಲಿ ಅನುಷ್ಕಾ ಶೆಟ್ಟಿಯನ್ನು ಆಯ್ಕೆ ಮಾಡಲಾಗಿದೆ.

ತೆಲುಗಿನ 'ಅರುಂಧತಿ' ಎಂಬ ಮಾಯ ಮಂತ್ರಗಳ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಅಮೋಘವಾಗಿ ಅಭಿನಯಿಸಿದ್ದರು. ಇದೀಗ ಆಪ್ತರಕ್ಷಕ ಚಿತ್ರವನ್ನು ತೆಲುಗಿನಲ್ಲಿ ರೀಮೇಕ್ ಮಾಡುತ್ತಿದ್ದು ಆ ಚಿತ್ರದ ನಾಗವಲ್ಲಿ ಪಾತ್ರಕ್ಕೆ ಅನುಷ್ಕಾರನ್ನು ಆಯ್ಕೆ ಮಾಡಲಾಗಿದೆ ಎನ್ನುತ್ತವೆ ಮೂಲಗಳು. ಚಿತ್ರದ ನಾಯಕ ನಟನಾಗಿ ವಿಕ್ಟರಿ ವೆಂಕಟೇಶ್ ಈಗಾಗಲೆ ಆಯ್ಕೆಯಾಗಿದ್ದಾರೆ. ಆಪ್ತರಕ್ಷಕ ಚಿತ್ರದಲ್ಲಿ ನಾಗವಲ್ಲಿಯಾಗಿ ನಟಿ ವಿಮಲಾ ರಾಮನ್ ಗಮನಸೆಳೆದಿದ್ದನ್ನು ಇಲ್ಲಿ ಸ್ಮರಿಸಬಹುದು.

ಏತನ್ಮಧ್ಯೆ ಆಪ್ತರಕ್ಷಕ ಬಾಕ್ಸಾಫೀಸ್ ಗಳಿಕೆಯಲ್ಲಿ ಮುನ್ನುಗ್ಗುತ್ತಿದ್ದು ರು.20 ಕೋಟಿ ಗಳಿಸಿದೆ ಎಂಬುದು ಸುದ್ದಿ. ಈ ಅದ್ದೂರಿ ಚಿತ್ರ ಇದೀಗ ತೆಲುಗು ಚಿತ್ರರಂಗಕ್ಕೆ ಅಡಿಯಿಡುತ್ತಿದ್ದು ಅಲ್ಲೂ ಹೊಸ ದಾಖಲೆ ನಿರ್ಮಿಸುವ ವಿಶ್ವಾಸವನ್ನು ಹುಟ್ಟುಹಾಕಿದೆ. ಏನೇ ಇರಲಿ, ಹೊಸ ನಾಗವಲ್ಲಿ ಎಷ್ಟರ ಮಟ್ಟಿಗೆ ಪ್ರೇಕ್ಷಕರನ್ನು ತನ್ನತ್ತ ಸೆಳೆಯುತ್ತಾಳೆ ಎಂಬುದೆ ಮುಂದಿನ ಕುತೂಹಲ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada