»   » ಪೊರ್ಕಿಯಲ್ಲಿ ಐಟಂ ಬೆಡಗಿ ಜುಬೇದಾ ಕುಣಿತ!

ಪೊರ್ಕಿಯಲ್ಲಿ ಐಟಂ ಬೆಡಗಿ ಜುಬೇದಾ ಕುಣಿತ!

Subscribe to Filmibeat Kannada
Porki movie still
ತೆಲುಗು 'ಪೋಕಿರಿ' ಚಿತ್ರದ ರೀಮೇಕ್ 'ಪೊರ್ಕಿ'ಗೆ ಮಾತಿನ ಜೋಡಣೆ ಕಾರ್ಯ ಮುಕ್ತಾಯವಾಗಿದೆ. ದರ್ಶನ್ ನಾಯಕ ನಟನಾಗಿರುವ ಚಿತ್ರಕ್ಕೆ ಹೊಸ ಮುಖ ಪ್ರಣೀತಾ ನಾಯಕಿ. ಐಟಂ ಹಾಡುಗಳಿಗೆ ಖ್ಯಾತರಾಗಿರುವ ಮುಮ್ತಾಜ್ ಖಾನ್ ಸಹೋದರಿ ಜುಬೇದಾ ಈ ಚಿತ್ರದ ಹಾಡೊಂದರಲ್ಲಿ ಕುಣಿದಿರುವುದು ವಿಶೇಷ.

ಡ್ಯೂಪ್ ಕಲಾವಿದರನ್ನು ಬಳಸದೆ ಸ್ವತಃ ದರ್ಶನ್ ಅವರೇ ಫೈಟ್ ದೃಶ್ಯಗಳಲ್ಲಿ ಅಭಿನಯಿಸಿರುವುದು ಚಿತ್ರದ ಮತ್ತೊಂದು ಗಮನಾರ್ಹ ಅಂಶ. ಪೊರ್ಕಿ ಚಿತ್ರವನ್ನು ಮೈಸೂರು, ಹೈದರಾಬಾದ್ ಮತ್ತು ಸ್ವಿಟ್ಜರ್ ಲ್ಯಾಂಡ್ ನಲ್ಲಿ ಚಿತ್ರೀಕರಿಸಲಾಗಿದೆ ಎನ್ನುತ್ತಾರೆ ಚಿತ್ರದ ನಿರ್ದೇಶಕ ಎಂ ಡಿ ಶ್ರೀಧರ್.

ಕನ್ನಡ ಚಿತ್ರದಲ್ಲಿ ಸದ್ಯದ ಬೇಡಿಕೆಯಲ್ಲಿರುವ ವಿ ಹರಿಕೃಷ್ಣ ಅವರ ಸಂಗೀತ ನಿರ್ದೇಶನ ಪೊರ್ಕಿ ಚಿತ್ರಕ್ಕಿದೆ. ತೆಲುಗು ಚಿತ್ರೋದ್ಯಮದ ಬಾಕ್ಸಾಫೀಸ್ ದಾಖಲೆಗಳನ್ನು ಮುರಿದ ಚಿತ್ರ ಪೋಕಿರಿ. ನಟ ಮಹೇಶ್ ಬಾಬು ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಜೋಡಿ ತೆಲುಗು ಚಿತ್ರೋದ್ಯಮದಲ್ಲಿ ಹೊಸ ಸಂಚಲನ ಉಂಟು ಮಾಡಿತ್ತು. ಇದೀಗ ಕನ್ನಡಲ್ಲೂ ಈ ಚಿತ್ರ ದಾಖಲೆ ನಿರ್ಮಿಸಲಿದೆ ಎಂಬ ವಿಶ್ವಾಸದಲ್ಲಿ ಚಿತ್ರತಂಡ ಇದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada