For Quick Alerts
  ALLOW NOTIFICATIONS  
  For Daily Alerts

  ಗೋಲ್ಡನ್ ಸ್ಟಾರ್ ಗೋದ್ರೇಜ್ ಕೂಲ್ ಕೂಲ್

  By Mahesh
  |

  ಕೂಲ್ ಚಿತ್ರ ತಂಡದಲ್ಲಿ ಈಗ ಎಲ್ಲವೂ ಕೂಲ್ ಕೂಲ್. ಚಿತ್ರದ ಆರಂಭದಲ್ಲಿ ಉಂಟಾಗಿದ್ದ ಬಿಕ್ಕಟ್ಟು, ಕೆಎಫ್ ಸಿಸಿ ಜೊತೆ ತಿಕ್ಕಾಟ, ಶಿಲ್ಪಾ ಗಣೇಶ್ ಆಣೆ ಮಾತು ಎಲ್ಲವೂ ಮುಗಿದ ಕಥೆ. ಗೋಲ್ಡನ್ ಮೂವೀಸ್ ತಂಡ ಈಗ ತಮ್ಮ ಎರಡನೇ ಕೂಸಾದ ಕೂಲ್ ಚಿತ್ರದ ಪ್ರಚಾರ ಕಾರ್ಯದಲ್ಲಿ ನಿರತವಾಗಿದೆ. ಗಣೇಶ್ ಹಾಗೂ ಶಿಲ್ಪಾ ದಂಪತಿಗಳು ಬೇಸಿಗೆ ಬಿಸಿಗೆ ತಂಪು ನೀಡಲು ಗೋದ್ರೇಜ್ ಕಂಪೆನಿ ಜೊತೆ ಕೈಜೋಡಿಸಿದ್ದು ಪ್ರೇಕ್ಷಕರಿಗೆ, ಅಭಿಮಾನಿಗಳಿಗೆ ಕೂಲ್ ಆಫರ್ ನೀಡುವುದಾಗಿ ಘೋಷಿಸಿದ್ದಾರೆ.

  ಬೇಸಿಗೆ ಕಾಲದಲ್ಲಿ ಗೊದ್ರೇಜ್ ಕಂಪೆನಿಯವರು "ಕೂಲ್ ಸಮ್ಮರ್ ಡ್ರೀಮ್ ಆಫರ್ " ಎಂಬ ಯೋಜನೆಯಡಿಯಲ್ಲಿ ಜನ ಸಾಮಾನ್ಯರ ಮನ ಸೆಳೆಯುವ ಆಫರ‍್ನೊಂದಿಗೆ ಕೂಲ್ ಚಿತ್ರಕ್ಕೆ ಪ್ರಚಾರ ಕೂಡಾ ನೀಡಲಾಗುತ್ತಿದೆ. ಏಪ್ರಿಲ್ 30 ರೊಳಗೆ ಗೋದ್ರೇಜ್ ಉತ್ಪನ್ನಗಳನ್ನು ಖರೀದಿಸುವ ಗ್ರಾಹಕರಿಗೆ ಗಣೇಶ್ ಅವರ ಜೊತೆಗೆ ಮುಂದಿನ ಸಿನಿಮಾದಲ್ಲಿ ಅಭಿನಯಿಸುವ ಅವಕಾಶ, 50 ಜನರಿಗೆ ಗಣೇಶ್ ಜೊತೆ ಭೋಜನಕೂಟ, 350 ಗ್ರಾಹಕರಿಗೆ ಉಚಿತವಾಗಿ ಕೂಲ್ ಚಿತ್ರ ವೀಕ್ಷಿಸುವ ಸದವಕಾಶ ಕೂಡಾ ನೀಡಲಾಗುತ್ತಿದೆ. ಇದರ ಜೊತೆಗೆ ಟೈಮೆಕ್ಸ್ ಗಡಿಯಾರ ಮುಂತಾದ ಇತರೆ ಆಕರ್ಷಕ ಉಡುಗೊರೆಗಳನ್ನು ಕೊಡುಗೆಯಾಗಿ ನೀಡಲು ಗೋದ್ರೇಜ್ ಮುಂದೆ ಬಂದಿದೆ.

  ವಿವಾದಗಳಿಂದ ಹಾಟ್ ಆದ ಕೂಲ್: ಚಿತ್ರದ ನಿರ್ಮಾಪಕಿ ಶಿಲ್ಪಾ ಗಣೇಶ್ ಮತ್ತು ನಿರ್ದೇಶಕ ಮಹೇಶ್ ನಡುವಿನ ತಿಕ್ಕಾಟಕ್ಕೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕದತಟ್ಟಿತ್ತು. ಕೂಲ್ ಚಿತ್ರದಿಂದ ಮುಸ್ಸಂಜೆ ಮಹೇಶ್ ಹೊರ ಬಂದ ಮೇಲೆ ಗಣೇಶ್ ಅವರು ನಾಯಕನ ಸ್ಥಾನಕ್ಕೇರಿದರು. ಗೋಲ್ಡನ್ ಸ್ಟಾರ್ ಗಣೇಶ್ ಗೆ ಸನಾ ಖಾನ್ ನಾಯಕಿಯಾಗಿದ್ದಾರೆ. ಗಜಿನಿ, ಎಂಧಿರನ್ ಖ್ಯಾತಿಯ ಆಂತೋನಿ ಅವರ ಸಂಕಲನವಿರುವ ಕೂಲ್ ಚಿತ್ರ ಕಾಮಿಡಿ ಕಮ್ ಲವ್ ಸ್ಟೋರಿ. ಛಾಯಾಗ್ರಾಹಕ ರತ್ನವೇಲು ರವರ ಛಾಯಾಗ್ರಹಣ. ಗಣೇಶ್ ಎಂದಿನಂತೆ ಕಾಲೇಜ್ ಹುಡ್ಗ, ಮೈಸೂರು, ಸಕಲೇಶಪುರ, ಊಟಿ, ಜೋರ್ಡಾನ್, ದುಬೈನಲ್ಲಿ ಶೂಟಿಂಗ್. ಮಳೆಯಲಿ ಜೊತೆಯಲಿ ಚಿತ್ರ ಯಶಸ್ಸಿನ ನಂತರ ಎರಡನೇ ಪ್ರಯತ್ನ.

  English summary
  After the initial hiccups and controversaries Golden Star Ganesh and his wife Shilpa are busy in promoting Kool movie. This is second home production Golden Movies from Actor Ganesh. Sana Khan is the leading lady. Ganesh has tied up with Godrej company to promote his movie .

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X