»   »  ನಿಲ್ಲದ ಸಿಂಹ ಘರ್ಜನೆ; 3 ರೀಮೇಕ್ ಗಳಲ್ಲಿ ವಿಷ್ಣು

ನಿಲ್ಲದ ಸಿಂಹ ಘರ್ಜನೆ; 3 ರೀಮೇಕ್ ಗಳಲ್ಲಿ ವಿಷ್ಣು

Subscribe to Filmibeat Kannada
Vishnuvardhan busy in remake films
ಅನೇಕ ಸಲ ಗಾಂಧಿನಗರ ವಿಷ್ಣು ಜಮಾನ ಮುಗಿಯಿತು ಎಂಬ ಭವಿಷ್ಯ ನುಡಿದ ಸಂದಂರ್ಭದಲ್ಲೆ ಸಿಂಹ ಗುಹೆಯಿಂದ ಹೊರಬಂದು ಘರ್ಜಿಸಿದೆ. ಈಗಲೂ ಅಷ್ಟೆ ಟಿ. ಎಸ್. ನಾಗಾಭರಣ ನಿರ್ದೇಶನದ 'ನಂ ಯಾಜಮಾನ್ರು' ಸೋತರು ಕೂಡ ವಿಷ್ಣು ಮಾತ್ರ ಮುಂದಿನ ಸಿನಿಮಾಗಳ ಬಗ್ಗೆ ಭರವಸೆಯನ್ನು ಹೊಂದಿದ್ದಾರೆ. ಏಕೆಂದರೆ ಅವು ರಿಮೇಕ್ ಅಥವಾ ಬೇರೆ ಭಾಷೆ ನಿರ್ದೇಶಕರು ನಿರ್ದೇಶಿಸುತ್ತಿರುವ ಸಿನಿಮಾಗಳು. ಹಿಂದೆ ಕೂಡ ಯಾಜಮಾನ (ವಾನೈತಿ ಪೋಲ) ಆಪ್ತಮಿತ್ರ (ಮಣಿಚಿತ್ರತಾಳ್) ಮೂಲಕ ಕಳೆದು ಹೋಗಿದ್ದತಮ್ಮ ಸ್ಟಾರ್ ಗಿರಿಯನ್ನು ಡಾ. ವಿಷ್ಣುವರ್ಧನ್ ಪಡೆದುಕೊಂಡಿದ್ದರು.

ಈಗಲೂ ಅಷ್ಟೆ ವಿಷ್ಣುವಿನ 199ನೇ ಚಿತ್ರ ಕೆ. ಮಂಜು ನಿರ್ಮಾಣದಲ್ಲಿ ದಿನೇಶ್‌ಬಾಬು ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ನಾನೇ ಬೇರೆ ನನ್ನ ಸ್ಟೈಲೇ ಬೇರೆ' ಮಲಯಾಳಂನಲ್ಲಿ ಮುಮ್ಮಟಿ ನಟಿಸಿದ ಹಿಟ್ ಸಿನಿಮಾ 'ರಾಜಮಾಣಿಕ್ಯಂ' ರೀಮೇಕ್. 200ನೇ ಚಿತ್ರ ಸ್ವಮೇಕ್ ಆದರೂ ಅದರ ನಿರ್ದೇಶನದ ಹೊಣೆಗಾರಿಕೆ ಮಾತ್ರ ತಮಿಳಿನ ಪಿ. ವಾಸು ಅವರದು. 'ಆಪ್ತರಕ್ಷಕ' ಹೆಸರಿನಲ್ಲಿ ಮೂಡಿಬರುತ್ತಿರುವ ಈ ಚಿತ್ರ 'ಆಪ್ತಮಿತ್ರ'ದ ಎರಡನೇ ಭಾಗವಾಗಿದ್ದು ಇದು ಎಷ್ಟರ ಮಟ್ಟಿಗೆ ಯಶಸ್ವಿಯಾಗುತ್ತದೆಂದು ಕಾದು ನೋಡಬೇಕಿದೆ.

ಇದರ ನಂತರ ನಾಣಿ (ಎಸ್.ನಾರಾಯಣ್) ಸುತ್ತುವ ರಿಮೇಕ್ ಕತೆಯಲ್ಲಿ 'ದೊಡ್ಮನುಷ್ಯ'ರಾಗಿ ಕಾಣಿಸಲ್ಲಿದ್ದಾರೆ. ಇದೊಂದು ರೀತಿ ಕೂಸು ಹುಟ್ಟುವ ಮುಂಚೆ ಕುಲಾವಿ ಹೋಲಿಸಿದಂತೆ. ಇನ್ನೂ ತಮಿಳಿನಲ್ಲಿ ಚಿತ್ರಕರಣ ಹಂತದಲ್ಲಿರುವ ವಿಕ್ರಮನ್ ನಿದೇಶನದ ವಿಜಯ್‌ಕಾಂತ್ ನಟಿಸುತ್ತಿರುವ 'ಮಾರ್ಯಾದೆ' ಚಿತ್ರದ ರೀಮೇಕ್. ಇದರ ಹಕ್ಕು ಪಡೆದುಕೊಂಡು ಬಂದಿರುವ ಮನುಷ್ಯ ಕೂಡ 'ಯಜಮಾನ' ಖ್ಯಾತಿಯ ನಿರ್ಮಾಪಕ ರೆಹಮಾನ್. ಒಟ್ಟಾರೆ ವಿಷ್ಣುವರ್ಧನ್ ಈ ಮೂರರಲ್ಲಿ ಒಂದಾದರು ಗೆಲ್ಲುತ್ತದೆಂಬ ಭರವಸೆ ಹೊಂದಿದ್ದಾರೆ. ಅವರ ಅಭಿಮಾನಿಗಳು ಎಲ್ಲಾ ಸಿನಿಮಾಗಳು ಗೆಲ್ಲಬಹುದೆಂಬ ನಿರೀಕ್ಷೆಯಲ್ಲಿ ಎದುರು ನೋಡುತ್ತಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿಷ್ಣುವರ್ಧನ್ ಅವರ 201ನೇ ಚಿತ್ರ ದೊಡ್ಮನುಷ್ಯ!
ಸಿಹಿ ದಿನೇಶ್ ಬಾಬುಗೆ ಕಹಿ ಚಂದ್ರುಗೆ
ತೆಲುಗಿನಲ್ಲಿ ಸಲ್ಲದ ನಿಖಿತಾಗೆ ಕನ್ನಡದಲ್ಲಿ ಅದೃಷ್ಟ
ಅಂದು ಆಪ್ತಮಿತ್ರ ಇಂದು ಆಪ್ತರಕ್ಷಕನಾದ ವಿಷ್ಣು
ಆಪ್ತರಕ್ಷಕ ವಿಷ್ಣುವರ್ಧನ್ ಗೆ ಜತೆಯಾದ ನಿಖಿತಾ
ನಾನು ಸಿಎಂ ಆದ್ರೆ ಕನ್ನಡ ಕಡ್ಡಾಯ ಮಾಡುವೆ, ವಿಷ್ಣು

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada