»   »  ಪ್ರೇಕ್ಷಕರ ಮುಂದೆ ಯೋಧ; ದರ್ಶನ್ ಏನಂತಾರೆ?

ಪ್ರೇಕ್ಷಕರ ಮುಂದೆ ಯೋಧ; ದರ್ಶನ್ ಏನಂತಾರೆ?

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಹೊಚ್ಚ ಹೊಸ ಚಿತ್ರ 'ಯೋಧ' ಶುಕ್ರವಾರ(ಜೂ.19) ತೆರೆ ಕಾಣಲಿದೆ. ಈ ಚಿತ್ರದ ಬಗ್ಗೆ ಮಾಸ್ ನಿರ್ದೇಶಕ ಓಂ ಪ್ರಕಾಶ್ ರಾವ್ ಸಾಕಷ್ಟು ಭರವಸೆಗಳನ್ನು ಇಟ್ಟುಕೊಂಡಿದ್ದಾರೆ. ತಮಿಳಿನ 'ಬೋಸ್' ಚಿತ್ರದ ರೀಮೇಕ್ ಯೋಧ. ತಮಿಳಿನಲ್ಲಿ ಶ್ರೀಕಾಂತ್ ಮತ್ತು ಸ್ನೇಹಾ ಅಭಿನಯಿಸಿದ್ದರು.

ಸತತ ಸೋಲುಗಳ ಸರಮಾಲೆಯಿಂದ ಕಂಗೆಟ್ಟಿರುವ ಕನ್ನಡ ಚಿತ್ರೋದ್ಯಮದಲ್ಲಿ 'ಯೋಧ' ಒಂಚೂರು ನಿರೀಕ್ಷೆ ಹುಟ್ಟುಸಿದ್ದಾನೆ. ಆಕ್ಷನ್ ಮತ್ತು ದೇಶಭಕ್ತಿಯ ಸಮ್ಮಿಳನವೇ ಯೋಧ. ಚಿತ್ರದಲ್ಲಿನ ಕಮರ್ಷಿಯಲ್ ಅಂಶಗಳನ್ನು ಪ್ರೇಕ್ಷಕ ಖಂಡತ ಇಷ್ಟಪಡುತ್ತಾನೆ. ಬಲವಾದ ಸಂಭಾಷಣೆ ಮತ್ತು ಫೈಟ್ಸ್ ಚಿತ್ರದ ಹೈಲೈಟ್ ಎನ್ನುತ್ತಾರೆ ದರ್ಶನ್.

ಚಿತ್ರದಲ್ಲಿ ನಮ್ಮದು ದೇಶಭಕ್ತ ಕುಟುಂಬ. ನಾನು ಕಮಾಂಡೋ ಪಾತ್ರವನ್ನು ನಿರ್ವಹಿಸಿದ್ದೇನೆ. ಈ ಹಿಂದೆ ಈ ರೀತಿಯ ಪಾತ್ರವನ್ನು ನಾನು ಮಾಡಿಲ್ಲ. ಪ್ರೇಕ್ಷಕರ ನಾಡಿಮಿಡಿತ ಹೇಗಿರುತ್ತದೆ ಎಂಬ ನಿರೀಕ್ಷೆಯಲ್ಲಿ ಇದ್ದೇನೆ. ಚಿತ್ರದ ಬಹಳಷ್ಟು ದೃಶ್ಯಗಳಲ್ಲಿ ಮಿಲಿಟರಿ ಸಮವಸ್ತ್ರದಲ್ಲಿ ಕಾಣಿಸುತ್ತೇನೆ. ಚಿತ್ರ ಎಲ್ಲೂ ಬೋರು ಹೊಡೆಸುವುದಿಲ್ಲ ಎಂಬುದು ದರ್ಶನ್ ಕೊಡುವ ವಿವರಣೆ.

ಈ ಹಿಂದೆ ದರ್ಶನ್ ಮತ್ತು ಓಂ ಪ್ರಕಾಶ್ ರಾವ್ ಜೋಡಿಯ ಕಲಾಸಿಪಾಳ್ಯ, ಅಯ್ಯ ಮತ್ತು ಮಂಡ್ಯ ಚಿತ್ರಗಳು ಬಾಕ್ಸಾಫೀಸ್ ನಲ್ಲಿ ಗೆದ್ದಿವೆ. ಹಾಗಾಗಿ ಈಗ ಬರುತ್ತಿರುವ ಯೋಧ ನ ಕಡೆಗೆ ಪ್ರೇಕ್ಷಕರು ಕುತೂಹಲದ ಕಣ್ಣು ನೆಟ್ಟಿದ್ದಾರೆ. ''ಚಿತ್ರದಲ್ಲಿ ಇಂಪಾದ ಹಾಡುಗಳಿವೆ. ಮುಖ್ಯವಾಗಿ ಚಿತ್ರದಲ್ಲಿನ ದೇಶಭಕ್ತಿ ಗೀತೆ ನನಗಿಷ್ಟ'' ಎನ್ನುತ್ತಾರೆ ಚಿತ್ರದ ನಾಯಕಿ ನಿಖಿತಾ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada