»   » ದಾವಣಗೆರೆಯಲ್ಲಿ ನಾಳೆ ಸಾರಥಿ ದರ್ಶನ್ ರೋಡ್ ಶೋ

ದಾವಣಗೆರೆಯಲ್ಲಿ ನಾಳೆ ಸಾರಥಿ ದರ್ಶನ್ ರೋಡ್ ಶೋ

Posted By:
Subscribe to Filmibeat Kannada
Darshan
ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ಬೆಂಗಳೂರಿನ 'ನರ್ತಕಿ' ಚಿತ್ರಮಂದಿರದಿಂದ 'ಸಾರಥಿ ರೋಡ್ ಶೋ' ಗೆ ಚಾಲನೆ ನೀಡಿದ್ದಾರೆ. ನಿರೀಕ್ಷೆಗೂ ಮೀರಿ ನೆರೆದಿದ್ದ ಅಸಂಖ್ಯಾತ ಜನರನ್ನು ನೋಡಿ ದರ್ಶನ್ ಹೃದಯ ತುಂಬಿ ಬಂದಿದೆ ಎಂದು ತಿಳಿದುಬಂದಿದೆ. ಸಾಕಷ್ಟು ಅಭಿಮಾನಿಗಳ ಜೊತೆ ದರ್ಶನ್ ಮಾತನಾಡಿದ್ದಾರೆ. ಸಾರಥಿಯ ಈ ರೋಡ್ ಶೋ ಸಾಕಷ್ಟು ಯಶಸ್ವಿಯಾಗುವ ಲಕ್ಷಣ ಬೆಂಗಳೂರಿನಲ್ಲೇ ಗೋಚರಿಸಿದೆ.

ಇಂದು ಬೆಂಗಳೂರಿನಿಂದ ಹೊರಟ ಸಾರಥಿ ರೋಡ್ ಶೋ ತಲುಪಿದ್ದು ಸೀದಾ ತುಮಕೂರಿಗೆ. ಅಲ್ಲಿ ತಮ್ಮಮೆಚ್ಚಿನ ನಟ ದರ್ಶನ್ ರನ್ನು ಖುದ್ದು ನೋಡಲು ನೆರೆದಿದ್ದರು ಅಸಂಖ್ಯಾತ ಅಭಿಮಾನಿಗಳು. ತುಮಕೂರಿನಲ್ಲಿ ಕೂಡ 'ಸಾರಥಿ' ಚಿತ್ರ ಯಶಸ್ವಿಯಾಗಿ ಓಡುತ್ತಿದ್ದು ಮುಂದೆ ಇನ್ನಷ್ಟು ಹೆಚ್ಚುವ ನಿರೀಕ್ಷೆ ಮೂಡಿಸಿದೆ. ಅಲ್ಲಿ ಅವರು ಸಿದ್ಧಗಂಗಾ ಮಠಕ್ಕೆ ಭೇಟಿ ನೀಡಿ ಶಿವಕುಮಾರ ಸ್ವಾಮಿಗಳ ಆಶೀರ್ವಾದ ಪಡೆದಿದ್ದಾರೆ.

ನಾಳೆ ಸಾರಥಿ ರೋಡ್ ಶೋ ನಡೆಯಲಿರುವ ಸ್ಥಳ ದಾವಣಗೆರೆ ಜಿಲ್ಲೆ. ಅಲ್ಲಿ ಬಹಳಷ್ಟು ಅಭಿಮಾನಿಗಳು ಸೇರುವ ನಿರೀಕ್ಷೆ ಇದೆ. ದಾವಣಗೆರೆಯಲ್ಲಿ ಕೂಡ ಸಾರಥಿ ಈಗಾಗಲೇ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ನಾಳೆ ಬೆಳಿಗ್ಗೆ ದರ್ಶನ್ ಭೇಟಿಗಾಗಿ ದಾವಣೆಗೆರೆ ನಗರ ಈಗಾಗಲೇ ಸಿದ್ಧಗೊಳ್ಳುತ್ತಿದ್ದು ಜಿಲ್ಲೆಯ ಹಳ್ಳಿಗಳಿಂದಲೂ ಜನ ತಂಡೋಪತಂಡವಾಗಿ ಬರುವ ನಿರೀಕ್ಷೆ ಮೂಡಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

English summary
Challenging Star Darshan started Sarathi road show from Bangalore. Today he went to tumkur and he goes to davanagere district tomorrow.
 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada