»   »  ದಾಂಪತ್ಯಕ್ಕೆ ಅಡಿಯಿಟ್ಟ ಮೋಹಕ ತಾರೆ ಶ್ರೀದೇವಿ!

ದಾಂಪತ್ಯಕ್ಕೆ ಅಡಿಯಿಟ್ಟ ಮೋಹಕ ತಾರೆ ಶ್ರೀದೇವಿ!

Subscribe to Filmibeat Kannada

ದಕ್ಷಿಣ ಭಾರತದ ಮೋಹಕ ತಾರೆ ಶ್ರೀದೇವಿ ಮತ್ತು ರಾಹುಲ್ ದಾಂಪತ್ಯ ಜೀವನಕ್ಕೆ ಗುರುವಾರ ಅಡಿಯಿಟ್ಟರು. ಇವರಿಬ್ಬರ ಮದುವೆ ಚೆನ್ನೈನಲ್ಲಿ ಜೂನ್ 18ರಂದು ನಡೆಯಿತು. ಮದುವೆ ಸಮಾರಂಭ ಚೆನ್ನೈನ ಶ್ರೀವಾರು ವೆಂಕಟಾಚಲಪತಿ ಪ್ಯಾಲೇಸ್ ನಲ್ಲಿ ಈ ಅದ್ದೂರಿಯಾಗಿ ನೆರವೇರಿತು.

ಜೂನ್ 21ರಂದು ಹೈದರಾಬಾದ್ ನಲ್ಲಿ ಶ್ರೀದೇವಿ ಮತ್ತು ರಾಹುಲ್ ಅವರ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. ಮದುವೆ ಕಾರ್ಯಕ್ರಮದಕ್ಕೆ ತಮಿಳು ಮತ್ತು ತೆಲುಗು ಚಿತ್ರೋದ್ಯಮದ ಖ್ಯಾತ ನಾಮರು ಆಗಮಿಸಿ ನೂತನ ದಂಪತಿಗಳಿಗೆ ಶುಭಕೋರಿದರು.

ಶ್ರೀದೇವಿ ಕನ್ನಡದಲ್ಲಿ ಚಿತ್ರಗಳಲ್ಲೂ ಅಭಿನಯಿಸಿದ್ದಾರೆ. ಶಿವರಾಜ್ ಕುಮಾರ್ ಜತೆ'ಕಾಂಚನ ಗಂಗ' ಹಾಗೂ ಶ್ರೀ ಮುರಳಿ ಜತೆ 'ಪ್ರೀತಿಗಾಗಿ' ಚಿತ್ರಗಳಲ್ಲಿ ನಟಿಸಿದ್ದಾರೆ. ರಜನಿಕಾಂತ್, ಕಮಲ ಹಾಸನ್, ಶರತ್ ಕುಮಾರ್, ವಿಕ್ರಂ, ಶ್ರೀದೇವಿ ಬೋನಿ ಕಪೂರ್, ಸ್ನೇಹಾ, ಸಂಗೀತಾ ಮುಂತಾದವರು ಮದುವೆಗೆ ಆಗಮಿಸಿದ್ದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada