»   » ಕಾಲ್ಗೆಜ್ಜೆಗೆ ಮಾತಿನ ಭಾಗ ಮುಕ್ತಾಯ

ಕಾಲ್ಗೆಜ್ಜೆಗೆ ಮಾತಿನ ಭಾಗ ಮುಕ್ತಾಯ

Posted By:
Subscribe to Filmibeat Kannada

ಜೀವನವನ್ನು ಗೆದ್ದರೆ, ಪ್ರೀತಿ ತಾನಾಗಿಯೇ ಹುಡುಕಿಕೊಂಡು ಬರುತ್ತದೆ ಎಂಬ ಸಂದೇಶವನ್ನಿಟ್ಟುಕೊಂಡು ಎಸ್ ಬಂಗಾರು 'ಕಾಲ್ಗೆಜ್ಜೆ' ಚಿತ್ರಕ್ಕೆ ಕಥೆ-ಚಿತ್ರಕಥೆ- ಸಂಭಾಷಣೆ ಬರೆದು ನಿರ್ದೇಶಿಸುತ್ತಿದ್ದಾರೆ. ಪ್ರೇಮಕಥೆಯೊಂದನ್ನು ಸಂಗೀತದ ಸಪ್ತ ಸ್ವರಗಳ ಮೂಲಕ ಹೇಳ ಹೊರಟಿರುವ ನಿರ್ದೇಶಕರು, ಕುಂದಾಪುರ, ಮೇಲುಕೋಟೆ, ಬಾಬಾಬುಡನ್‌ಗಿರಿ ಬೆಟ್ಟದಲ್ಲಿ ಈಗಾಗಲೇ ಯಶಸ್ವಿಯಾಗಿ ಚಿತ್ರೀಕರಣ ನಡೆಸಿದ್ದಾರೆ.

ಕಳೆದ ವಾರ ಕಂಠೀರವ ಸ್ಟುಡಿಯೋದಲ್ಲಿ ಶರಣ್, ತಬಲ ನಾಣಿ ಅಭಿನಯದ ಹಾಸ್ಯ ದೃಶ್ಯಗಳ ಚಿತ್ರೀಕರಣದೊಂದಿಗೆ ಮಾತಿನ ಭಾಗವನ್ನು ಸಂಪೂರ್ಣಗೊಳಿಸಿದ್ದಾರೆ. ಈ ಚಿತ್ರದಲ್ಲಿ ನಾಯಕಿಯಾಗಿ ರೂಪಿಕಾ ಹಾಗೂ ನಾಯಕನಾಗಿ ವಿಶ್ವಾಸ್, ಅಭಿನಯಿಸುತ್ತಿದ್ದು, ರಂಗಾಯಣರಘು, ಪ್ರವಿತ್ರಾ ಲೋಕೇಶ್, ವಿ. ಮನೋಹರ್, ಎಸ್. ಮಹೇಂದರ್, ಪ್ರಮುಖ ತಾರಾಗಣದಲ್ಲಿದ್ದಾರೆ.

ಗಂಧರ್ವರ ಸಾಹಿತ್ಯ ಹಾಗೂ ಸಂಭಾಷಣೆ, ವೀನಸ್ ಮೂರ್ತಿಯವರ ಛಾಯಾಗ್ರಹಣ ಈ ಚಿತ್ರಕ್ಕಿದೆ. ಭ್ರೈಟ್ ಎಂಟರ್‌ಟೈನ್ ಮೆಂಟ್ ಲಾಂಛನದಲ್ಲಿ ಉದ್ಯಮಿಯಾದ ಎಂ. ನಾಗಭೂಷಣ್ ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಭೈರೇಗೌಡ ಎಂ. ಕಾರ್ಯಕಾರಿ ನಿರ್ಮಾಪಕರು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada