For Quick Alerts
  ALLOW NOTIFICATIONS  
  For Daily Alerts

  ಚಾಲೆಂಜಿಂಗ್ ಸ್ಟಾರ್ 'ಪ್ರಿನ್ಸ್ ' ಮಾತು ಬಂದ ಸಮಯ

  By Rajendra
  |

  ಮೊನ್ನೆಯಷ್ಟೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟುಹಬ್ಬ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ. ಇದೇ ಖುಷಿಯಲ್ಲಿ ಅವರ ಪ್ರಿನ್ಸ್ ಚಿತ್ರದಬಾಕಿ ಕೆಲಸಗಳು ಗರಿಗೆದರಿವೆ.

  ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್‌ನಾಗರಾಜ್ ನಿರ್ಮಿಸುತ್ತಿರುವ 'ಪ್ರಿನ್ಸ್ ಚಿತ್ರಕ್ಕೆ ಶ್ರೀಚಾಮುಂಡೇಶ್ವರಿ ಸ್ಟುಡಿಯೋದಲ್ಲಿ ಮಾತಿನ ಜೋಡಣೆ ನಡೆಯುತ್ತಿದೆ.

  ಪ್ರಿನ್ಸ್ ಚಿತ್ರಕ್ಕೆ ಆಕ್ಷನ್, ಕಟ್ ಹೇಳುತ್ತಿರುವವರು ನಿರ್ದೇಶಕ ಓಂಪ್ರಕಾಶ್‌ರಾವ್. ಈ ಚಿತ್ರದ ವಿಶೇಷ ಎಂದರೆ, ಹೆಚ್ಚಿನ ಭಾಗದ ಚಿತ್ರೀಕರಣ ಸಾಂಸ್ಕೃತಿಕ ನಗರಿ ಮೈಸೂರಿನಲ್ಲೇ ನಡೆದಿರುವುದು. ಐದು ಹಾಡುಗಳ ಪೈಕಿ ಎರಡು ಹಾಡುಗಳ ಚಿತ್ರೀಕರಣ ಕರುನಾಡಿನಲ್ಲೇ ನಡೆಯುತ್ತದೆ. 'ಪ್ರಿನ್ಸ್'ನ ಮೂರು ಹಾಡುಗಳು ವಿದೇಶದಲ್ಲಿ ಚಿತ್ರೀಕರಣಗೊಳ್ಳಲಿದೆ ಎಂದಿದ್ದಾರೆ ಓಂ.

  ಈ ಚಿತ್ರದಲ್ಲಿ ಇಬ್ಬರು ನಾಯಕಿಯರು ಜನ್ನಿಫರ್ ಕೊತ್ವಾಲ್ ಹಾಗೂ ನಿಖಿತಾ. ಅವಿನಾಶ್, ಶೊಭರಾಜ್, ಆದಿಲೋಕೇಶ್, ಅವಿನಾಶ್, ಸಿಹಿಕಹಿಚಂದ್ರು, ರಂಗಾಯಣರಘು, ಶೇಖರ್‌ಕೋಟ್ಯಾನ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸುತ್ತಿರುವ ಕಲಾವಿದರು.

  ಇನ್ನು ತಾಂತ್ರಿಕ ಬಳಗದ ಕಡೆಗೆ ಕಣ್ಣಾಯಿಸಿದರೆ, ಎಂ.ಎಸ್.ರಮೇಶ್ ಸಂಭಾಷಣೆ ಬರೆದಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣರ ಸಂಗೀತವಿದೆ. ವೀನಸ್‌ಮೂರ್ತಿ ಛಾಯಾಗ್ರಹಣ, ಲಕ್ಷ್ಮಣ್‌ರೆಡ್ಡಿ ಸಂಕಲನ, ಪಳನಿರಾಜ್ ಮತ್ತು ರವಿವರ್ಮ ಸಾಹಸ ನಿರ್ದೇಶನ 'ಪ್ರಿನ್ಸ್ ಚಿತ್ರಕ್ಕಿದೆ.

  English summary
  Dubbing work is in progress for Challenging Star Darshan's forthcoming release Prince which is being produced by Sandesh Nagaraj under Sandesh Combines banner. The shooting of the entire film was complete but for the canning of a song. Om PrakashRao is the director.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X