»   » ಕನ್ನಡದ ತ್ರಿಡಿ ಚಿತ್ರದಲ್ಲಿ ರಮ್ಯಾ ಮತ್ತು ಉಪೇಂದ್ರ

ಕನ್ನಡದ ತ್ರಿಡಿ ಚಿತ್ರದಲ್ಲಿ ರಮ್ಯಾ ಮತ್ತು ಉಪೇಂದ್ರ

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಹಾಗೂ ರಮ್ಯಾ ಮುಖ್ಯಭೂಮಿಕೆಯಲ್ಲಿರುವ 'ಕಠಾರಿ ವೀರ ಸುರಸುಂದರಾಂಗಿ' ಬಹುಶಃ ಇವರಿಬ್ಬರು ಅಭಿನಯದ ಮೊಟ್ಟಮೊದಲ ತ್ರಿಡಿ ಚಿತ್ರವಾಗಲಿದೆ. ಈ ಬಗ್ಗೆ ನಟಿ ರಮ್ಯಾ ಸಣ್ಣ ಸುಳಿವು ನೀಡಿದ್ದಾರೆ. ಈ ಚಿತ್ರಕ್ಕೆ ಈ ಹಿಂದೆ 'ಯಮೇಂದ್ರ ಉಪೇಂದ್ರ' ಎಂದು ಹೆಸರಿಡಲಾಗಿತ್ತು. ಮುನಿರತ್ನ ನಿರ್ಮಿಸುತ್ತಿರುವ ಚಿತ್ರಕ್ಕೆ ಸುರೇಶ್ ಕೃಷ್ಣ ಆಕ್ಷನ್ ಕಟ್ ಹೇಳಲಿದ್ದಾರೆ.

ಇತ್ತೀಚೆಗೆ ಈ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ನಡೆಯಿತು. ರಾಮೋಜಿ ಫಿಲಂಸಿಟಿಯಲ್ಲಿ ಇಂದ್ರಲೋಕದ ಅದ್ಭುತ ಸೆಟ್ ಹಾಕಲಾಗಿತ್ತು. ಚಿತ್ರದ ನಿರ್ಮಾಪಕರು ಈ ಚಿತ್ರ ತ್ರಿಡಿ ಎಂಬುದನ್ನು ಗುಟ್ಟಾಗಿ ಇಟ್ಟಿದ್ದರು. ಆದರೆ ರಮ್ಯಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬಹಿರಂಗಗೊಳಿಸಿದ್ದಾರೆ.

"ತ್ರಿಡಿ ಕ್ಯಾಮೆರಾದಲ್ಲಿ ಚಿತ್ರೀಕರಿಸಿದ ದೃಶ್ಯವನ್ನೊಮ್ಮೆ ನೋಡಿ ಕ್ಲೀನ್ ಬೌಲ್ಡ್ ಆದೆ. ವಾವ್ ಎನ್ನುವಂತಿದೆ. ಪ್ರತಿ ದೃಶ್ಯವನ್ನು ನಾವು ತ್ರಿಡಿ ಗ್ಲಾಸ್‌ನಲ್ಲಿ ವೀಕ್ಷಿಸಿದೆವು. ಪ್ರತಿಯೊಬ್ಬರು ಎಕ್ಸೈಟ್ ಆಗಿದ್ದೇವೆ. ತ್ರಿಡಿ ಚಿತ್ರದಲ್ಲಿ ಅಭಿನಯಿಸುತ್ತಿರುವುದಕ್ಕೆ ತುಂಬಾ ಖುಷಿಯಾಗುತ್ತಿದೆ" ಎಂದಿದ್ದಾರೆ ರಮ್ಯಾ.

ಹೈದರಾಬಾದ್‌ನ ರಾಮೋಜಿ ಫಿಲಂ ಸಿಟಿಯಲ್ಲಿ ರಮ್ಯಾ ಹಾಗೂ ಉಪೇಂದ್ರ ಅವರ ಒಂದು ಹಾಡನ್ನು ಚಿತ್ರೀಕರಿಸಲಾಗಿದೆ. ಎರಡನೇ ಹಂತದ ಚಿತ್ರೀಕರಣದಲ್ಲಿ ಯಮಲೋಕದ ಸೆಟ್ ಹಾಕಲಾಗುವುದು ಎಂದಿದೆ ಚಿತ್ರತಂಡ. (ಒನ್‌ಇಂಡಿಯಾ ಕನ್ನಡ)

English summary
Real Star Upendra and Golden Girl Ramya lead movie Kataari Veera Sura Sundaraangi to be the first 3D film to be made in Kannada. Ramya tweets: "Just watched a scene we shot with the 3D camera & Im bowled over! Everything is just WOW! We watch every shot with our 3D glasses! Everybody is excited!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada