»   » ಈ ವಾರ ತೆರೆಗೆ ಪುನೀತ್ ಅಭಿನಯದ 'ಪೃಥ್ವಿ'

ಈ ವಾರ ತೆರೆಗೆ ಪುನೀತ್ ಅಭಿನಯದ 'ಪೃಥ್ವಿ'

Posted By:
Subscribe to Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಬಹುನಿರೀಕ್ಷಿತ 'ಪೃಥ್ವಿ' ಚಿತ್ರ ಈ ವಾರ ತೆರೆಕಾಣಲಿದೆ. 'ಸವಾರಿ' ಖ್ಯಾತಿಯ ಜಾಕಬ್ ವರ್ಗೀಸ್ ನಿರ್ದೇಶನ ಹಾಗೂ ಸ್ವತಂತ್ರ ಕತೆ ಚಿತ್ರಕ್ಕಿದೆ. ಚಿತ್ರದ ಎರಡು ಹಾಡುಗಳು ಈಗಾಗಲೆ ಸಾಕಷ್ಟು ಜನಪ್ರಿಯವಾಗಿದ್ದು ಟಾಪ್ ಟೆನ್ ಹಾಡುಗಳಲ್ಲಿ ಸ್ಥಾನಪಡೆದಿವೆ.

ಉದಯೋನ್ಮುಖ ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ ಅವರ ಸಂಗೀತ ಸಂಯೋಜನೆ 'ಪೃಥ್ವಿ' ಚಿತ್ರಕ್ಕಿದೆ. ಕಮಲ ಹಾಸನ್ ಅವರ ಮಗಳು ಶ್ರುತಿ ಹಾಸನ್ ಇದೇ ಮೊದಲ ಬಾರಿಗೆ ಕನ್ನಡದಲ್ಲಿ ಹಾಡಿರುವ ಹಾಡೊಂದು ಪೃಥ್ವಿ ಚಿತ್ರದಲ್ಲಿದೆ. ಹೀಗೆ ಸಾಕಷ್ಟು ವಿಶೇಷತೆಗಳೊಂದಿಗೆ ಪೃಥ್ವಿ ಚಿತ್ರ ತೆರೆಗೆ ಬರುತ್ತಿದೆ.

ಪುನೀತ್ ಅಭಿನಯದ 'ರಾಜ್' ಮತ್ತು 'ರಾಮ್' ಎರಡು ಚಿತ್ರಗಳು ಯಶಸ್ಸು ದಾಖಲಿಸಿದ್ದವು. ಪೃಥ್ವಿ ಚಿತ್ರದ ಬಗೆಗಿನ ನಿರೀಕ್ಷೆಗಳು ಸಹ ಮುಗಿಲು ಮುಟ್ಟಿವೆ. ಪೃಥ್ವಿ ಮೂಲಕ ಪುನೀತ್ ಮತ್ತೊಂದು ಹಿಟ್ ಚಿತ್ರ ಕೊಡಲಿದ್ದಾರೆ ಎಂಬ ವಿಶ್ವಾಸದಲ್ಲಿ ನಿರ್ಮಾಪಕರಾದ ಸೂರಪ್ಪ ಬಾಬು ಹಾಗೂ ಎನ್ ಎಸ್ ರಾಜಕುಮಾರ್ ಇದ್ದಾರೆ.

'ಮಿಲ ನ' ದಂತಹ ಹಿಟ್ ಚಿತ್ರ ಕೊಟ್ಟಂತಹ ಪುನೀತ್ ಮತ್ತು ಪಾರ್ವತಿ ಮೆನನ್ ಮತ್ತೆ ಒಂದಾಗಿ ನಟಿಸಿರುವ ಚಿತ್ರ ಪೃಥ್ವಿ. ಚಿತ್ರದ ತಾರಾಗಣದಲ್ಲಿ ಶ್ರೀನಿವಾಸಮೂರ್ತಿ, ಸತ್ಯಪ್ರಿಯ, ರಮೇಶ್‌ಭಟ್, ಪದ್ಮಜಾ ರಾವ್, ಅವಿನಾಶ್, ಶಿವಾಜಿರಾವ್‌ಜಾಧವ್, ಜಾನ್ ವಿಜಯ್, ಜಾನ್ ಅನೀಸ್, ಕುಕ್ಕಿನ್ (ಬಾಲಿವುಡ್ ಖ್ಯಾತಿ) ಮುಂತಾದವರಿದ್ದಾರೆ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada