»   » 'ಆಪ್ತರಕ್ಷಕ'ಮುಗಿಲು ಮುಟ್ಟಿದ ಸಂಭ್ರಮ

'ಆಪ್ತರಕ್ಷಕ'ಮುಗಿಲು ಮುಟ್ಟಿದ ಸಂಭ್ರಮ

Posted By:
Subscribe to Filmibeat Kannada

ಅಭಿನಯ ಭಾರ್ಗವ ವಿಷ್ಣುವರ್ಧನ್ ಅಗಲಿಕೆಯ ನಂತರ ಬಿಡುಗಡೆಗೊಳ್ಳುತ್ತಿರುವ ಎರಡನೇ ಚಿತ್ರ 'ಆಪ್ತರಕ್ಷಕ' ಇಂದು ರಾಜ್ಯಾದ್ಯಂತ ತೆರೆ ಕಂಡಿದೆ. ವಿಷ್ಣು ಅವರ 200ನೇ ಹಾಗೂ ಕೊನೇ ಚಿತ್ರ ಇದಾಗಿದ್ದು ರಾಜ್ಯದ73 ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ತೆರೆಕಾಣುತ್ತಿದೆ.

ಅತ್ಯಾಧುನಿಕ ತಂತ್ರಜ್ಞಾನಗಳನ್ನೊಳಗೊಂಡ ಈ ಚಿತ್ರ ಬಿಡುಗಡೆ ಹಿನ್ನೆಲೆಯಲ್ಲಿ ರಾಜಧಾನಿ ಬೆಂಗಳೂರು ಸೇರಿದಂತೆ ಬಿಡುಗಡೆ ಗೊಳ್ಳುತ್ತಿರುವ ಚಿತ್ರಮಂದಿರಗಳಲ್ಲಿ ವಿಷ್ಣು ಕಟೌಟ್, ಬ್ಯಾನರ್, ಫ್ಲೆಕ್ಸ್ ಗಳು ರಾರಾಜಿಸುತ್ತಿವೆ. ರಾಜಧಾನಿ ಬೆಂಗಳೂರು ಒಂದರಲ್ಲೇ 30ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆ ಗೊಳ್ಳುತ್ತಿದ್ದು ನರ್ತಕಿ, ಈಶ್ವರಿ, ಉಮಾ, ವೀರಭದ್ರೇಶ್ವರ ಮುಂತಾದ ಚಿತ್ರಮಂದಿರಗಳಲ್ಲಿ ಅಭಿಮಾನಿಗಳು ಟಿಕೆಟ್ ಗಾಗಿ ಹರಸಾಹಸ ಪಡುತ್ತಿದ್ದಾರೆಂದು ವರದಿಯಾಗಿದೆ.

ವಿಷ್ಣು ಅಗಲಿಕೆಯ ನಂತರ ಬಿಡುಗಡೆಗೊಳ್ಳುತ್ತಿರುವ ಚಿತ್ರವಾಗಿರುವುದರಿಂದ ಅಭಿಮಾನಿಗಳಲ್ಲಿ ಸಹಜವಾಗಿ ಕುತೂಹಲ, ಆಸಕ್ತಿ ಮಡುಗಟ್ಟಿದೆ. ಆಪ್ತಮಿತ್ರ ಚಿತ್ರದಂತೆ ಈ ಚಿತ್ರವೂ ಭರ್ಜರಿ ಯಶಸ್ಸು ಕಂಡು ನಷ್ಟ ದಲ್ಲಿರುವ ಕನ್ನಡ ಚಿತ್ರದ್ಯೋಮಕ್ಕೆ ಹೊಸ ಹುಮ್ಮಸ್ಸು ತರಲೆಂದು ಎಲ್ಲಾ ಅಭಿಮಾನಿಗಳ ಹಾರೈಕೆ. 'ಆಪ್ತರಕ್ಷಕ' ಚಿತ್ರದ ಚಿತ್ರವಿಮರ್ಶೆಗಾಗಿ ನಿರೀಕ್ಷಿಸಿ.

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada