twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಚಲನಚಿತ್ರದ ಫೋಟೋ ಮೆರವಣಿಗೆಗೆ ಲಿಮ್ಕಾ ಗೌರವ

    By Super
    |

    ಬೆಂಗಳೂರು, ಸೆ. 19 : ಛಾಯಾಗ್ರಾಹಕ, ಪತ್ರಕರ್ತ ಕೆ.ಎಂ. ವೀರೇಶ್ ಅವರ ಫೋಟೋ ಪ್ರೀತಿಯ ಅವಿರತ ಶ್ರಮಕ್ಕೆ ಇದೀಗ ದಾಖಲೆಯ ಗೌರವ ಪ್ರಾಪ್ತವಾಗಿದೆ. ಕನ್ನಡ ಚಿತ್ರರಂಗದಿಂದ ಆಯ್ದ ಅಪರೂಪದ, ಅಲಭ್ಯ ಚಿತ್ರಗಳನ್ನು ರಾಶಿ ರಾಶಿ ಸಂಗ್ರಹಿಸಿದ ಅವರ ಹೆಸರು ಲಿಮ್ಕಾ ಬುಕ್ ಆಫ್ ರಿಕಾಡ್ಸ್‌ನ ಒಂದು ಭಾಗವಾಗಿದೆ. ವೀರೇಶ್ ಅವರಿಗೆ ಶುಭಾಶಯಗಳು :

    1934ರಿಂದ 2006ರವರೆಗೆ ತೆರೆಕಂಡ ನೂರಾರು ಕನ್ನಡ ಚಿತ್ರಗಳ ಫೋಟೋಗಳನ್ನು ಆಸಕ್ತಿಯಿಂದ ಸಂಗ್ರಹಿಸಿ ಅವುಗಳ ಪ್ರದರ್ಶನವನ್ನು ಏರ್ಪಡಿಸಿದ್ದ ವೀರೇಶ್ ಮತ್ತು ಅವರು ಪ್ರಕಟಿಸುವ ಚಿತ್ರಲೋಕ.ಡಾಟ್ ಕಾಮ್ ವೆಬ್‌ಪುಟಗಳನ್ನು ತಮ್ಮ ದಾಖಲೆ ಪುಸ್ತಕಗಳ 2008ರ ಆವೃತ್ತಿಯಲ್ಲಿ, ಕನ್ನಡ ಚಲನಚಿತ್ರ ವಿಭಾಗದಲ್ಲಿ ಸೇರ್ಪಡೆ ಮಾಡುವುದಾಗಿ ಲಿಮ್ಕಾ ಬುಕ್ ತಿಳಿಸಿದೆ.

    2006ರ ಆಗಸ್ಟ್‌ನಲ್ಲಿ ವೀರೇಶ್ ಅವರು ಬೆಂಗಳೂರಿನಲ್ಲಿ ಏಳು ದಿವಸಗಳ ಕನ್ನಡ ಚಲನಚಿತ್ರ ಫೋಟೋ ಪ್ರದರ್ಶನ ಏರ್ಪಡಿಸಿದ್ದರು. ಆ ಪ್ರದರ್ಶನವನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಪಾರ್ವತಮ್ಮ ರಾಜ್ ಕುಮಾರ್ ಮತ್ತಿತರ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟಿಸಿದ್ದರು. ಪ್ರದರ್ಶನದಲ್ಲಿ ಇಡಲಾಗಿದ್ದ 2650 ಚಿತ್ರಗಳು ಕನ್ನಡ ಚಿತ್ರರಸಿಕರ ಮನಸೂರೆಗೊಂಡಿದ್ದವು.

    ಕನ್ನಡ ಚಿತ್ರಗಳ ಫೋಟೋ ಪ್ರೇಮಿಗಳಿಗಾಗಿ ನಾಲ್ಕು ಚಿತ್ರಗಳು : ಸತಿ ಸುಲೋಚನ (1934), ಭಲೇ ಜೋಡಿ (1970), ಭೂತಯ್ಯನ ಮಗ ಅಯ್ಯು (1974), ಮೇಯರ್ ಮತ್ತಣ್ಣ, (1977)

    ಕನ್ನಡ ಚಿತ್ರರಂಗದ ಇತಿಹಾಸ ಅಕ್ಷರಗಳಲ್ಲಿ, ಚಿತ್ರಗಳಲ್ಲಿ, ಮರುಪ್ರದರ್ಶನಗಳಲ್ಲಿ, ಉತ್ಸವಗಳಲ್ಲಿ ಮತ್ತು ಸ್ಪರ್ಧೆಗಳಲ್ಲಿ, ನೆನಪಿನಂಗಳದಲ್ಲಿ ಸದಾಕಾಲ ವಿಹರಿಸುತ್ತಿರಬೇಕು ಎಂದು ಆಶಿಸುವವರ ಸಂಖ್ಯೆ ದೊಡ್ಡದು. ಅಂಥವರ ಸಂಭ್ರಮವನ್ನು ಲಿಮ್ಕಾ ದಾಖಲೆ ಗೌರವ ವೃದ್ಧಿಸಿದೆ ಎಂದರೆ ಅತಿಶಯೋಕ್ತಿಯಾಗದು.

    English summary
    Limca book of records lists Chitraloka photo exhibition 2006. K.M. Veeresh of chitraloka had organized an exhibition of 2650 Kannada Movie images in Bangalore.
    Tuesday, June 5, 2012, 15:24
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X