»   » ರೆಬೆಲ್ ಸ್ಟಾರ್ ಅಂಬಿ ರಾಜೀನಾಮೆ ವಾಪಸ್

ರೆಬೆಲ್ ಸ್ಟಾರ್ ಅಂಬಿ ರಾಜೀನಾಮೆ ವಾಪಸ್

Posted By:
Subscribe to Filmibeat Kannada

ಕಲಾವಿದರ ಸಂಘದ ಅಧ್ಯಕ್ಷ ಸ್ಥಾನಕ್ಕೆ ನೀಡಿದ್ದ ರಾಜೀನಾಮೆಯನ್ನು ಅಂಬರೀಷ್ ಹಿಂಪಡೆದಿದ್ದಾರೆ. ದರ್ಶನ್, ಸುದೀಪ್, ಉಪೇಂದ್ರ, ರಾಘವೇಂದ್ರ ರಾಜ್‌ಕುಮಾರ್, ಸರೋಜಾದೇವಿ ಮೊದಲಾದವರು ಅಂಬಿ ನಿವಾಸಕ್ಕೆ ಶನಿವಾರ ತೆರಳಿ ಅವರೊಡನೆ ಸಮಾಲೋಚಿಸಿದರು.

ಮೊದಲಿಗೆ ಸಮ್ಮತಿಸದ ಅಂಬಿ, ಎಲ್ಲರ ಆಗ್ರಹಪೂರ್ವಕ ಒತ್ತಾಯಕ್ಕೆ ಮಣಿದರು. ಈ ಸಂದರ್ಭದಲ್ಲಿ ತಾರಾ, ಸುಧಾರಾಣಿ, ಪೂಜಾ ಗಾಂಧಿ, ಐಂದ್ರಿತಾ ರೇ ಮತ್ತಿತರರು ಇದ್ದರು. ಕೊನೆಗೂ ಬಿಸಿ ಮುಟ್ಟಿತು!: ಮೊನ್ನೆ ನಡೆದ ರಾಜ್ಯೋತ್ಸವ - ಸನ್ಮಾನ ಸಮಾರಂಭಕ್ಕೆ ಗೈರು ಹಾಜರಾಗಿದ್ದ
ಹೆಚ್ಚಿನ ಕಲಾವಿದರಿಗೆ ಅಂಬಿ ರಾಜೀನಾಮೆ ಬಿಸಿ ಮುಟ್ಟಿಸಿದೆ. ಅವರೆಲ್ಲರೂ ಮರುದಿನವೇ ಅಂಬಿ ಮನೆಗೆ ತೆರಳಿ ಸಾರಿ ಕೇಳಿದ್ದಾರೆ.

ಅಂಬಿ ಹೇಳಿದ್ದು:
ಎಲ್ಲರೂ ಒಟ್ಟಿಗೇ ಇದ್ದು ಕೆಲಸ ಮಾಡೋಣ. ಕಲಾವಿದರ ಸಂಘದ ಕಟ್ಟಡ ಕಟ್ಟೋಣ. ಅದು ರಾಜಣ್ಣನ ಕನಸು. ಕಲಾವಿದರ ಸಂಘವನ್ನು ಇನ್ನಷ್ಟು ಗಟ್ಟಿ ಮಾಡೋಣ. ಒಗ್ಗಟ್ಟು ಪ್ರದರ್ಶಿಸೋಣ. ಇನ್ನು ಎರಡು ಮೀಟಿಂಗ್ ಕರೆದು, ನೋಡ್ತೀನಿ. ಅಲ್ಲಿಯೂ ಕಲಾವಿದರು ಕೈ ಕೊಟ್ರೆ ಖಂಡಿತ ಹಿಂದೆ ಸರೀತೀನಿ. ನಾನೊಬ್ನೇ ಎಷ್ಟು ಅಂತ ಒದ್ದಾಡ್ಲಿ. ಎಲ್ರಿಗೂ ಇದೇ ಲಾಸ್ಟ್ ಛಾನ್ಸ್!

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada