»   »  ಅರುಂಧತಿ ಎಂಬ ಹೊಸ ಚಿತ್ರದಲ್ಲಿ ದುನಿಯಾ ರಶ್ಮಿ

ಅರುಂಧತಿ ಎಂಬ ಹೊಸ ಚಿತ್ರದಲ್ಲಿ ದುನಿಯಾ ರಶ್ಮಿ

Subscribe to Filmibeat Kannada
Duniya Rashmi's new film Arundhati
'ಅರುಂಧತಿ' ಎಂಬ ಹೊಸ ಚಿತ್ರಕ್ಕೆ ದುನಿಯಾ ರಶ್ಮಿ ಸಹಿ ಮಾಡಿದ್ದಾರೆ. ಈ ಚಿತ್ರವನ್ನು ಬಿ.ಆರ್.ಕೇಶವ ನಿರ್ದೇಶಿಸುತ್ತಿದ್ದು, 'ಮೃಗ' ಚಿತ್ರದವನ್ನು ಮುಗಿಸಿರುವ ಬಿ.ಆರ್.ಕೆ ಚಿತ್ರಕ್ಕೆ ಕ್ಯಾಮೆರಾ ಹಿಡಿಯಲಿದ್ದಾರೆ.

ಇತ್ತೀಚೆಗೆ ತೆಲುಗಿನಲ್ಲಿ ತೆರೆಕಂಡ 'ಅರುಂಧತಿ' ಎಂಬ ಚಿತ್ರಕ್ಕೂ ಕನ್ನಡ ಅರುಂಧತಿ ಚಿತ್ರಕ್ಕೂ ಯಾವುದೇ ಸಂಬಂಧ ಇಲ್ಲವಂತೆ. ಇದೊಂದು ಅಪ್ಪಟ ಕಮರ್ಷಿಯಲ್ ಚಿತ್ರವಾದರೂ ಕೊಂಚ ಮಾಟ ಮಂತ್ರದ ಎಳೆಯನ್ನು ಹೊಂದಿದೆಯಂತೆ.

ನಟಿ ರಶ್ಮಿ ಕತೆ ಕೇಳಿದ ಮರುಕ್ಷಣವೇ ಕಾಲ್ ಶೀಟ್ ಕೊಟ್ಟಿದ್ದಾರೆ. ಇನ್ನೂ ಒಂದಿಷ್ಟು ಪಾತ್ರಗಳ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಶ್ಮಿ ನಟಿಸುತ್ತಿರುವ ವೆಂಕಿ ಹಾಗೂ ಮುರಾರಿ ಚಿತ್ರಗಳ ಚಿತ್ರೀಕರಣ ಮುಗಿದಿವೆ. ಯುಗಾದಿಗೆ 'ಅರುಂಧತಿ' ಚಿತ್ರ ಸೆಟ್ಟೇರಲಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಇದೂ ಓದಿ
ವಿಮರ್ಶೆ:ಅಕ್ಕ ತ೦ಗಿಯರ ಈ ಬ೦ಧ...
ಸೆನ್ಸಾರ್ ಮಂದಾಕಿನಿಗೆ ಬಿಸಿ ಮುಟ್ಟಿಸಿದ್ದು ಯಾಕೆ?
ಪೂಜಾಗಾಂಧಿ ನಟನೆಯ ಅನು ಟ್ರೈಲರ್
ತೆಲುಗು ಚಿತ್ರಸೀಮೆಗೆ ದುನಿಯಾ ಪಯಣ

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada