»   »  'ಸರ್ಕಸ್ 'ಚಿತ್ರ ತಕ್ಕ ಪಾಠ ಕಲಿಸಿದೆ: ದಯಾಳ್

'ಸರ್ಕಸ್ 'ಚಿತ್ರ ತಕ್ಕ ಪಾಠ ಕಲಿಸಿದೆ: ದಯಾಳ್

Subscribe to Filmibeat Kannada
Director Dayal Padnabhan
ನಿರ್ದೇಶಕ ದಯಾಳ್ ಪದ್ಮನಾಭನ್ ಅವರ 'ಸರ್ಕಸ್' ಚಿತ್ರ ಸೆಟ್ಟೇರಿದಾಗ ಚಿತ್ರೋದ್ಯಮದಲ್ಲಿ ಹೊಸ ಉತ್ಸಾಹ ಮೂಡಿಸಿತ್ತು. ಆದರೆ ಸರ್ಕಸ್ ಚಿತ್ರಬಿಡುಗಡೆಯಾಗಿಬಾಕ್ಸಾಫೀಸ್ ನಲ್ಲಿ ಮಕಾಡೆ ಮಲಗಿದ ನಂತರ ನಟ ಗಣೇಶ್ ಸೇರಿದಂತೆ ದಯಾಳ್ ಅವರಿಗೆ ಆಘಾತವಾಯಿತು.

''ಆ ಆಘಾತದಿಂದ ಚೇತರಿಸಿಕೊಂಡು 'ಕದ್ದು ಮುಚ್ಚಿ' ಚಿತ್ರವನ್ನು ಕೈಗೆತ್ತಿಕೊಂಡಿದ್ದೇನೆ. ಸರ್ಕಸ್ ಚಿತ್ರ ಒಳ್ಳೆ ಪಾಠ ಕಲಿಸಿದೆ. ಈ ಹಿಂದಿನ ತಪ್ಪುಗಳು ಈ ಚಿತ್ರದಲ್ಲಿ ಮರುಕಳಿಸದಂತೆ ಎಚ್ಚರಿಕೆ ವಹಿಸುತ್ತೇನೆ ಎನ್ನುತ್ತಾರೆ ದಯಾಳ್. ಈ ಮಧ್ಯೆ ಸರ್ಕಸ್ ಚಿತ್ರವನ್ನು ದಯಾಳ್ ತನ್ನ ಸ್ನೇಹಿತರು ಹಾಗೂ ಸಂಬಂಧಿಗಳೊಂದಿಗೆ ಮತ್ತೊಮ್ಮೆ ವೀಕ್ಷಿಸಿದ್ದಾರಂತೆ. ಚಿತ್ರದಲ್ಲಿನ ದೋಷಗಳನ್ನು ತಿಳಿಯುವ ಪ್ರಯತ್ನ ತಮ್ಮದು ಎನ್ನುತ್ತಾರೆ ದಯಾಳ್.

ಚಿತ್ರದಲ್ಲಿನ ತಪ್ಪು ಒಪ್ಪುಗಳ ಬಗ್ಗೆ ನನ್ನ್ನ ಸ್ನೇಹಿತರು ಚರ್ಚಿಸಿದ್ದಾರೆ. ನನ್ನ ಮುಂದಿನ ಚಿತ್ರಗಳಲ್ಲಿ ಈ ರೀತಿಯ ತಪ್ಪುಗಳಾಗದಂತೆ ಎಚ್ಚರಿಕೆ ವಹಿಸುತ್ತೇನೆ ಎಂದು ದಯಾಳ್ ತಿಳಿಸಿದ್ದಾರೆ. ಕದ್ದು ಮುಚ್ಚಿ ಚಿತ್ರದಲ್ಲಿ ದಿಗಂತ್ ಮತ್ತು ರಾಧಿಕಾ ಪಂಡಿತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ''ಕದ್ದು ಮುಚ್ಚಿ ಎಂಬ ಶೀರ್ಷಿಕೆಯನ್ನು ಈಗಾಗಲೇ ಮತ್ತೊಬ್ಬರು ನೋಂದಾಯಿಸಿಕೊಂಡಿದ್ದಾರೆ. ಆ ಶೀರ್ಷಿಕೆಯನ್ನು ತಮಗೆ ಕೊಡುವಂತೆ ಅವರ ಬಳಿ ವಿನಂತಿಸಿಕೊಳ್ಳುತ್ತೇನೆ'' ಎಂದು ದಯಾಳ್ ತಿಳಿಸಿದರು.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada