For Quick Alerts
  ALLOW NOTIFICATIONS  
  For Daily Alerts

  ಕ್ಲಾಸ್ ಗೆ ಮಾಸ್ ಗೆ ಬಾಸ್ ದರ್ಶನ್ ಖುಷ್ ಹುವಾ

  By Mahesh
  |

  ಇತ್ತೀಚಿಗೆ ಬಿಡುಗಡೆಯಾಗುತ್ತಿರುವ ಪ್ರಮುಖ ನಟರ ಚಿತ್ರಗಳು ಮೊದಲ ವಾರದಲ್ಲಿ ಪೈಪೋಟಿಗೆ ಬಿದ್ದಂತೆ ಗಳಿಕೆ ಕಾಣುತ್ತಿದೆ. ಜಾಕಿ, ಸೂಪರ್, ಮೈಲಾರಿ ಚಿತ್ರದ ನಂತರ ಕಳೆದ ವಾರ ಬಿಡುಗಡೆಗೊಂಡ ದರ್ಶನ್ ಅಭಿನಯದ 'ಬಾಸ್' ಚಿತ್ರ ಭರ್ಜರಿ ಯಶಸ್ಸು ಕಾಣುತ್ತಿದೆ. ಸತತ ಸೋಲುಗಳನ್ನು ಕಂಡು ಕಂಗೆಟ್ಟಿದ್ದ ದರ್ಶನ್ ಚಿತ್ರದ ಯಶಸ್ಸಿನ ಸುದ್ದಿಯಿಂದ ಫುಲ್ ಖುಷ್. ನಿರ್ಮಾಪಕರ ಜೇಬು ತುಂಬುವ ಮೂಲಕ ಕನ್ನಡಚಿತ್ರರಂಗಕ್ಕೆ ದರ್ಶನ್ ಮತ್ತೆ ಬಾಸ್ ಆಗುತ್ತಾರೆಯೇ ಕಾದು ನೋಡೋಣ.

  ದರ್ಶನ್ ಅಭಿಮಾನಿಗಳು ಜಾಸ್ತಿ ಎಂದು ಗುರುತಿಸಲ್ಪಡುವ ಮುಂಬೈ ಮತ್ತು ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ ಚಿತ್ರ ಅಭೂತಪೂರ್ವ ಯಶಸ್ಸು ಕಾಣುತ್ತಿದೆ. ಇನ್ನು 'ಎ' ಸೆಂಟರ್ ಗಳಲ್ಲೂ ಚಿತ್ರ ತುಂಬಿದ ಪ್ರದರ್ಶನ ಕಾಣುತ್ತಿದೆ. ಸದ್ಯ ರಾಜಸ್ತಾನದಲ್ಲಿ ' ಸಂಗೊಳ್ಳಿ ರಾಯಣ್ಣ' ಚಿತ್ರೀಕರಣದಲ್ಲಿ ಬ್ಯೂಸಿಯಾಗಿರುವ ದರ್ಶನ್, ಚಿತ್ರದ ಗಲ್ಲಾಪೆಟ್ಟಿಗೆ ವರದಿಯನ್ನು ನಿರ್ಮಾಪಕರು ನೀಡಿದ್ದಾರೆ. ಪ್ರಚಾರವಿಲ್ಲದೆ 130ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗಿದ್ದು ಭಯ ಹುಟ್ಟಿಸಿತ್ತು. ಅಭಿಮಾನಿಗಳು ಚಿತ್ರ ಮೆಚ್ಚಿಕೊಂಡಿದ್ದಕ್ಕೆ ತುಂಬಾ ಸಂತೋಷವಾಗಿದೆ. ನಿರ್ದೇಶಕ ರಘುರಾಜ್ ಉತ್ತಮ ಚಿತ್ರ ನೀಡಿದ್ದಾರೆಂದು ಸಂತಸ ವ್ಯಕ್ತ ಪಡಿಸಿದ್ದಾರೆ.

  ಚಿತ್ರದಲ್ಲಿ ಸಿಬಿಐ ಅಧಿಕಾರಿಯಾಗಿ ನಟಿಸಿದ್ದ ಶಿವಾಜಿ ಪ್ರಭು ಚೆನ್ನೈ ನಿಂದ ಹೇಳಿಕೆ ನೀಡಿ, ಕನ್ನಡ ಚಿತ್ರದಲ್ಲಿ ನಟಿಸಿದ್ದಕೆ ತುಂಬಾ ಹೆಮ್ಮೆಯಾಗುತ್ತಿದೆ. ಬಾಸ್ ಚಿತ್ರ ಉತ್ತಮ ಪ್ರದರ್ಶನ ಕಾಣುತ್ತಿದೆ ಎಂದು ನಿರ್ಮಾಪಕರಿಂದ ಕೇಳ್ಪಟ್ಟೆ. ಕನ್ನಡ ಚಿತ್ರಗಳು ಇನ್ನೂ ಯಶಸ್ಸು ಸಾಧಿಸಲಿ. ಉತ್ತಮ ಪಾತ್ರಗಳು ಬಂದರೆ ಮತ್ತೆ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಲು ಸಿದ್ದ ಎಂದಿದ್ದಾರೆ.

  ಈ ವಾರ ಬಿಡುಗಡೆಗೊಳ್ಳುತ್ತಿರುವ ಮತ್ತೊಂದು ಬಿಗ್ ಬಜೆಟ್ ಚಿತ್ರ 'ಕಂಠೀರವ' ಉತ್ತಮವಾಗಿ ಪ್ರದರ್ಶನ ಕಾಣುತ್ತಿರುವ ಇತರ ಕನ್ನಡ ಚಿತ್ರಗಳಿಗೆ ಫೈಟ್ ನೀಡತ್ತದೆಯೇ ಎಂದು ನೋಡ ಬೇಕು. ರಾಜ್ಯದಲ್ಲಿ ಪರಭಾಷಾ ಚಿತ್ರ ಪ್ರದರ್ಶನಕ್ಕೆಂದೇ ಸೀಮಿತವಾಗಿರುವ ಚಿತ್ರಮಂದಿರಗಳು ಕನ್ನಡ ಚಿತ್ರಗಳನ್ನು ಪ್ರದರ್ಶಿಸಲು ಶುರು ಮಾಡಿದಾಗಲೇ ನಮ್ಮ ಚಿತ್ರಗಳ ವ್ಯಾಪ್ತಿ ಹೆಚ್ಚಾಗುವುದು. ಈ ಬಗ್ಗೆ ಕರ್ನಾಟಕ ಚಲನಚಿತ್ರ ಮಂಡಳಿ ಕಾರ್ಯ ಪ್ರವೃತ್ತವಾಗಲಿ. [ದರ್ಶನ್]

  English summary
  Actor Darshan Toogudeepa's latest kannada movie Boss is doing well in box office with reports of good collections from A and B centers. Boss released in over 130 theaters across Karnataka.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X