»   » ರೇಪ್ ಸೀನ್ ಗಳಲ್ಲಿ ನಟಿಸಲು ಕೀರ್ತಿ ಚಾವ್ಲಾ ಒಲವು

ರೇಪ್ ಸೀನ್ ಗಳಲ್ಲಿ ನಟಿಸಲು ಕೀರ್ತಿ ಚಾವ್ಲಾ ಒಲವು

Posted By:
Subscribe to Filmibeat Kannada

ದಕ್ಷಿಣ ಭಾರತದ ಬಿಂದಾಸ್ ನಟಿ ಕೀರ್ತಿ ಚಾಬ್ಲಾ ರೇಪ್ ಸೀನ್ ಗಳಲ್ಲಿ ನಟಿಸಲು ಒಲವು ವ್ಯಕ್ತಪಡಿಸಿದ್ದಾರೆ. ರೇಪ್ ಸೀನ್ ಎಂದರೆ ಬಹಳ ರೇಜಿಗೆ ಎನ್ನುತ್ತಾರೆ ಬಹಳಷ್ಟು ನಟಿಯರು. ಆದರೆ ಈಕೆಗೆ ಮಾತ್ರ ರೇಪ್ ಸೀನ್ ಅಂದರೇನೆ ಇಷ್ಟವಂತೆ. ಇತ್ತ್ತೀಚೆಗೆ ಈಕೆ ನಟಿಸಿದ್ದ ತಮಿಳು ಚಿತ್ರವೊಂದರಲ್ಲಿ ರೇಪ್ ಸೀನ್ ಇದೆ. ಆ ದೃಶ್ಯದಲ್ಲಿ ಆಕೆ ಅದ್ಭುತವಾಗಿ ನಟಿಸಿ ಪಡ್ಡೆಗಳ ಗುಂಡಿಗೆ ಒದ್ದೆ ಮಾಡಿದ್ದರು.

ಚಿತ್ರ ಬಿಡುಗಡೆಯಾದ ಮರು ದಿನವೇ ಯಾರೋ ಪುಣ್ಯಾತ್ಮ ಆ ರೇಪ್ ದೃಶ್ಯಗಳನ್ನು ಅಂತರ್ಜಾಲಕ್ಕೆ ತುಂಬಿದ್ದ. ಇದನ್ನು ನೋಡಿದ ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಇಬ್ಬರೂ ದಂಗಾಗಿದ್ದಾರೆ. ಇಷ್ಟು ಬೇಗ ಈ ದೃಶ್ಯಗಳು ಹೇಗೆ ಅಂತರ್ಜಾಲಕ್ಕೆ ವರ್ಗವಾದವು ಎಂಬುದು ಅವರ ಗಲಿಬಿಲಿಗೆ ಕಾರಣ. ಈ ಕುರಿತು ಅವರು ಪೊಲೀಸರಿಗೆ ದೂರು ನೀಡಿದ್ದೂ ಆಯಿತು.

ಇದೆಲ್ಲಾ ಆದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕೀರ್ತಿ ಚಾವ್ಲಾ, ಚಿತ್ರಕತೆಗೆ ರೇಪ್ ಸೀನ್ ಅನಿವಾರ್ಯವಾಗಿದ್ದ ಕಾರಣ ನಟಿಸಿದ್ದೆ. ಈ ದೃಶ್ಯವನ್ನು ಎರಡು ದಿನಗಳ ಕಾಲ ಚಿತ್ರೀಕರಿಸಿದರು. ಆರಂಭದಲ್ಲಿ ಒಂಚೂರು ನರ್ವಸ್ ಅನ್ನಿಸಿದರೂ ನಂತರ ರೇಪ್ ಸೀನ್ ಗೆ ಹೊಂದಿಕೊಂಡೆ ಎಂದಿದ್ದಾರೆ.

ಈಗ ಈ ರೀತಿಯ ರೇಪ್ ಸೀನ್ ಗಳಲ್ಲಿ ನಟಿಸಲು ನಾನು ಸಿದ್ಧಳಾಗಿದ್ದೇನೆ. ಮುಂದಿನ ಚಿತ್ರಗಳಲ್ಲಿ ರೇಪ್ ಸೀನ್ ಇದ್ದರೆ ಯಾವುದೇ ಮುಜುಗರಕ್ಕೆ ಒಳಗಾಗದೆ ನಟಿಸುತ್ತೇನೆ ಎಂಬ ಆಶಾಭಾವ ಕೀರ್ತಿ ಚಾವ್ಲಾ ಅವರದು. ಅಂದಹಾಗೆ ಕೀರ್ತಿ ಕನ್ನಡ ದತ್ತ, ನೀ ಟಾಟಾ ನಾ ಬಿರ್ಲಾ ಮತ್ತು ಬಿಡಲಾರೆ ಚಿತ್ರಗಳಲ್ಲಿ ನಟಿಸಿದ್ದಾರೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada