»   » ವಿಸಿಡಿಯಲ್ಲಿ ಅಶ್ವತ್ಥ್, ಪಂಡರೀಬಾಯಿ ನವಜೀವನ

ವಿಸಿಡಿಯಲ್ಲಿ ಅಶ್ವತ್ಥ್, ಪಂಡರೀಬಾಯಿ ನವಜೀವನ

Posted By:
Subscribe to Filmibeat Kannada

ಕೆ ಎಸ್ ಅಶ್ವತ್ಥ್, ಪಂಡರೀಬಾಯಿ, ನರಸಿಂಹರಾಜು, ಸುದರ್ಶನ್, ಮೈನಾವತಿ, ವಾದಿರಾಜ್, ಚಿಂದೋಡಿಲೀಲಾ ಮುಂತಾದ ಕಲಾವಿದರು ಅಭಿನಯಿಸಿದ್ದ 'ನವ ಜೀವನ' ವಿಸಿಡಿ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ಶ್ರೀಭಾರತಿ ಚಿತ್ರ ಲಾಂಛನದಲ್ಲಿ ನಿರ್ಮಾಣವಾಗಿದ್ದ 'ನವಜೀವನ' ಚಿತ್ರವನ್ನು ಶ್ರುತಿ ಟ್ರ್ಯಾಕ್ಸ್ ಮ್ಯೂಸಿಕ್ ಅಂಡ್ ವೀಡಿಯೋ ಕಂಪನಿ ಹೊರತಂದಿದೆ.

ಈವರೆಗೂ ಹಲವಾರು ಭಕ್ತಿಗೀತೆಗಳ, ಜಾನಪದಗೀತೆಗಳ, ಪ್ರಸಿದ್ಧ ನಾಟಕಗಳ ಮತ್ತು ಚಲನಚಿತ್ರಗಳ ವಿಸಿಡಿಯನ್ನು ಲೋಕಾರ್ಪಣೆ ಮಾಡಿರುವ ಶ್ರುತಿ ಟ್ರ್ಯಾಕ್ಸ್ ಕಂಪನಿ ಈಗ ಪರಿಶುದ್ದ ಮನೋರಂಜನೆಯುಳ್ಳ ಈ ಕೌಟುಂಬಿಕ ಚಿತ್ರದ ವಿಸಿಡಿಯನ್ನು ಬಿಡುಗಡೆಗೊಳಿಸಿ ನೋಡುಗರ ಮೆಚ್ಚುಗೆಗೆ ಪಾತ್ರವಾಗಿದೆ.

ವಾದಿರಾಜ್ ಹಾಗೂ ಜವಹರ್ ನಿರ್ಮಿಸಿರುವ ಈ ಚಿತ್ರವನ್ನು ಪಿ.ಎಸ್.ಮೂರ್ತಿ ಸಂಕಲನ ಮಾಡುವುದರೊಂದಿಗೆ ನಿರ್ದೇಶಿಸಿದ್ದಾರೆ. ರಾಜನ್ ನಾಗೇಂದ್ರ ಸಂಗೀತ ಸಂಯೋಜಿಸಿದ್ದಾರೆ. ಸೋರಟ್ ಅಶ್ವಥ್ ಗೀತರಚನೆ ಮಾಡಿ ಸಂಭಾಷಣೆ ಬರೆದಿದ್ದಾರೆ. ಈ ಕೌಟುಂಬಿಕ ಚಿತ್ರದ ವಿಸಿಡಿಯ ಬೆಲೆ ಕೇವಲ ರು.38 ಮಾತ್ರ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada