»   » ಬಿ ಸುರೇಶನ ಕನಸು ಪ್ರಕಾಶವಾಯಿತಾ?

ಬಿ ಸುರೇಶನ ಕನಸು ಪ್ರಕಾಶವಾಯಿತಾ?

Posted By:
Subscribe to Filmibeat Kannada

ಪ್ರಕಾಶ್ ರೈ ನಿರ್ದೇಶಿಸಿ ನಟಿಸಿರುವ 'ನಾನು ನನ್ನ ಕನಸು' ಚಿತ್ರವನ್ನು ಇನ್ನೂ ನೋಡಿಲ್ಲವೆ? ಹಾಗಿದ್ದರೆ ಇಲ್ಲಿದೆ ನೋಡಿ ಒಂದು ಸುವರ್ಣಾವಕಾಶ. ಕೇವಲ ಚಿತ್ರ ನೋಡುವುದಷ್ಟೆ ಅಲ್ಲ ಅದರ ಸಂತಸ-ದುಃಖ, ಓರೆ-ಕೋರೆ, ಸಕ್ಸ್ ಸ್-ಫೇಲ್ಯೂರ್ ಗಳನ್ನು ಚಿತ್ರತಂಡದೊಂದಿಗೆ ಹಂಚಿಕೊಂಡು ಸಂವಾದ ಮಾಡಬಹುದು. ಕನ್ನಡ ಚಿತ್ರಗಳ ಬೆಳವಣಿಗೆಗೆ ಅಳಿಲು ಸೇವೆ ಸಲ್ಲಿಸುತ್ತಿರುವ ಸಂವಾದ ಡಾಟ್ ಕಾಂ 'ನಾನು ನನ್ನ ಕನಸು' ಸಂವಾದ ಮತ್ತು ಪ್ರದರ್ಶನವನ್ನು ಏರ್ಪಡಿಸಿದೆ.

ಇದೇ ಭಾನುವಾರ (ಮೇ.23) ಸಂವಾದ ಹಾಗೂ ಚಿತ್ರ ಪ್ರದರ್ಶನವಿರುತ್ತದೆ. ಕೆಂಪೇಗೌಡ ರಸ್ತೆಯ ಭೂಮಿಕಾ ಚಿತ್ರಮಂದಿರ ನಿಮಗಾಗಿ ಮ್ಯಾಟಿನಿ ಪ್ರದರ್ಶನಕ್ಕೆ ಸ್ವಾಗತ ಕೋರುತ್ತದೆ. ಚಿತ್ರ ಪ್ರದರ್ಶನದ ಬಳಿಕ ಅಂದು ಸಂಜೆ ಆರು ಗಂಟೆಗೆ ಚರ್ಚೆ ನಡೆಯಲಿದೆ. ಸಂವಾದಲ್ಲಿ ಪ್ರಕಾಶ್ ರೈ, ಬಿ ಸುರೇಶ್, ರಾಜೇಶ್, ಅನಂತ್ ಅರಸ್, ಅಮೂಲ್ಯ ಮತ್ತು ಲಭ್ಯವಿರುವ ಇತರೆ ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ.

ಮುಂಗಡವಾಗಿ ನಿಮ್ಮ ಸ್ಥಳವನ್ನು ಕಾದಿರಿಸಲು, ಸಂವಾದ ಹಾಗೂ ಪ್ರದರ್ಶನ ವಿವರಗಳಿಗೆ www.samvaada.com/events ಪುಟಕ್ಕೆ ಭೇಟಿ ಕೊಡಿ ಅಥವಾ ಈ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಬಹುದು. ಕಿರಣ್( 97317 55966), ಅರೇಹಳ್ಳಿ ರವಿ (99004 39930). ಸಂವಾದ ತಂಡದೊಂದಿಗೆ ಅವಿರತ ಬಳಗ ಸಹ ಕೈಜೋಡಿಸಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada