ಪ್ರದರ್ಶಕರ ವಿರುದ್ಧ ಗುಡುಗಿದ ಕೋಟಿ ರಾಮು

ಮಾಲಾಶ್ರೀ ಪತಿ, ನಿರ್ಮಾಪಕ ರಾಮು ಮಾತನಾಡಿ "ಕನ್ನಡ ಚಿತ್ರಗಳಿಗೆ ಥಿಯೇಟರ್ ಸಮಸ್ಯೆ ಕಾಡುತ್ತಿದೆ. ಕನ್ನಡ ಸಿನಿಮಾಗಳಿಗೆ ಚಿತ್ರಮಂದಿರಗಳು ಸಿಗದಿರುವುದು ಒಳ್ಳೆಯ ಬೆಳವಣಿಗೆಯಲ್ಲ. ಕನ್ನಡ ಚಿತ್ರಗಳಿಂದ ಹೆಚ್ಚು ಲಾಭ ಬರುವುದಿಲ್ಲ ಎಂಬ ಕಾರಣಕ್ಕೆ ಪ್ರದರ್ಶಕರು ಕನ್ನಡ ಸಿನಿಮಾಗಳತ್ತ ನಿರ್ಲಕ್ಷ್ಯ ವಹಿಸುತ್ತಿದ್ದಾರೆ" ಎಂದು ದೂರಿದರು.
ಮುಂದುವರಿದ ರಾಮು, ಪ್ರದರ್ಶಕರ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಯಬೇಕು ಎಂದು ಆಗ್ರಹಿಸಿದರು. ಪ್ರದರ್ಶಕರು ಲಕ್ಷಾಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದಾರೆ. ಇದರ ಹಿಂದೆ ದೊಡ್ಡ ಗುಂಪೇ ಕಾರ್ಯಾಚರಿಸುತ್ತಿದೆ. ಇದು ಬಯಲಿಗೆ ಬರಬೇಕು. ಇದಾಗದಿದ್ದಲ್ಲಿ ಕನ್ನಡ ಚಿತ್ರಗಳಿಗೆ ಉಳಿಗಾಲವಿಲ್ಲ" ಎಂದು ಗುಡುಗಿದ್ದಾರೆ. (ಒನ್ ಇಂಡಿಯಾ ಕನ್ನಡ)
More from Filmibeat
English summary
Malashri Shakti movie producer Ramu complaints against theater owners. Now, he is in shakti movie promotion tour all over Karnataka.


Click it and Unblock the Notifications











