»   »  ಐಪಿಸಿ ಸೆಕ್ಷನ್ 300ರಲ್ಲಿ ವಿಜಯ ರಾಘವೇಂದ್ರ

ಐಪಿಸಿ ಸೆಕ್ಷನ್ 300ರಲ್ಲಿ ವಿಜಯ ರಾಘವೇಂದ್ರ

Subscribe to Filmibeat Kannada
Vijay Raghavendra in IPC Section 300
ಶ್ರೀಚೌಡೇಶ್ವರಿ ಪ್ರಸನ್ನ ಮೂವೀಸ್ ಲಾಂಛನದಲ್ಲಿ 'ಹುಬ್ಬಳ್ಳಿ, 'ಮಂಡ್ಯ, 'ತುಂಟ, 'ಈಶ್ವರ್ ಸೇರಿದಂತೆ ಇತ್ತೀಚೆಗೆ ತೆರೆಕಂಡ 'ಯಜ್ಞ' ಚಿತ್ರವನ್ನು ನಿರ್ಮಿಸಿದ ನಿರ್ಮಾಪಕ ಆರ್.ಶಂಕರ್ ಪ್ರಸ್ತುತ 'ಐ.ಪಿ.ಸಿ ಸೆಕ್ಷನ್ 300' ಶೀರ್ಷಿಕೆಯ ಚಿತ್ರವನ್ನು ಆರಂಭಿಸಿದ್ದಾರೆ.

ಹಲವು ಕಿರುಚಿತ್ರಗಳನ್ನು ನಿರ್ಮಿಸಿ ಅನುಭವವಿರುವ ಶಶಿಕಾಂತ್ ಈ ಚಿತ್ರವನ್ನು ನಿರ್ದೇಶಿಸುವ ಮೂಲಕ ಬೆಳ್ಳಿತೆರೆಗೆ ಅಡಿಯಿಡುತ್ತಿದ್ದಾರೆ. ವಿಜಯರಾಘವೇಂದ್ರ ಚಿತ್ರದ ನಾಯಕರಾಗಿದ್ದು ಬೆಡಗಿ ಪ್ರಿಯಾಂಕ ನಾಯಕಿಯಾಗಿ ನಟಿಸುತ್ತಿದ್ದಾರೆ. ಖ್ಯಾತ ನಟ ದೇವರಾಜ್ ಹಾಗೂ ಚೆಲುವೆ ಸುಮನ್ ರಂಗನಾಥ್ ಈ ಚಿತ್ರದಲ್ಲಿ ಗಮನಾರ್ಹ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಶಂಕರ್, ಮುನಿ, ರವೀಂದ್ರನಾಥ್ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಸ್ತುತ ಚಿತ್ರಕ್ಕೆ ನಗರದಲ್ಲಿ ಬಿರುಸಿನ ಚಿತ್ರೀಕರಣ ನಡೆಯುತ್ತಿದೆ. ಚಿತ್ರದಲ್ಲಿ ಗಂಡ ಹೆಂಡತಿಯರಾಗಿ ಅಭಿನಯಿಸುತ್ತಿರುವ ದೇವರಾಜ್ ಹಾಗೂ ಸಮನ್ ರಂಗನಾಥ್ ಅವರ ದಾಂಪತ್ಯ ಸಾಮರಸ್ಯದ ಕೆಲವು ಸನ್ನಿವೇಶಗಳ ಚಿತ್ರೀಕರಣವನ್ನು ಜಕ್ಕೂರು ಬಳಿಯಿರುವ ಕಾಮತ್ ಹೌಸ್‌ನಲ್ಲಿ ನಡೆಸಲಾಗಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ.

ಶಿಕಾಂತ್ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವೀರಸಮರ್ಥ್ ಸಂಗೀತ ಸಂಯೋಜಿಸುತ್ತಿದ್ದಾರೆ, ನಿರಂಜನ್ ಬಾಬು ಛಾಯಾಗ್ರಹಣ, ಈಶ್ವರ್ ಸಂಕಲನ, ಬಾಬು ಖಾನ್ ಕಲೆ, ಅರುಣ್ ಕುಮಾರ್ ಸಹ ನಿರ್ದೇಶನ, ಅಚ್ಯುತ್ ರಾವ್ ನಿರ್ಮಾಣ ನಿರ್ವಹಣೆ, ಹಾಗೂ ಎಚ್.ನರಸಿಂಹ(ಜಾಲಹಳ್ಳಿ) ನಿರ್ಮಾಣ ಮೇಲ್ವಿಚಾರಣೆ 'ಐ.ಪಿ.ಸಿ ಸೆಕ್ಷನ್ 300' ಚಿತ್ರಕ್ಕಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ವಿಜಯ್ ರಾಘವೇಂದ್ರನಿಗೆ ಡಬಲ್ ಖುಷಿ
ಓಂ ಪ್ರಕಾಶ್, ಪುನೀತ್ ಕಾಂಬಿನೇಷನಲ್ಲಿ ಹೊಸ ಚಿತ್ರ
ಅಜ್ಞಾತವಾಸ ಮುಗಿಸಿದ ಡಿ.ರಾಜೇಂದ್ರಬಾಬು
ಸವಾರಿಯಲ್ಲಿ ಹಯಬುಸ ಬೈಕ್ ಚಿತ್ರಾನ್ನವಾದ ಕತೆ
ಶಿವಣ್ಣ, ಪ್ರೇಮ್ ಕಾಂಬಿನೇಷನಲ್ಲಿ 'ಜೋಗಿ ಭಾಗ 2'

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada