»   » 2013ರಲ್ಲಿ ರಂಗು ತುಂಬಿ ಬಂದ ಸ್ವಮೇಕ್ ಚಿತ್ರಗಳು

2013ರಲ್ಲಿ ರಂಗು ತುಂಬಿ ಬಂದ ಸ್ವಮೇಕ್ ಚಿತ್ರಗಳು

By: ಜೀವನರಸಿಕ
Subscribe to Filmibeat Kannada

ಪ್ರತೀ ವರ್ಷ ಸಿನಿಮಾ ಪಂಡಿತರು ಕನ್ನಡ ಸಿನಿಮಾಗಳ ಬಗ್ಗೆ ಒಂದು ಷರಾ ಬರೆದುಬಿಡ್ತಿದ್ರು. ಈ ವರ್ಷವೂ ಕನ್ನಡ ಸಿನಿಮಾಗಳ ಗೆಲುವಿನಲ್ಲಿ ರೀಮೇಕ್ ಸಿನಿಮಾಗಳೇ ಹೆಚ್ಚು. ಕನ್ನಡ ಚಿತ್ರಗಳಿಗೆ ಸ್ವಮೇಕ್ ಮಾಡಿ ಗೆಲ್ಲೋ ತಾಕತ್ತು ಇಲ್ಲ ಅಂತ. ಆದರೆ ಈ ವರ್ಷ ಹಾಗೆ ಬರೆಯೋದು ಅಸಾಧ್ಯ. ಯಾಕಂದ್ರೆ ಈ ವರ್ಷ ಕನ್ನಡ ಸಿನಿಮಾಗಳೇ ರಂಗುತುಂಬಿ ಬಂದಿವೆ.

ರೀಮೇಕ್ ಮಾಡಿ ಗೆಲ್ಲೋದಕ್ಕಿಂತ ಸ್ವಮೇಕ್ ಸಿನಿಮಾ ಮಾಡಿ ಸೋಲೋದೆ ಸ್ವಾಭಿಮಾನ ಅನ್ನೋ ನೋವು ತುಂಬಿದ 'ಬಹುಪರಾಕ್' ಸಿನಿಮಾದ ಡೈಲಾಗ್ ಗೆ ಆ ಸಿನಿಮಾ ರಿಲೀಸ್ ಗೂ ಮೊದಲೇ ಕನ್ನಡ ಚಿತ್ರರಂಗ ಉತ್ತರ ಕೊಟ್ಟಂತಿದೆ. ಯಾಕಂದ್ರೆ ಈ ವರ್ಷ ಗೆದ್ದ ಕನ್ನಡ ಸಿನಿಮಾಗಳ ಲಿಸ್ಟ್ ಒಮ್ಮೆ ತೆಗೆದು ನೋಡಿ. ಹೌದಲ್ವ ನಾವು ಯಾರಿಗೂ ಕಮ್ಮಿ ಇಲ್ಲ ಅಂತರ ನಿಮ್ಮ ಕಾಲರನ್ನ ನೀವೇ ಎತ್ತಿ ಹಿಡೀತೀರಾ.

ಕಳೆದ ವರ್ಷಗಳಲ್ಲಿ ಗೆದ್ದ ಸಿನಿಮಾಗಳಲ್ಲಿ ಅರ್ಧ ತೆಲುಗು ತಮಿಳಿನ ರೀಮೇಕ್ ಗಳಿರುತ್ತಿದ್ದವು. ಈ ವರ್ಷ ಹಾಗಲ್ಲ. ಸ್ವಮೇಕ್ ಸ್ವಾಮಿ ಕನ್ನಡಿಗರ ಕೈ ಹಿಡಿದಿದ್ದಾರೆ. ನಮ್ಮಲ್ಲೂ ಅದ್ಭುತ ಕಥೆಗಾರರಿದ್ದಾರೆ. ಒಳ್ಳೆಯ ಸ್ಕ್ರೀನ್ ಪ್ಲೇ ಬರುತ್ತೆ ಅನ್ನೋದು ಸಾಬೀತಾಗಿದೆ.

ಅಲ್ಲೊಂದು 'ಬುಲ್ ಬುಲ್' ಮತ್ತೊಂದು 'ರಾಜಾಹುಲಿ' ಬಿಟ್ರೆ ಈ ವರ್ಷ ಕನ್ನಡ ಸಿನಿಮಾದ ಸ್ವಾಭಿಮಾನದ ವರ್ಷ. ಮುಂದಿನ ವರ್ಷ ಇನ್ನಷ್ಟು ಸ್ವಮೇಕ್ ಸ್ವಾಭಿಮಾನ ಬೆಳೆಯಲಿ ಅನ್ನೋದು ನಮ್ಮ ಹಾರೈಕೆ. ಅಂತಹಾ ಸಿನಿಮಾಗಳನ್ನೊಮ್ಮೆ ಸ್ಲೈಡ್ ನಲ್ಲಿ ನೋಡ್ತಾ ಹೋಗಿ ನಿಮ್ಗೆ ಹೆಮ್ಮಯಾಗುತ್ತೆ...

ಈ ವರ್ಷದ ಮೊದಲ ಹಿಟ್ ಚಾರ್ಮಿನಾರ್

ಈ ವರ್ಷದ ಮೊದಲ ಹಿಟ್ ಆರ್ ಚಂದ್ರು ನಿರ್ದೇಶನದ 'ಚಾರ್ಮಿನಾರ್' ಸ್ವಮೇಕ್ ಸಿನಿಮಾ. ನೆನಪಿರಲಿ ಪ್ರೇಮ್-ಮೇಘನಾ ಗಾಂವ್ಕರ್ ಜೋಡಿಯಾಗಿದ್ದ ಚಾರ್ಮಿನಾರ್ ಸಿನಿಪ್ರೇಮಿಗಳ ಮನಗೆದ್ದಿತ್ತು.

ಸಿಂಪಲ್ಲಾಗ್ ಹತ್ತು ಕೋಟಿ ಬಾಚಿದ ಸಿನಿಮಾ

ಫೆಬ್ರವರಿಯಲ್ಲಿ ತೆರೆಗೆ ಬಂದ ಸ್ವಮೇಕ್ 'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಕೊಟ್ಟ ಥ್ರಿಲ್ಲನ್ನ ಮರ್ಯೋಕೆ ಸಾಧ್ಯವಿಲ್ಲ. ಹೆಚ್ಚೂ ಕಡಿಮೆ ಹತ್ತು ಕೋಟಿ ಬಾಚಿದ ಹೊಸಬರ ಸಿನಿಮಾ ಇದು.

ಜಯಮ್ಮನ ಮಗ ಮಸ್ತ್ ಮನರಂಜನೆ

ವಿಕಾಸ್ ನಿರ್ದೇನದ 'ಜಯಮ್ಮನ ಮಗ' ಸಿನಿಮಾದ ಅಬ್ಬರ ಕೋಟಿ ಕೋಟಿಗಳನ್ನ ಕೊಳ್ಳೆ ಹೊಡೀತು. ದುನಿಯಾ ವಿಜಯ್ ಪ್ರೊಡಕ್ಷನ್ಸ್ ನ ಮೊದಲ ಸಿನಿಮಾ ಸಿನಿಪ್ರಿಯರಿಗೆ ಮಸ್ತ್ ಮನರಂಜನೆಕೊಡ್ತು.

ವಿಕ್ಟರಿ, ರ್‍ಯಾಂಬೋ ಕಾಮಿಡಿ ಕಿಕ್

ಕಾಮಿಡಿ 'ರ್ಯಾಂಬೋ' ಶರಣ್ ಅಭಿನಯದ 'ವಿಕ್ಟರಿ' ಸಿನಿಮಾ ಈ ವರ್ಷದ ಯಶಸ್ವಿ ಕಾಮಿಡಿ ಥ್ರಿಲ್ಲರ್. ಹತ್ತಾರು ಗೆಟಪ್ ಗಳಲ್ಲಿ ಶರಣ್ ರನ್ನ ತಂದ ನಿರ್ದೇಶಕ ನಂದಕಿಶೋರ್ ಭರ್ಜರಿ ಕಾಮಿಡಿ ಕಿಕ್ ಕೊಟ್ರು.

ಈ ವರ್ಷದ ಕನ್ನಡದ ಹಿಟ್ ಸಿನಿಮಾಗಳಲ್ಲಿ ಲೂಸಿಯಾ

ಅಂತರಾಷ್ಟ್ರೀಯ ಮಟ್ಟದಲ್ಲಿ ಅವಾರ್ಡ್ಸ್ ಪಡ್ಕೊಂಡ 'ಲೂಸಿಯಾ' ಚಿತ್ರ ಈ ವರ್ಷದ ಕನ್ನಡದ ಹಿಟ್ ಸಿನಿಮಾಗಳಲ್ಲೊಂದು. ತೆಲುಗು ಸಿನಿಮಾವನ್ನೆ ಬದಿಗೆ ಸರಿಸಿ ಮೂವಿಲ್ಯಾಂಡ್ ಚಿತ್ರಮಂದಿರದಲ್ಲಿ 50 ದಿನ ಪೂರೈಸಿತು.

ಶಿವಣ್ಣ 'ಭಜರಂಗಿ' ಅಬ್ಬರ ಗೊತ್ತೇ ಇದೆ

ಶಿವಣ್ಣ ರೀಮೇಕ್ ಮಾಡಲ್ಲ ಎಂದು ಶಪಥ ಮಾಡಿ ಸಾಕಷ್ಟು ವರ್ಷಗಳೇ ಆಗಿವೆ. ಅವರ ಅಭಿನಯದ 'ಭಜರಂಗಿ'ಯ ಅಬ್ಬರ ನಿಮ್ಗೆಲ್ಲಾ ಗೊತ್ತೇ ಇದೆ. ಕೋಟಿಗಟ್ಟಲೆ ಕಲೆಕ್ಷನ್ ಮಾಡ್ತಿರೋ 'ಭಜರಂಗಿ' ಕೂಡ ಕನ್ನಡಿಗರ ಸ್ವಮೇಕ್ ಸಿನಿಮಾದ ಗೆಲುವಿಗೆ ಮತ್ತೊಂದು ಎಕ್ಸಾಂಪಲ್.

ಬಾಕ್ಸಾಫೀಸನ್ನ ಚಿಂದಿ ಉಡಾಯಿಸಿದ ಗೂಗ್ಲಿ

ಯಶ್ ಅಭಿನಯದ 'ಗೂಗ್ಲಿ' ಚಿತ್ರ ಬಾಕ್ಸಾಫೀಸನ್ನ ಚಿಂದಿ ಉಡಾಯಿಸ್ತು. ಯುವ ಚಿತ್ರಪ್ರೇಮಿಗಳ ಮನಗೆದ್ದ ಗೂಗ್ಲಿಯ ಆಟ ನಿರ್ದೇಶಕ ಪವನ್ ಒಡೆಯರ್ ಗೆ ಮತ್ತೊಂದು ಯಶಸ್ವಿ ಸಿನಿಮಾ ಕೊಡ್ತು.

ಬೆಚ್ಚಿಬೀಳಿಸ್ತಾ ಇರೋ '6-5=2'

ಈಗ ಭರ್ಜರಿ ಥ್ರಿಲ್ ಕೊಡ್ತಾ ಥಿಯೇಟರ್ ನಲ್ಲಿ ಸಿನಿಪ್ರೇಮಿಗಳನ್ನ ಬೆಚ್ಚಿಬೀಳಿಸ್ತಾ ಇರೋ '6-5=2' ಅನ್ನೋ ಚಿತ್ರ ಕೂಡ ನೈಜಘಟನೆ ಆಧಾರಿತ ಸಿನಿಮಾ ಆಗಿದ್ದು ಯಶಸ್ವಿಯಾಗ್ತಿದೆ.

English summary
Kannada moviegoer doesn't like remake movies in the year 2013. Most of the hit movie are swamake. Charminar, Simple Agi Ondh Love Story, Jayammana Maga, Rambo, Bhajarangi and many more movies are major box-office hits. The year 2013 is for Swamake movies.
Please Wait while comments are loading...