For Quick Alerts
  ALLOW NOTIFICATIONS  
  For Daily Alerts

  ಗಾನ ಬಜಾನ ತೆರೆಗೆ ಬರಲು ಏಕೆ ನಿಧಾನ

  By Mahesh
  |

  ಎಲ್ಲ ಸರಿಹೋಗಿದ್ದರೆ 'ಗಾನ ಬಜಾನಾ' ಚಿತ್ರ ಎಷ್ಟೊತ್ತಿಗೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ತೆರೆ ಕಾಣಬೇಕಿತ್ತು. ಆದರೆ, ಗಾಂಧಿನಗರ ಮಂದಿ ಒಳ ರಾಜಕೀಯ, ದೊಡ್ಡ ಬ್ಯಾನರ್ ಸಿನಿಮಾಗಳಿಗೆ ಮಣೆ ಹಾಕುವುದು, ರಾಜ್ ಕುಮಾರ್ ಬ್ಯಾನರ್ ಅವರೇ ಕೆಎಫ್ ಸಿಸಿ ನಿಯಮ ಮುರಿದರೂ ಸುಮ್ಮನಿರುವುದು ಎಲ್ಲವೂ ಎಲ್ಲರಿಗೂ ಗೊತ್ತಿರುವ ನುಂಗಲಾರದ ಸತ್ಯ. ಟೆಕ್ ಲೈಫ್ ಬಿಟ್ಟು ಕನ್ನಡದ ಯುವ ಮನಸ್ಸುಗಳಿಗೆ ಹೊಸ ಬಗೆ ಚಿತ್ರಗಳನ್ನು ನೀಡುವ ತವಕದಲ್ಲಿರುವ ನಿರ್ದೇಶಕ ಪ್ರಶಾಂತ್ ಗೆ ಎರಡನೇ ಸಿನಿಮಾಕ್ಕೆ ಚಿತ್ರರಂಗ ಬೇಸರ ತರಿಸಿದೆ.

  ಆದರೆ, ಹಾಗಂತ ಕನ್ನಡ ಸಿನಿಮಾ ಮಾಡುವುದನ್ನು ನಿಲ್ಲಿಸುವುದಿಲ್ಲ ಎನ್ನುತ್ತಾರೆ ಪ್ರಶಾಂತ್ ಹಾಗೂ ಅವರ ಸೋದರ ನಿರ್ಮಾಪಕ ನವೀನ್. 'ಲವ್ ಗುರು' ಚಿತ್ರದ ಸಾಧಾರಣ ಯಶಸ್ಸಿನ ನಂತರ ಬಹುತೇಕ ತಂಡವನ್ನು ಇಟ್ಟುಕೊಂಡು 'ಗಾನ ಬಜಾನಾ' ಚಿತ್ರವನ್ನು ತಯಾರಿಸಿದ ಪ್ರಶಾಂತ್, ದಸರಾ ಹಬ್ಬದ ಸಮಯದಲ್ಲಿ ತೆರೆಗೆ ತರಲು ಇನ್ನಿಲ್ಲದ ಪ್ರಯತ್ನ ನಡೆಸಿ ಸುಮ್ಮನಾಗಿದ್ದಾರೆ. ಅಂತೂ ಅ.29 ಕ್ಕೆ ಚಿತ್ರ ಬಿಡುಗಡೆ ಭಾಗ್ಯ ಕಾಣುವ ಸಾಧ್ಯತೆಯಿದೆ.

  ಆದರೆ, ಪ್ರಚಾರ ಕೆಲಸವನ್ನು ಮಾತ್ರ ನಿಲ್ಲಿಸದೆ ಮುಂದುವರೆಸುತ್ತಿರುವ ಚಿತ್ರತಂಡಕ್ಕೆ ನಾಯಕ ತರುಣ್ ಚಂದ್ರ ನಾಯಕನಾಗಿ ಎಲ್ಲೆಡೆ ತೊಡಗಿಕೊಂಡಿದ್ದಾರೆ. ದಟ್ಸ್ ಕನ್ನಡ ಪ್ರತಿನಿಧಿಯೊಂದಿಗೆ ಮಾತನಾಡಿದ ತರುಣ್, ಎಲ್ಲಾ ಕಾಲೇಜುಗಳಿಗೆ ಭೇಟಿ ನೀಡುವ ಯೋಜನೆ ಇದೆ. ಈಗಾಗಲೇ ಸೈಂಟ್ ಆನ್ಸ್, ಪ್ರೆಸಿಡೆನ್ಸಿ ಕಾಲೆಜ್, ಸೇರಿದಂತೆ ಐದಾರು ಕಾಲೇಜಿಗೆ ಹೋಗಿ ಚಿತ್ರಕ್ಕೆ ಒಳ್ಳೆ ಪ್ರಚಾರ ನೀಡಿದ್ದೇವೆ, ಮೈಸೂರು ಸೇರಿದಂತೆ ರಾಜ್ಯದ ಎಲ್ಲೆಡೆ ಪ್ರಚಾರ ಕಾರ್ಯ ಕೈಗೊಳ್ಳುತ್ತೇವೆ. ಈ ಟಿವಿ,ಸುವರ್ಣ, ಟಿವಿ9, ಸಮಯ, ಎಫ್ ಎಂ ಚಾನೆಲ್ ಗಳು ತುಂಬಾ ಸಫೋರ್ಟಿವ್ ಆಗಿವೆ ಎಂದರು.

  ಕ್ರಿಶ್ ಎಂಬ ಹೆಸರಿನ ಪಾತ್ರಧಾರಿಯಾಗಿ ಕಾಣಿಸಿಕೊಳ್ಳಲಿರುವ ತರುಣ್, ಈ ಚಿತ್ರದಲ್ಲಿ ಡಾನ್ಸ್ ಮಾಸ್ಟರ್ ಅಂತೆ, ಕ್ರಿಶ್ ಮೇಲೆ ಕ್ರಶ್ ಆಗಿ ಲವ್ ಮಾಡೋ ಕೆಲ್ಸ ನಾಯಕಿ ರಾಧಿಕಾ ಪಂಡಿತ್ ರದ್ದು. ಇವರ ಮಧ್ಯದಲ್ಲಿ ರೌಡಿ ಎಲಿಮೆಂಟ್ ಆಗಿ ದಿಲೀಪ್ ರಾಜ್ ಹಾಗೂ ಅವರಣ್ಣ ಇರುತ್ತಾರೆ. ಹಾಸ್ಯ ಎಂದಿನಂತೆ ಶರಣ್ ಸಿದ್ಧರಾಗಿದ್ದಾರೆ. ಜೋಶ್ವ ಶ್ರೀಧರ್ ನ ಜೋಶ್ ಭರಿತ ಗೀತೆಗಳಾದ 'ಹೊಸದೊಂದು ಹೆಸರಿಡು ನನಗೆ..', ' ನಾನು ಈಗ ನಾನೇನಾ..', 'ಗಾನ ಬಜಾನಾ...ಟೈಟಲ್ ಗೀತೆ' ಗಳು ಯುವ ಜನಾಂಗಕ್ಕೆ ಹುಚ್ಚುಹಿಡಿಸಿವೆ. ಇನ್ನು ಚಿತ್ರ ಯಾವ ರೀತಿ ಇರುವುದೋ ಕಾದು ನೋಡಬೇಕು.

  ಗಾನ ಬಜಾನಾ ಟ್ರೈಲರ್ | ಮೊದಲಾಸಲ | ಹೃದಯಲ್ಲಿ ಇದೇನಿದು | ಬಟ್ಟೆ ಕಳಚುವ ವೇದಿಕೆ |

  ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X