For Quick Alerts
  ALLOW NOTIFICATIONS  
  For Daily Alerts

  ಈಜಿಪ್ಟ್, ಜೋಡಾನ್ ಸುತ್ತಿ ಬಂದ ಗೊಲ್ಡನ್ ಸ್ಟಾರ್

  By Rajendra
  |

  ಗೋಲ್ಡನ್ ಮೂವೀಸ್ ಲಾಂಛನದಲ್ಲಿ ಶಿಲ್ಪಾ ಗಣೇಶ್ ನಿರ್ಮಿಸುತ್ತಿರುವ 'ಕೂಲ್' ಚಿತ್ರದ ಚಿತ್ರೀಕರಣ ಮುಕ್ತಾಯವಾಗಿದೆ. ಚಿತ್ರಕ್ಕೆ ಒಟ್ಟು 72ದಿನಗಳ ಚಿತ್ರೀಕರಣ ನಡೆದಿದೆ. ದುಬೈ, ಈಜಿಪ್ಟ್, ಜೋಡಾನ್ ಮತ್ತು ಮಧ್ಯ ಪ್ರಾಚ್ಯದ ಮರುಭೂಮಿಗಳಲ್ಲಿ 'ಕೂಲ್ ಕೆಲವು ಹಾಡುಗಳ ಚಿತ್ರೀಕರಣ ನಡೆದಿದೆ. ರಾಮು, ಶಂಕರ್ ಹಾಗೂ ವಿಷ್ಣುದೇವ್ ಈ ಹಾಡುಗಳಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ.

  ಸ್ಯಾಂಡಲ್‌ವುಡ್ ಸ್ಟುಡಿಯೋ, ಮೈಸೂರು ಲ್ಯಾಂಪ್ಸ್, ಅಬ್ಬಾಯಿನಾಯ್ಡು ಸ್ಟುಡಿಯೋದಲ್ಲಿ ನಿರ್ಮಿಸಲಾಗಿದ್ದ ಅದ್ದೂರಿ ಸೆಟ್‌ಗಳಲ್ಲಿ ವಿದೇಶಿ ನರ್ತಕಿಯರೊಂದಿಗೆ ನರ್ತಿಸುವ ಹಾಡನ್ನು ಚಿತ್ರಿಸಿಕೊಳ್ಳುವುದರೊಂದಿಗೆ ಗಣೇಶ್ 'ಕೂಲ್' ಚಿತ್ರದ ಚಿತ್ರೀಕರಣಕ್ಕೆ ಮಂಗಳ ಹಾಡಿದರು. ನಿರ್ಮಾಪಕಿ ಶಿಲ್ಪಾಗಣೇಶ್ ಸಂಕಲನ, ಮಾತುಗಳ ಜೋಡಣೆ ಹಾಗೂ ಹಿನ್ನಲೆ ಸಂಗೀತದ ಕೆಲಸದಲ್ಲಿ ಬಿಡುವಿಲ್ಲದೆ ತೊಡಗಿಸಿಕೊಂಡಿದ್ದು, ವಿಶ್ವಕಪ್ ಕ್ರಿಕೆಟ್ ಮುಗಿಯುವ ವೇಳೆಗೆ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದ್ದಾರೆ.

  ನಟ ಗಣೇಶ್ ನಿರ್ದೇಶನದ ಚೊಚ್ಚಲ ಚಿತ್ರ 'ಕೂಲ್‌'ಗೆ ಖ್ಯಾತ ಛಾಯಾಗ್ರಾಹಕ ರತ್ನವೇಲು ರವರ ಛಾಯಾಗ್ರಹಣವಿದೆ. 'ಘಜನಿ' ಖ್ಯಾತಿಯ ಸಂಕಲನಕಾರ ಆಂಟನಿಯವರ ಸಂಕಲನವಿದೆ. ರಮೇಶ್‌ದೇಸಾಯಿ ಕಲಾ ನಿರ್ದೆಶನ, ವಿ.ಹರಿಕೃಷ್ಣರ ಸಂಗೀತ, ರವಿಶಂಕರ್ ನಿರ್ಮಾಣ ನಿರ್ವಹಣೆ, ದತ್ತಣ್ಣ, ಯತೀಶ್‌ಕುಮಾರ್ ಮೇಲ್ವಿಚಾರಣೆ ಈ ಚಿತ್ರಕ್ಕಿದೆ. ಗಣೇಶ್, ಸನಾಖಾನ್, ಸಾಧುಕೋಕಿಲಾ, ದೀಪಾ ಶೆಟ್ಟಿ, ಶರಣ್, ಸಂಗೀತಾ ಶೆಟ್ಟಿ, ದತ್ತಣ್ಣ ಮುಂತಾದವರು ಚಿತ್ರದ ತಾರಾಗಣದಲ್ಲಿದ್ದಾರೆ.

  English summary
  Golden Star Ganesh acted and directed Kool, Sakkath Hot Maga films72 days shooting schedule has completed. Now the producer of the film Shilpa Ganesh busy in post production work. After World Cup 2011 the movie to be released.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X