»   » ಪ್ರೇಮ ವಿವಾಹದಲ್ಲಿ ಒಂದಾದ ಸತ್ಯ, ನಿರ್ಮಾಲಾ

ಪ್ರೇಮ ವಿವಾಹದಲ್ಲಿ ಒಂದಾದ ಸತ್ಯ, ನಿರ್ಮಾಲಾ

Posted By:
Subscribe to Filmibeat Kannada

ಬೆಂಗಳೂರಿನ ರಿಜಿಸ್ಟ್ರಾರ್ ಕಚೇರಿಯಲ್ಲಿ ನಟ ಸತ್ಯ (ಆ ದಿನಗಳು ಖ್ಯಾತಿ) ಹಾಗೂ ಕಿರುತೆರೆ ನಟಿ ನಿರ್ಮಾಲಾ ಒಬ್ಬರಿಗೊಬ್ಬರು ಹಾರ ಬದಲಾಯಿಸಿಕೊಳ್ಳುವ ಮೂಲಕ ಸೋಮವಾರ ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಸತ್ಯ ಅಭಿನಯದ 'ಗುಂಡ್ರಗೋವಿ' ಚಿತ್ರ ಬಿಡುಗಡೆಗೆ ಸಜ್ಜಾಗಿದೆ.

ಆ ದಿನಗಳು, ಸ್ಲಂ ಬಾಲ, ದುನಿಯಾ ಚಿತ್ರಗಳು ಸತ್ಯ ಅವರಿಗೆ ಒಳ್ಳೆಯ ಹೆಸರು ತಂದುಕೊಟ್ಟ ಚಿತ್ರಗಳು. ರಘು ಜಯ ನಿರ್ದೇಶಿಸುತ್ತಿರುವ 'ರಾಜಧಾನಿ' ಚಿತ್ರದಲ್ಲೂ ಸತ್ಯ ಅಭಿನಯಿಸುತ್ತಿದ್ದಾರೆ. ಗೀತ ಸಾಹಿತಿ ಹಾಗೂ ಚಿತ್ರ ನಿರ್ದೇಶಕ ನಾಗೇಂದ್ರ ಪ್ರಸಾದ್ ಅವರ 'ವಿನಾಯಕರ ಗೆಳೆಯರ ಬಳಗ' ಚಿತ್ರಕ್ಕೂ ಸತ್ಯ ಸಹಿ ಹಾಕಿದ್ದಾರೆ.

ನಟಿ ನಿರ್ಮಾಲಾ ಸಹ ರಂಗಭೂಮಿ ಹಿನ್ನೆಲೆಯಿಂದ ಬಂದವರು. ಪಾರ್ವತಿ ಪರಮೇಶ್ವರ, ಮುತ್ತಿನ ತೋರಣ, ರಂಗೋಲಿಯಂತಹ ಕಿರುತೆರೆಯ ಜನಪ್ರಿಯ ಧಾರಾವಾಹಿಗಳಲ್ಲಿ ನಿರ್ಮಾಲಾ ಅಭಿನಯಿಸಿದ್ದಾರೆ. ಈಕೆ ಕನ್ನಡದ ವಿಭಿನ್ನ ಚಿತ್ರ 'ಹಾಡು ಹಕ್ಕಿಯನೇರಿ'ಯಲ್ಲೂ ನಟಿಸಿದ್ದಾರೆ.

ಸತ್ಯ ಮತ್ತು ನಿರ್ಮಲಾ ಇಬ್ಬರೂ ಒಟ್ಟಿಗೆ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದವರು. ಒಬ್ಬರನ್ನೊಬ್ಬರು ಮೆಚ್ಚ್ಚಿ, ಒಬ್ಬರ ಇಷ್ಟಗಳು ಇನ್ನೊಬ್ಬರಿಗೆ ತಾಳೆಯಾಗಿ ಈಗ ಪ್ರೇಮ ವಿವಾಹವಾಗಿದ್ದಾರೆ. ರಂಗಾಸಕ್ತರಾದ ಇವರಿಬ್ಬರ ಪ್ರೇಮ ಹತ್ತು ವರ್ಷಗಳ ಹಿಂದೆಯೇ ಚಿಗುರೊಡೆದಿತ್ತು. ಅಂದು ಚಿಗುರಿದ ಪ್ರೇಮ ಇಂದು ಕನಸಾಗಿದೆ. ಸತ್ಯ ಮತ್ತು ನಿರ್ಮಾಲಾ ಅವರಿಗೆ ಮದುವೆಯ ಶುಭಾಶಯಗಳು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada