Just In
Don't Miss!
- News
ಅಕ್ರಮ ಆಸ್ತಿ ಪ್ರಕರಣ: ಶಶಿಕಲಾ ಜೈಲು ಶಿಕ್ಷೆ ಇಂದಿಗೆ ಅಂತ್ಯ, ಆಸ್ಪತ್ರೆಯಿಂದಲೇ ಬಿಡುಗಡೆ ಸಾಧ್ಯತೆ
- Lifestyle
ಬುಧವಾರದ ರಾಶಿಫಲ: ಈ ದಿನ ನಿಮ್ಮ ಭವಿಷ್ಯ ಹೇಗಿದೆ ನೋಡಿ
- Sports
ಸಯ್ಯದ್ ಮುಷ್ತಾಕ್ ಅಲಿ: ಹಿಮಾಚಲ ಪ್ರದೇಶ ಮಣಿಸಿದ ತಮಿಳುನಾಡು
- Education
ECIL Recruitment 2021: 3 ಟೆಕ್ನಿಕಲ್ ಅಧಿಕಾರಿ ಹುದ್ದೆಗಳಿಗೆ ನೇರ ಸಂದರ್ಶನ
- Automobiles
ವಿನೂತನ ಫೀಚರ್ಸ್ಗಳೊಂದಿಗೆ ನ್ಯೂ ಜನರೇಷನ್ ಟಾಟಾ ಸಫಾರಿ ಎಸ್ಯುವಿ ಅನಾವರಣ
- Finance
ಗಣರಾಜ್ಯೋತ್ಸವಕ್ಕೆ ಬಿಎಸ್ಎನ್ಎಲ್ನಿಂದ ವಿಶೇಷ ಆಫರ್
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ತಮಿಳಿಗೆ ಹೈಜಂಪ್ ಮಾಡಿದ 'ಕಳ್ ಮಂಜ' ಕೋಮಲ್
'ಕಳ್ ಮಂಜ' ಚಿತ್ರ ಕೋಮಲ್‌ರ ಲಕ್ಕು, ಲುಕ್ಕು ಎಲ್ಲವನ್ನೂ ಬದಲಾಯಿಸಿದೆ. 'ಕಳ್ ಮಂಜ' ಚಿತ್ರಕ್ಕೆ ರಾಜ್ಯದ ನಾನಾ ಮೂಲೆಗಳಿಂದ ಸಿಕ್ಕಾಪಟ್ಟೆ ರೆಸ್ಪಾನ್ಸ್ ವ್ಯಕ್ತವಾಗಿದೆ. ಈಗ ಕೋಮಲ್ ಮೇಲೆ ನೆರೆರಾಜ್ಯದವರ ಕಣ್ಣು ಬಿದ್ದಿದೆ. ಆಪ್ತಮಿತ್ರ, ಆಪ್ತರಕ್ಷಕ ಖ್ಯಾತಿಯ ನಿರ್ದೇಶಕಪಿ ವಾಸು ತಮ್ಮ ಮುಂದಿನ ಚಿತ್ರದಲ್ಲಿ ಕೋಮಲ್‌ರನ್ನು ತಮಿಳು ಬೆಳ್ಳಿ ಪರದೆಗೆ ಪರಿಚಯಿಸಲಿದ್ದಾರೆ.
ಈ ವಿಷಯವನ್ನು ಇತ್ತೀಚೆಗೆ ಕೋಮಲ್ ತಿಳಿಸಿದರು. ಆದರೆ ಚಿತ್ರದ ವಿವರಗಳನ್ನು ಮಾತ್ರ ಅವರು ಬಿಟ್ಟುಕೊಡಲಿಲ್ಲ. ಶೀಘ್ರದಲ್ಲೇ ಎಲ್ಲಾ ವಿವರಗಳನ್ನು ನೀಡುವುದಾಗಿ ಹೇಳಿದ್ದಾರೆ. ಬಾಕ್ಸಾಫೀಸಲ್ಲಿ 'ಕಳ್ ಮಂಜ' ವ್ಯಾಪಾರ ಜೋರಾಗಿದ್ದು, ನಷ್ಟದ ಸುಳಿಯಿಂದ ಪಾರಾಗಿರುವುದಾಗಿ ಕೋಮಲ್ ಹೇಳಿದರು.
ಒಂದು ವಾರದ ಗಳಿಕೆ ಚಿತ್ರಮಂದಿರದ ಬಾಡಿಗೆ ಮೈನಸ್ ಮಾಡಿದರೆ ರು.85 ಲಕ್ಷ ದಾಟಿದೆಯಂತೆ. ಎಪ್ಪತ್ತೈದು ಚಿತ್ರಮಂದಿರಗಳಲ್ಲಿ 'ಕಳ್ ಮಂಜ' ಬೊಂಬಾಟ್ ಪ್ರದರ್ಶನ ಕಾಣುತ್ತಿದೆ ಎಂಬ ವಿವರಗಳನ್ನು ಚಿತ್ರ ಪ್ರದರ್ಶಕ ಎನ್ ಕುಮಾರ್ ನೀಡಿದ್ದಾರೆ. ಟಿವಿ ಹಕ್ಕುಗಳಿಂದಲೂ ಒಂದಷ್ಟು ದುಡ್ಡು ಕೈಸೇರಿದೆಯಂತೆ.