»   » ಪುನೀತ್, ಪ್ರಿಯಾಮಣಿಯ 'ರಾಮ್'ಸಿದ್ಧ

ಪುನೀತ್, ಪ್ರಿಯಾಮಣಿಯ 'ರಾಮ್'ಸಿದ್ಧ

Posted By:
Subscribe to Filmibeat Kannada

ಆದಿತ್ಯ ಆರ್ಟ್ಸ್ ಎಮ್.ಸಿ.ಎಲ್ ಲಾಂಛನದಲ್ಲಿ ಆದಿತ್ಯಬಾಬು ನಿರ್ಮಿಸಿರುವ ರಾಮ್' ಚಿತ್ರ ಈ ವಾರ ರಾಜ್ಯಾದ್ಯಂತ ತೆರೆ ಕಾಣುತ್ತಿದೆ. ಕಳೆದ ವಾರ ಗಣೇಶ್ ಅವರ ಮಳೆಯಲಿ ಜೊತೆಯಲಿ ಚಿತ್ರದ ಜೊತೆ ಬಿಡುಗಡೆಯಾಗುಲು ಸಿದ್ಧವಾಗಿದ್ದ ರಾಮ್ ಚಿತ್ರವನ್ನು ದಿಢೀರ್ ಎಂದು ಮುಂದೂಡಲಾಗಿತ್ತು. ಆದರೆ, ಇದು 'ಮಳೆಯಲಿ..'ಚಿತ್ರದ ಕಾರಣಕ್ಕೆ ಅಲ್ಲ ಎಂಬುದು ರಾಮ್ ತಂಡದ ವಾದ. ಅದೇನೇ ಇರಲಿ, ಪುನೀತ್ ಅಭಿನಯನದ ಮತ್ತೊಂದು ರಿಮೇಕ್ ಚಿತ್ರ ಅವರ ಅಭಿಮಾನಿಗಳಿಗೆ ಸಿಗಲಿದೆ.

ಅಪಾರ ವೆಚ್ಚದಲ್ಲಿ, ಅದ್ದೂರಿ ತಾರಾಗಣದೊಂದಿಗೆ ನಿರ್ಮಾಣವಾಗಿರುವ ಈ ಚಿತ್ರವನ್ನು ಕೆ.ಮಾದೇಶ್ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಚಿತ್ರಕಥೆಯನ್ನೂ ಇವರೇ ಬರೆದಿದ್ದಾರೆ. ಪವರ್‌ಸ್ಟಾರ್ ಪುನೀತ್‌ರಾಜಕುಮಾರ್ ಚಿತ್ರದ ನಾಯಕನಾದರೆ, ದಕ್ಷಿಣ ಭಾರತದ ಖ್ಯಾತ ನಟಿ ಪ್ರಿಯಾಮಣಿ ರಾಮ್ ನ ನಾಯಕಿಯಾಗಿ ಅಭಿನಯಿಸಿದ್ದಾರೆ. ಇದು ಪ್ರಿಯಾಮಣಿ ನಟಿಸಿರುವ ಪ್ರಥಮ ಕನ್ನಡ ಚಿತ್ರ ಕೂಡ.

ವಿವಿಧ ಸಾಹಿತಿಗಳು ರಚಿಸಿರುವ ಚಿತ್ರದ ಗೀತೆಗಳಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದು, ಧ್ವನಿಸುರುಳಿಗಳು ಕೇಳುಗರ ಮನ ಗೆದ್ದಿದೆ. ಕೆ.ಕೃಷ್ಣಕುಮಾರ್ ಅವರ ಛಾಯಾಗ್ರಹಣವಿರುವ ಈ ಚಿತ್ರಕ್ಕೆ ದೀಪು ಎಸ್ ಕುಮಾರ್ ಸಂಕಲನವಿದೆ. ಪಳನಿರಾಜ್, ರವಿವರ್ಮ ಸಾಹಸ, ಎಂ.ಎಸ್.ರಮೇಶ್ ಸಂಭಾಷಣೆ ಹಾಗೂ ಮೋಹನ್ ಬಿ ಕೆರೆ ಕಲಾ ನಿರ್ದೇಶನವಿರುವ ಚಿತ್ರದ ತಾರಾಬಳಗದಲ್ಲಿ ಪುನೀತ್‌ರಾಜಕುಮಾರ್, ಪ್ರಿಯಾಮಣಿ, ರಂಗಾಯಣ ರಘು, ಸಾಧುಕೋಕಿಲಾ, ಶ್ರೀನಾಥ್, ಸಂಗೀತಾ, ಚಿತ್ರಾಶೆಣೈ, ಜ್ಯೋತಿ,ದೊಡ್ಡಣ್ಣ, ಪದ್ಮಾವಾಸಂತಿ ಮುಂತಾದವರಿದ್ದಾರೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada