ಗುರು ಶಿಷ್ಯರು ಖ್ಯಾತಿಯ ನಟ ರತ್ನಾಕರ್ ಇನ್ನಿಲ್ಲ

ರತ್ನಾಕರ್ ಅವರು ಸರಿಸುಮಾರು 350ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಅವರು ಹೆಚ್ಚಾಗಿ ಗುರುತಿಸಿಕೊಂಡಿದ್ದು ಹಾಸ್ಯನಟನಾಗಿ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದ ಅವರ ಚಿಕಿತ್ಸೆಗೆ ಕನ್ನಡ ಚಿತ್ರೋದ್ಯಮ ಅಷ್ಟಾಗಿ ಸ್ಪಂದಿಸಲಿಲ್ಲ ಎಂಬುದು ಖೇದಕರ ವಿಚಾರ. ಬೆರಳೆಣಿಕೆಯಷ್ಟು ಕಲಾವಿದರು ಮಾತ್ರ ಅವರ ಆರೋಗ್ಯವನ್ನು ವಿಚಾರಿಸಿ ಕೈಲಾದ ಸಹಾಯ ಮಾಡಿದ್ದರು.
ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಹ ಮೈಸೂರಿನ ಅವರ ಸ್ವಗೃಹಕ್ಕೆ ಭೇಟಿ ನೀಡಿ ರು.25,000 ಸಹಾಯ ಮಾಡಿದ್ದರು. ರತ್ನಾಕರ್ ಅವರು ಅಭಿನಯಿಸಿದ ಚಿತ್ರಗಳೆಂದರೆ ಗುರು ಶಿಷ್ಯರು, ಅಣ್ಣಯ್ಯ, ಗಡಿಬಿಡಿ ಗಂಡ, ಕೆಂಪಯ್ಯ ಐಪಿಎಸ್, ಭಕ್ತ ಕನಕದಾಸ, ಬಯಲು ದೀಪ...ಹೀಗೆ ಚಿತ್ರಗಳ ಪಟ್ಟಿ ಬೆಳೆಯುತ್ತದೆ. ಸಾಹಸ ಸಿಂಹ ವಿಷ್ಣುವರ್ಧನ್ ಅವರ ಕೊನೆಯ ಚಿತ್ರ 'ಆಪ್ತ ರಕ್ಷಕ' ಚಿತ್ರದಲ್ಲೂ ಅಭಿನಯಿಸಿದ್ದರು.
ಮೈಸೂರು ಕೆ ಎಂ ರತ್ನಾಕರ್ ಗುರು ಶಿಷ್ಯರು ಜೆಎಸ್ ಎಸ್ ಆಸ್ಪತ್ರೆ ಅಣ್ಣಯ್ಯ ಗಡಿಬಿಡಿ ಗಂಡ ಭಕ್ತ ಕನಕದಾಸ k m rathnakar mysore jss hospital kanakadasa guru shishyaru annaiah gadibidi ganda obituary


Click it and Unblock the Notifications