For Quick Alerts
  ALLOW NOTIFICATIONS  
  For Daily Alerts

  ಮಿಸ್ ಇಂಡಿಯಾ ಕಿರೀಟ ತೊಟ್ಟ ಕರ್ನಾಟಕ ಮೂಲದ ಸಿನಿ ಶೆಟ್ಟಿ: ಇವರ ಹಿನ್ನೆಲೆಯೇನು?

  |

  2022ನೇ ಸಾಲಿನ ಪ್ರತಿಷ್ಠಿತ ಮಿಸ್ ಇಂಡಿಯಾ ಪಟ್ಟ ಕರ್ನಾಟಕದ ಬೆಡಗಿಗೆ ಒಲಿದು ಬಂದಿದೆ. ಜುಲೈ 3ರಂದು ಮುಂಬೈನ ಜಿಯೋ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಮಿಸ್ ಇಂಡಿಯಾ 2022 ಆಗಿ ಆಯ್ಕೆಯಾಗಿದ್ದಾರೆ.

  ಮುಂಬೈನಲ್ಲಿ ನಡೆದ ರಂಗು ರಂಗಿನ ಕಾರ್ಯಕ್ರಮದಲ್ಲಿ 21 ವರ್ಷದ ಸಿನಿ ಶೆಟ್ಟಿಗೆ 2022ನೇ ಸಾಲಿನ ಮಿಸ್ ಇಂಡಿಯಾ ಕಿರೀಟವನ್ನು ತೊಡಿಸಲಾಯಿತು. 2020ನೇ ಸಾಲಿನಲ್ಲಿ ಮಿಸ್ ಇಂಡಿಯಾ ಪಟ್ಟ ಗೆದ್ದಿದ್ದ ತೆಲಂಗಾಣದ ಮಾನಸ ವಾರಣಾಸಿ ಕಿರೀಟ ತೊಡಿಸಿದ್ದಾರೆ.

  'ಅವನೇ ಶ್ರೀಮನ್ನಾರಾಯಣ' ಕಲಿಸಿದ ಪಾಠವೇ '777 ಚಾರ್ಲಿ' ಗೆಲುವು- ರಕ್ಷಿತ್ ಶೆಟ್ಟಿ!'ಅವನೇ ಶ್ರೀಮನ್ನಾರಾಯಣ' ಕಲಿಸಿದ ಪಾಠವೇ '777 ಚಾರ್ಲಿ' ಗೆಲುವು- ರಕ್ಷಿತ್ ಶೆಟ್ಟಿ!

  ಸಿನಿ ಶೆಟ್ಟಿ ಜೊತೆಗೆ ರಾಜಸ್ಥಾನದ ರುಬಲ್ ಶೇಖಾವತ್ ಫೇಮಿನಾ ಮಿಸ್ ಇಂಡಿಯಾ 2022ರ ಮೊದಲ ರನ್ನರ್ ಅಪ್ ಹಾಗೂ ಉತ್ತರ ಪ್ರದೇಶದ ಶಿನಾಟ ಚೌಹಾನ್ ಸೆಕೆಂಡ್ ರನ್ನರ್ ಅಪ್‌ ಆಗಿ ಆಯ್ಕೆಯಾಗಿದ್ದಾರೆ.

  ಸಿನಿ ಶೆಟ್ಟಿ ಯಾರು?

  ಸಿನಿ ಶೆಟ್ಟಿ ಯಾರು?

  ದೇಶದ ಮೂಲೆ ಮೂಲೆಯಲ್ಲಿರುವ ಪ್ರತಿಭೆಗಳನ್ನು ಹೈಬ್ರಿಡ್ ವಿಧಾನದ ಮೂಲಕ ಲಾಂಚ್ ಮಾಡಲಾಗಿತ್ತು. ವರ್ಚ್ಯುವಲ್ ಮೂಲಕ ಆಡಿಷನ್ ಮಾಡಲಾಗಿತ್ತು. ಈ ಆಡಿಷನ್‌ನಲ್ಲಿ ಆಯ್ಕೆಯಾದವರು ಮುಂಬೈಗೆ ಬಂದು ತರಬೇತಿ ಹಾಗೂ ಸೌಂದರ್ಯ ವೃದ್ದಿಯನ್ನು ಮಾಡಿಕೊಂಡಿದ್ದರು. ಸುಮಾರು 31 ರಾಜ್ಯದಿಂದ ಆಯ್ಕೆಯಾಗಿದ್ದ ಪ್ರತಿಭೆಗಳಲ್ಲಿ ಕರ್ನಾಟಕದ ಸಿನಿ ಶೆಟ್ಟಿ ಮಿಸ್ ಇಂಡಿಯಾ ಆಗಿ ಆಯ್ಕೆಯಾಗಿದ್ದಾರೆ.

  ಸಿನಿ ಶೆಟ್ಟಿ ಹಿನ್ನೆಲೆಯೇನು?

  ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸುತ್ತಿರುವ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದ್ದಾರೆ. 21 ವರ್ಷದ ಸಿನಿ ಶೆಟ್ಟಿ ಅಕೌಂಟಿಂಗ್ ಹಾಗೂ ಫೈನಾನ್ಸ್‌ನಲ್ಲಿ ಪದವಿಯನ್ನು ಪಡೆದಿದ್ದಾರೆ. ಹಾಗೆ ಇವರು ಪರಿಣಿತಿ ಪಡೆದ ಕ್ಲಾಸಿಕ್ ಡ್ಯಾನ್ಸರ್ ಕೂಡ ಹೌದು. 14 ವರ್ಷವಿರುವಾಗಲೇ ಭರನಾಟ್ಯಂನಲ್ಲಿ ರಂಗಪ್ರವೇಶ ಮಾಡಿದ್ದರು. ಸದ್ಯಕ್ಕೀಗ ಸಿನಿ ಶೆಟ್ಟಿ ಸಿಎಫ್‌ಎ ವೃತ್ತಿಪರ ಕೋರ್ಸ್ ಪಡೆಯುತ್ತಿದ್ದಾರೆ. ಅಲ್ಲದೆ ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವೂ ಇದೆ.

  ಸಿನಿ ಶೆಟ್ಟಿ ಧ್ಯೇಯ!

  ಸಿನಿ ಶೆಟ್ಟಿ ಧ್ಯೇಯ!

  21 ವರ್ಷದ ಸಿನಿ ಶೆಟ್ಟಿ ಮುಖ್ಯ ಧ್ಯೇಯ ಹೀಗಿದೆ." ನೀವು ದಿಢೀರನೇ ಅಂತ್ಯದೆಡೆಗೆ ಜಿಗಿಯಲು ಸಾಧ್ಯವಿಲ್ಲ. ಈ ಪ್ರಯಾಣ ತುಂಬಾನೇ ಅತ್ಯುತ್ತಮವಾಗಿತ್ತು . ನಿಮಗೆ ಸಾಧನೆ ಅಂದರೆ ಏನು ಎಂಬುದನ್ನುತಿಳಿದುಕೊಳ್ಳಿ ಮತ್ತು ಅದನ್ನು ಗೌರವಿಸಿ. ಪ್ರತಿಯೊಬ್ಬ ಮಹಿಳೆಯೂ ನಿಷ್ಠುರ, ಶ್ರಮಶೀಲ ಮತ್ತು ಸಹಾನುಭೂತಿ." ಎಂದು ಫೆಮಿನಾ ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸಿನಿ ಶೆಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

  ತೀರ್ಪುಗಾರು ಯಾರು?

  ತೀರ್ಪುಗಾರು ಯಾರು?

  ಪ್ರತಿಷ್ಠಿತ ಮಿಸ್ ಇಂಡಿಯಾಗೆ ತೀರ್ಪುಗಾರರಾಗಿ ಗಣ್ಯರು ಭಾಗವಹಿಸಿದ್ದರು. ನಟಿಸ ನೇಹಾ ಧುಪಿಯಾ, ಮಲೈಕಾ ಅರೋರಾ, ಡಿಸೈನರ್ ರೋಹಿತ್ ಗಾಂಧಿ ಹಾಗೂ ರಾಹುಲ್ ಖನ್ನ, ಕೊರಿಯೋಗ್ರಾಫರ್ ಶಿಯಾಮಕ್ ದಾವರ್, ಮಾಜಿ ಕ್ರಿಕೆಟ್ ಆಟಗಾರ್ತಿ ಮಿಥಾಲಿ ರಾಜ್ ಜ್ಯೂರಿಯಾಗಿ ಭಾಗವಹಿಸಿದ್ದರು.

  English summary
  21-year-old Sini Shetty from Karnataka was crowned Miss India 2022, Know More.
  Monday, July 4, 2022, 19:26
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X