Just In
Don't Miss!
- News
50 ಸಾವಿರ ಪಾಯಿಂಟ್ ದಾಟಿದ ಸೂಚ್ಯಂಕ, ಹೂಡಿಕೆದಾರರು ಸಂತಸ
- Sports
ಐಪಿಎಲ್ 2021: ಬಿಡುಗಡೆಗೊಳಿಸಿದಕ್ಕೆ ಧನ್ಯವಾದ ಎಂದ ಪಾರ್ಥಿವ್ ಪಟೇಲ್
- Automobiles
ಮೂರು ತಿಂಗಳಲ್ಲಿ ಆರು ಕೋಟಿಗೂ ಹೆಚ್ಚು ದಂಡ ತೆತ್ತ ವಾಹನ ಸವಾರರು
- Finance
50 ಸಾವಿರ ಪಾಯಿಂಟ್ ಗಡಿ ದಾಟಿದ ಸೆನ್ಸೆಕ್ಸ್; ನಿಫ್ಟಿ 14700 ಪಾಯಿಂಟ್ ಆಚೆಗೆ
- Lifestyle
ನಿಮ್ಮ ಕೋಮಲ ತುಟಿಗಳಿಗಾಗಿ ಮನೆಯಲ್ಲಿಯೇ ತಯಾರಿಸಿ ಈ ಲಿಪ್ ಬಾಮ್ ಗಳನ್ನು...
- Education
WAPCOS Recruitment 2021: 11 ಇಂಜಿನಿಯರ್ ಹುದ್ದೆಗಳಿಗೆ ಅರ್ಜಿ ಆಹ್ವಾನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಬಾಬ್ರಿ ಮಸೀದಿ ತೀರ್ಪಿನಂದು ಅದ್ದೂರಿಗೆ ಚಾಲನೆ
ಆಕ್ಷನ್ ಕಿಂಗ್ ಅರ್ಜು ನ್ ಸರ್ಜಾ ಅವರ ಸಂಬಂಧಿ ಧ್ರುವ ಸರ್ಜಾ ನಾಯಕ ನಟನಾಗಿ ಅಭಿನಯಿಸುತ್ತಿರುವ 'ಅದ್ದೂರಿ' ಚಿತ್ರದ ಚಿತ್ರೀಕರಣ ಮುಂದೂಡಲ್ಪಟ್ಟಿದೆ. ಸೆಪ್ಟೆಂಬರ್ 15ರಂದೇ ಈ ಚಿತ್ರ ಸೆಟ್ಟೇರಬೇಕಾಗಿತ್ತು. ಚಿತ್ರೀಕರಣಕ್ಕೆ ಅನುವಾದ ಹವಾಮಾನ ಇಲ್ಲ ಎಂಬ ಕಾರಣಕ್ಕೆ ಚಿತ್ರೀಕರಣನ್ನು ಸೆಪ್ಟೆಂಬರ್ 24ಕ್ಕೆ ಮುಂದೂಡಲಾಗಿದೆ. ಅಂದರೆ ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ತೀರ್ಪು ಹೊರಬೀಳುವ ದಿನ.
'ಅದ್ದೂರಿ' ಚಿತ್ರದ ಚಿತ್ರೀಕರಣ ಊಟಿಯಲ್ಲಿ ಆರಂಭವಾಗಬೇಕಿತ್ತು. ಆದರೆ ಊಟಿಯಲ್ಲಿ ಧೋ ಎಂದು ಮಳೆ ಸುರಿಯುತ್ತಿದೆ. ಮೋಡಗಳ ಮರೆಗೆ ಸರಿದಿರುವ ಸೂರ್ಯ ಮುಖ ತೋರಿಸದ ಹೊರತು ಚಿತ್ರೀಕರಣ ಸಾಧ್ಯವಿಲ್ಲ. ಹಾಗಾಗಿ ಚಿತ್ರೀಕರಣಕ್ಕೆ ಪ್ಯಾಕಪ್ ಹೇಳಲಾಗಿದೆ ಎಂದು ಚಿತ್ರದ ನಾಯಕಿ ರಾಧಿಕಾ ಪಂಡಿತ್ ತಿಳಿಸಿದ್ದಾರೆ.
ಏತನ್ಮಧ್ಯೆ ಬಿಡುಗಡೆಗೆ ಸಜ್ಜಾಗಿರುವ 'ಗಾನ ಬಜಾನ' ಚಿತ್ರದ ಪ್ರಚಾರದಲ್ಲಿ ರಾಧಿಕಾ ಪಂಡಿತ್ ಬಿಜಿಯಾಗಿದ್ದಾರೆ. ಆಕೆ ಅಭಿನಯದ 'ಕೃಷ್ಣನ್ ಲವ್ ಸ್ಟೋರಿ' ಚಿತ್ರ ಶತಕ ಬಾರಿಸಿರುವ ಬಗ್ಗೆಯೂ ರಾಧಿಕಾ ಸಂತಸ ವ್ಯಕ್ತಪಡಿಸಿದ್ದಾರೆ. ಅಂದಹಾಗೆ 'ಅದ್ದೂರಿ' ಚಿತ್ರಕ್ಕೆ ಶಂಕರ್ ರೆಡ್ಡಿ ನಿರ್ಮಾಪಕರು. ಎಪಿ ಅರ್ಜುನ್ ನಿರ್ದೇಶಿಸುತ್ತಿರುವ ಚಿತ್ರಕ್ಕೆ ವಿ ಹರಿಕೃಷ್ಣ ಸಂಗೀತ ಸಂಯೋಜನೆ ಇದೆ.