For Quick Alerts
  ALLOW NOTIFICATIONS  
  For Daily Alerts

  ಫೆ. 23ರಂದು ದೇಶದಾದ್ಯಂತ 9000 ಚಿತ್ರಮಂದಿರ ಬಂದ್

  By Rajendra
  |

  ಕೇಂದ್ರ ಸರಕಾರವು ಚಿತ್ರೋದ್ಯಮದ ಮೇಲೆ ವಿಧಿಸಿರುವ ಸೇವಾ ತೆರಿಗೆ ನೀತಿ ವಿರೋಧಿಸಿ ಇಡೀ ಭಾರತೀಯ ಚಲನಚಿತ್ರೋದ್ಯಮ ಭಾರತ ಬಂದ್‌ಗೆ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ 9,0000 ಚಲನಚಿತ್ರ ಮಂದಿರಗಳು ಫೆಬ್ರವರಿ 23ರಂದು ಅಕ್ಷರಶಃ ಬಂದ್ ಆಗಲಿವೆ.

  ಗುರುವಾರ (ಫೆ.23) ಚಲನಚಿತ್ರೋದ್ಯಮಕ್ಕೆ ಸಂಬಂಧಪಟ್ಟ ಚಲನಚಿತ್ರ ನಿರ್ಮಾಪಕರು, ವಿತರಕರು, ಪ್ರದರ್ಶಕರು, ನಿರ್ದೇಶಕರು, ಕಲಾವಿದರು, ಕಾರ್ಮಿಕ ಕಲಾವಿದ ತಂತ್ರಜ್ಞರ ಒಕ್ಕೂಟದ ಸದಸ್ಯರು, ಛಾಯಾಗ್ರಾಹಕರು, ಸಂಕಲನಕಾರರನ್ನೊಳಗೊಂಡ ಎಲ್ಲಾ ಚಲನಚಿತ್ರೋದ್ಯಮದ ಬಂಧುಗಳು ತಮ್ಮ ಎಲ್ಲಾ ಕಾರ್ಯ ಚಟುವಟಿಕೆಗಳನ್ನು ಸ್ಥಗಿತಗೊಳಿಸಲಿದ್ದಾರೆ.

  ಈ ಸಂಬಂಧ ಬೆಳಗ್ಗೆ 10.30ಕ್ಕೆ ಕನ್ನಡ ಚಲನಚಿತ್ರೋದ್ಯಮ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ರಾಜಭವನಕ್ಕೆ ತೆರಳುವ ಮೆರವಣಿಗೆಯಲ್ಲಿ ಇಡೀ ಕನ್ನಡ ಚಿತ್ರೋದ್ಯಮ ಸಕ್ರಿಯವಾಗಿ ಭಾಗವಹಿಸಲಿದೆ.

  ಭಾರತ ಚಲನಚಿತ್ರಗಳ ಒಕ್ಕೂಟದ ಸಂಘಟಕರು ಮತ್ತು ಪ್ರದರ್ಶನಕರು ಕಳೆದ ವಾರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅವರನ್ನು ಭೇಟಿ ಮಾಡಿದ್ದರು. ಶೇ.10.3ರಷ್ಟು ಸೇವಾ ತೆರಿಗೆಯನ್ನು ವಾಪಸು ಪಡೆಯಬೇಕೆಂದು ಅವರಲ್ಲಿ ವಿನಂತಿಸಿಕೊಂಡಿದ್ದರು. ಆದರೆ ಅವರ ಭೇಟಿ ಫಲಪ್ರದವಾಗದ ಹಿನ್ನೆಲೆಯಲ್ಲಿ ಬಂದ್‌ಗೆ ಕರೆಕೊಡಲಾಗಿದೆ. ಈ ಪ್ರತಿಭಟನೆಯಲ್ಲಿ ಮಲ್ಟಿಫ್ಲೆಕ್ಸ್‌ಗಳು ಪಾಲ್ಗೊಳ್ಳುತ್ತಿಲ್ಲ. (ಒನ್‌ಇಂಡಿಯಾ ಕನ್ನಡ)

  English summary
  South Indian Film Chamber of Commerce, Film Federation of India (FFI) with the All India Producers Guild, Indian Motion Pictures Producers’ Association and all film chambers of India called a bandh on 23rd February. All over India 9,000 theaters are closed for protesting against the introduction of service tax by the Central government. The Kannada film industry has called a bandh on February 23.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X