»   » ನವ್ಯಾನಾಯರ್, ರೇಖಾ ಜೊತೆ ಬಾಸ್ ಬರ್ತಾವ್ನೆ

ನವ್ಯಾನಾಯರ್, ರೇಖಾ ಜೊತೆ ಬಾಸ್ ಬರ್ತಾವ್ನೆ

Posted By:
Subscribe to Filmibeat Kannada

ದರ್ಶನ್ ದ್ವಿಪಾತ್ರದಲ್ಲಿ ನಟಿಸಿರುವ 'ಬಾಸ್' ಚಿತ್ರದ ನಾಯಕಿಯರು ನವ್ಯನಾಯರ್ ಮತ್ತು ರೇಖಾ. ಶಿವಾಜಿಪ್ರಭು, ರಂಗಾಯಣರಘು, ಸುಮಿತ್ರ, ಬುಲೆಟ್‌ಪ್ರಕಾಶ್, ಉಮಾಶ್ರೀ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ರಮೇಶ್‌ಯಾದವ್ ಮೂವೀಸ್ ಲಾಂಛನದಲ್ಲಿ ರಮೇಶ್‌ಯಾದವ್ ನಿರ್ಮಿಸುತ್ತಿರುವ 'ಬಾಸ್' ಚಿತ್ರಕ್ಕೆ ಮಂಜರಿ ಸ್ಟುಡಿಯೋದಲ್ಲಿ ಡಿಟಿಎಸ್ ಅಳವಡಿಸಲಾಗುತ್ತಿದೆ. ಸದ್ಯದಲ್ಲೇ ಚಿತ್ರದ ಧ್ವನಿಸುರುಳಿ ಬಿಡುಗಡೆ ಮಾಡುವುದಾಗಿ ನಿರ್ಮಾಪಕರು ತಿಳಿಸಿದ್ದಾರೆ.

ಕರ್ನಾಟಕದ ರಮಣೀಯ ಸ್ಥಳಗಳಲ್ಲಿ ಚಿತ್ರದ ಬಹುತೇಕ ಚಿತ್ರೀಕರಣ ನಡೆದಿದ್ದು, ಕೆಲವು ಹಾಡುಗಳು ವಿದೇಶದಲ್ಲಿ ಚಿತ್ರೀಕರಣಗೊಂಡಿದೆ. ರಘುರಾಜ್ ಕಥೆ, ಚಿತ್ರಕಥೆ ಬರೆದು ನಿರ್ದೇಶಿಸುತ್ತಿರುವ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದಾರೆ. ಕೆ.ಕೃಷ್ಣಕುಮಾರ್ ಛಾಯಾಗ್ರಹಣ, ಪಿ.ಅರ್.ಸೌಂದರ್‌ರಾಜ್ ಸಂಕಲನ, ಬಿ.ಎ.ಮಧು ಸಂಭಾಷಣೆ, ಪಳನಿರಾಜ್, ರವಿವರ್ಮ ಸಾಹಸ, ಚಿನ್ನಿಪ್ರಕಾಶ್, ಜಾನಿ ನೃತ್ಯ ಹಾಗೂ ಕವಿರಾಜ್, ನಾಗೇಂದ್ರಪ್ರಸಾದ್ ಅವರ ಗೀತರಚನೆ 'ಬಾಸ್' ಚಿತ್ರಕ್ಕಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada