»   » ಕೇವಲ ರು.40ಕ್ಕೆ ಜೋಗಯ್ಯ ನಕಲಿ ಸಿಡಿ ಲಭ್ಯ ಗುರು!

ಕೇವಲ ರು.40ಕ್ಕೆ ಜೋಗಯ್ಯ ನಕಲಿ ಸಿಡಿ ಲಭ್ಯ ಗುರು!

Posted By:
Subscribe to Filmibeat Kannada

ಚಿತ್ರ ಬಿಡುಗಡೆಯಾಗಿ ಇನ್ನು ವಾರವೂ ಕಳೆದಿಲ್ಲ, ಆಗಲೆ 'ಜೋಗಯ್ಯ' ಚಿತ್ರದ ನಕಲಿ ಸಿಡಿಗಳು ಬೆಂಗಳೂರಿನಲ್ಲಿ ಭರ್ಜರಿಯಾಗಿ ಬಿಕರಿಯಾಗುತ್ತಿವೆ. ಕೇವಲ ರು.40ಕ್ಕೆ 'ಜೋಗಯ್ಯ' ಸಿಡಿಗಳು ಲಭ್ಯವಾಗುತ್ತಿವೆ ಎಂಬ ಮಾಹಿತಿ ದಟ್ಸ್‌ಕನ್ನಡಕ್ಕೆ ಲಭ್ಯವಾಗಿದೆ. ನಕಲಿ ಸಿಡಿ ಮಾರಾಟ ಹೀಗೆ ಮುಂದುವರಿದರೆ 'ಜೋಗಯ್ಯ' ಜೋಳಿಗೆ ತುಂಬುವುದು ಅನುಮಾನ.

ಹೌಸ್‌ಫುಲ್ ಪ್ರದರ್ಶನ ಕಾಣುತ್ತಿರುವ ಜೋಗಯ್ಯ ಚಿತ್ರದ ಟಿಕೆಟ್‌ಗಳು ಸದ್ಯಕ್ಕೆ ದೊರೆಯುವುದು ಕಷ್ಟ. ಆದರೆ ಜೋಗಯ್ಯ ನಕಲಿ ಸಿಡಿಗಳು ಮಾತ್ರ ಕೇವಲ ರು.40ಕ್ಕೆ ದೊರೆಯುತ್ತಿದೆ. ಬೆಂಗಳೂರಿನ ರಸ್ತೆಬದಿಗಳಲ್ಲಿ ಕದ್ದುಮುಚ್ಚಿ ವ್ಯಾಪಾರ ಜೋರಾಗಿ ನಡೆಯುತ್ತಿದೆ.

ಶಿವಾಜಿನಗರದ ರಸ್ತೆ ಬದಿಯ ವ್ಯಾಪಾರಿಯೊಬ್ಬನನ್ನು ಕೇಳಿದಾಗ. ರು.40ಕ್ಕೆ ಆತ ಸಿಡಿ ಕೊಟ್ಟ ಎಂದು ಓದುಗರೊಬ್ಬರು ತಿಳಿಸಿದ್ದಾರೆ. ರು.200, ರು.300 ಕೊಟ್ಟು ಚಿತ್ರ ನೋಡುವುದಕ್ಕಿಂತ ಕೇವಲ ರು.40 ಸಿಡಿ ತಗೊಳ್ಳುವುದು ಉತ್ತಮ ಅಲ್ಲವೆ? ಎಂಬ ಲಾಜಿಕ್ಕಿಗೆ ಬಂದಿದ್ದಾರೆ ಜನ.

ಮೆಜೆಸ್ಟಿಕ್ ಹಾಗೂ ಇಂದಿರಾನಗರದಲ್ಲೂ ನಕಲಿ ಸಿಡಿಗಳ ಭರಾಟೆ ಜೋರಾಗಿದೆ. ಶಿವಾಜಿನಗರ, ಜಯನಗರ, ಟ್ಯಾನರಿ ರಸ್ತೆಗಳಲ್ಲಂತೂ 'ಜೋಗಯ್ಯ' ನಕಲಿ ಸಿಡಿಗಳು ಬಿಸಿಬಿಸಿ ಬಜ್ಜಿ ಬೋಂಡಾಗಳಂತೆ ಬಿಕರಿಯಾಗುತ್ತಿವೆ. 'ಜೋಗಯ್ಯ' ಚಿತ್ರತಂಡ ಕೈಕಟ್ಟಿ ಕುಳಿತರೆ ಅಪಾಯ ಕಟ್ಟಿಟ್ತ ಬುತ್ತಿ. (ಏಜೆನ್ಸೀಸ್)

English summary
Hat Trick Hero Shivarajkumar lead Kannada movie Jogayya pirated CDs made available for just Rs40 in Bangalore. A source in the piracy business, said that there has been record sales of the DVDs in areas like Shivajinagar, Tannery Road and Jayanagar.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada