For Quick Alerts
  ALLOW NOTIFICATIONS  
  For Daily Alerts

  ಕರ್ನಾಟಕ ಚಲನಚಿತ್ರ ಅಕಾಡೆಮಿಯಿಂದ ಚಿತ್ರಶಾಲೆ

  By Rajendra
  |

  ಬೆಳ್ಳಿಮಂಡಲ ಎಂಬ ಚಲನಚಿತ್ರ ಸೊಸೈಟಿಯನ್ನು ಎಲ್ಲಾ ಜಿಲ್ಲೆಗಳಲ್ಲಿ ಹುಟ್ಟುಹಾಕುವ ಮೂಲಕ ಸಹೃದಯಿ ಪ್ರೇಕ್ಷಕರನ್ನು ರೂಪಿಸಲು ಯತ್ನಿಸಲಾಗುತ್ತಿದೆ. 22ಜಿಲ್ಲೆಗಳಲ್ಲಿ ಬೆಳ್ಳಿ ಮಂಡಲದ ಮೂಲಕ ಅತ್ಯುತ್ತಮ ಚಿತ್ರಗಳ ಪ್ರದರ್ಶನ ಏರ್ಪಡಿಸಲಾಗುತ್ತಿದೆ ಎಂದು ಅವರು ತಿಳಿಸಿದರು.ಶಾಲೆ ಕಾಲೇಜುಗಳಲ್ಲಿ ಸದಭಿರುಚಿಯ ಶೈಕ್ಷಣಿಕ ಮೌಲ್ಯದ ಚಿತ್ರಗಳನ್ನು ಪ್ರದರ್ಶಿಸುವ ಬೆಳ್ಳಿ ಸಾಕ್ಷಿ ಕಾರ್ಯಕ್ರಮದ ಮೂಲಕ ಶಿಕ್ಷಣಕ್ಕೆ ಪೂರಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ನಾಗಾಭರಣ ನುಡಿದರು.

  ಇದಲ್ಲದೆ ಚಿತ್ರರಂಗಕ್ಕೆ ಸಂಬಂಧಿಸಿದ ಹಲವಾರು ಪ್ರಕಟಣೆಗಳನ್ನು ಹೊರತರಲು ಉದ್ದೇಶಿಸಲಾಗಿದೆ. 2000ದಿಂದ 2010ರ ವರೆಗಿನ ಚಿತ್ರರಂಗದ ಇತಿಹಾಸ, ರಾಜ್ಯ, ರಾಷ್ಟ್ರ, ಅಂತರರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದ ಚಿತ್ರಗಳ ಮಾಹಿತಿ ಒದಗಿಸುವ ಪುಸ್ತಕ ಪ್ರಕಟಿಸಲು ಉದ್ದೇಶಿಸಲಾಗಿದೆ ಎಂದು ಅವರು ತಿಳಿಸಿದರು.

  ಅಪರೂಪದ ಚಿತ್ರಗಳ ಸಂಗ್ರಹ, ಲೈಬ್ರರಿ, ದಾಖಲೀಕರಣ ಹಾಗೂ ಹಿರಿಯ ಕುರಿತ ಕಿರುಚಿತ್ರ ಹೀಗೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಉದ್ದೇಶವಿದ್ದು, ಅಕಾಡೆಮಿಯು ಸರ್ಕಾರದಿಂದ ಹೆಚ್ಚಿನ ಅನುದಾನ ನಿರೀಕ್ಷೆಯಲ್ಲಿದೆ ಎಂದು ಹೇಳಿದರು. ಕೇಂದ್ರ ಸರ್ಕಾರದ ಮಾಡ್ಯುಲರ್ ಎಂಪ್ಲಾಯ್‌ಮೆಂಟ್ ಸ್ಕೀಂ ಅಡಿಯಲ್ಲಿ ಅಭ್ಯರ್ಥಿಗಳಿಗೆ ತರಬೇತಿ ನೀಡಲು ಚಲನಚಿತ್ರ ಕ್ಷೇತ್ರಕ್ಕೆ ಸಂಬಂಧಿಸಿದಂತೆ 15 ಕೌಶಲ್ಯಗಳನ್ನು ಗುರುತಿಸಿ ತರಬೇತಿ ರೂಪುರೇಷೆಗಳನ್ನು ರೂಪಿಸಿ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ.

  ರಾಜ್ಯ ಅಕಾಡೆಮಿಯು ಭಾರತದಲ್ಲಿ ಮೊದಲಬಾರಿಗೆ ಈ ಕೆಲಸ ಮಾಡಿದೆ ಎಂದು ಅವರು ತಿಳಿಸಿದರು. ಚಲನಚಿತ್ರ ಶೈಕ್ಷಣಿಕ ನೀತಿ ಇಂದಿನ ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಚಲನಚಿತ್ರ ಶಾಲೆಯೊಂದನ್ನು ಸ್ಥಾಪಿಸುವ ಉದ್ದೇಶವಿದೆ. ಒಂದೇ ಸೂರಿನಡಿ ಚಲನಚಿತ್ರ ನಿರ್ಮಾಣದ ಎಲ್ಲಾ ಅಂಶಗಳ ಕುರಿತು ತರಬೇತಿ ನೀಡುವಂತಹ ಸಂಸ್ಥೆ ಸ್ಥಾಪಿಸುವ ಕುರಿತು ಪ್ರಸ್ಥಾವನೆ ಸಿದ್ದಪಡಿಸಲಾಗುತ್ತಿದೆ. ಈ ಕಾರ್ಯಕ್ರಮದಡಿ ಸ್ವೀಡನ್ ಫಿಲಂ ಇನ್ಸ್‌ಟಿಟ್ಯೂಟ್ ತಾಂತ್ರಿಕ ನೆರವು ನೀಡಲು ಮುಂದಾಗಿದೆ ಎಂದು ತಿಳಿಸಿದರು.

  ಈ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿ ಚಲನಚಿತ್ರ ಅಕಾಡೆಮಿಯು ಮುಂದಿನ ತಿಂಗಳ ಅಂತ್ಯಕ್ಕೆ ವಾರಾಂತ್ಯ ಚಿತ್ರಕಲಾ ಶಾಲೆ ಮೂಲಕ ಚಿತ್ರ ಸಾಹಿತಿಗಳಿಗೆ ತರಬೇತಿ ನೀಡುವ ಉದ್ದೇಶ ಹೊಂದಿದೆ ಎಂದು ಅವರು ತಮ್ಮ ಮುಂದಿನ ಯೋಜನೆಗಳನ್ನು ವಿವರಿಸಿದರು. ವಾರ್ತಾ ಇಲಾಖೆ ನಿರ್ದೇಶಕ ಮಲ್ಲಿಕಾರ್ಜುನ ಜಿ. ಕೆಳಗಡೆ, ಅವರು ಸ್ವಾಗತಿಸಿದರು. ಇಲಾಖೆ ಜಂಟಿ ನಿರ್ದೇಶಕ ಕೆ.ಎಸ್. ಬೇವಿನಮರದ ಅವರು ವಂದಿಸಿದರು.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X