»   » 'ಶೌರ್ಯಂ' ರೀಮೇಕ್ ಗೆ ಬಿಕಿನಿ ಸುಂದರಿ ಮದಲಸಾ!

'ಶೌರ್ಯಂ' ರೀಮೇಕ್ ಗೆ ಬಿಕಿನಿ ಸುಂದರಿ ಮದಲಸಾ!

Posted By:
Subscribe to Filmibeat Kannada

ದರ್ಶನ್ ಅಭಿನಯಿಸಲಿರುವ 'ಶೌರ್ಯಂ' ರೀಮೇಕ್ ಚಿತ್ರಕ್ಕೆ ಕೊನೆಗೂ ಪರಭಾಷಾ ನಟಿ ಮದಲಸಾ ಶರ್ಮಾ ಆಯ್ಕೆಯಾಗಿದ್ದಾರೆ. ಈಕೆಯ ಖಾತೆಯಲ್ಲಿ ಜಮೆಯಾಗಿರುವುದು ಒಂದೇ ಒಂದು ಚಿತ್ರ. ಅಲ್ಲರಿ ನರೇಶ್ ಜತೆ ತೆಲುಗಿನಲ್ಲಿ 'ಫಿಟ್ಟಿಂಗ್ ಮಾಸ್ಟರ್' ಎಂಬ ಚಿತ್ರದಲ್ಲಿ ನಟಿಸಿದ್ದರು.

ಐಟಂ ಬೆಡಗಿಯರು ನಾಚುವಂತೆ ಬಿಕಿನಿ ದೃಶ್ಯಗಳಲ್ಲಿ ಮದಲಸಾ ಮಿಂಚಿದಿದ್ದಾರೆ. ಈ ಚಿತ್ರಕ್ಕೆ ಮೊದಲು ರಾಗಿಣಿ ದ್ವಿವೇದಿ ನಾಯಕಿಯಾಗಿ ಆಯ್ಕೆಯಾಗಿದ್ದರು. ಆಕೆ 'ಗೋಕುಲ' ಚಿತ್ರದ ಐಟಂ ಹಾಡೊಂದರಲ್ಲಿ ಕುಣಿದರು ಎಂಬ ಕಾರಣಕ್ಕೆ 'ಶೌರ್ಯಂ' ರೀಮೇಕ್ ಚಿತ್ರದ ಅವಕಾಶ ತಪ್ಪಿತು ಎಂಬ ಸುದ್ದಿ ಇದೆ. ಆದರೆ ಈ ಸುದ್ದಿಯನ್ನು ರಾಗಿಣಿ ಹಾಗೂ ದರ್ಶನ್ ಇಬ್ಬರೂ ಅಲ್ಲಗಳೆದಿದ್ದಾರೆ.

'ಶೌರ್ಯಂ' ರೀಮೇಕ್ ಚಿತ್ರಕ್ಕೆ ಕನ್ನಡಲ್ಲಿ ಇನ್ನೂ ಹೆಸರಿಟ್ಟಿಲ್ಲ. ಈ ಚಿತ್ರವನ್ನು ಕೋಕಿಲ ಸಾಧು ನಿರ್ದೇಶಿಸುತ್ತಿದ್ದು ಶೀಘ್ರದಲ್ಲೇ ಚಿತ್ರೀಕರಣ ಆರಂಭವಾಗಲಿದೆ. ತಮಿಳು ಮೂಲದ ಮದಲಸಾ ಇದೇ ಮೊದಲ ಬಾರಿಗೆ ಕನ್ನಡಕ್ಕೆ ಅಡಿಯಿಡುತ್ತಿದ್ದಾರೆ. ಕನ್ನಡ ಪ್ರೇಕ್ಷಕರ ಪ್ರೋತ್ಸಾಹ ಮದಲಸಾಗೆ ಹೇಗಿರುತ್ತದೆ ಎಂಬುದನ್ನು ಕಾದು ನೋಡಬೇಕು.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada