»   » ಚಿತ್ರ ನಿರ್ದೇಶಕ ರೇಣುಕಾ ಶರ್ಮ ತೀವ್ರ ಅಸ್ವಸ್ಥ

ಚಿತ್ರ ನಿರ್ದೇಶಕ ರೇಣುಕಾ ಶರ್ಮ ತೀವ್ರ ಅಸ್ವಸ್ಥ

Posted By:
Subscribe to Filmibeat Kannada
Veteran film director Renuka Sharma
ಕನ್ನಡ ಚಿತ್ರರಂಗದ ಹಿರಿಯ ನಿರ್ದೇಶಕ ರೇಣುಕಾ ಶರ್ಮ ತೀವ್ರವಾಗಿ ಅಸ್ವಸ್ಥಗೊಂಡಿದ್ದು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. 2007-08ನೇ ಸಾಲಿನ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ವಿಜೇತರೂ ಆಗಿರುವ ಶರ್ಮಾ ಅವರು ಕಡಿಮೆ ರಕ್ತದ ಒತ್ತಡದಿಂದ ಬಳಲುತ್ತಿದ್ದು ಅವರನ್ನು ತೀವ್ರನಿಗಾಘಟಕದಲ್ಲಿಡಲಾಗಿದೆ.

ಅರುವತ್ತರ ದಶಕದಲ್ಲಿ 'ಸರ್ವಜ್ಞ ಮೂರ್ತಿ' ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವ ಮೂಲಕ ರೇಣುಕಾ ಶರ್ಮ ಕನ್ನಡ ಚಿತ್ರರಂಗಕ್ಕೆ ಅಡಿಯಿಟ್ಟಿದ್ದರು. ಶರ್ಮ ಅವರು ಪೌರಾಣಿಕ ಚಿತ್ರಗಳನ್ನು ನಿರ್ದೇಶಿಸುವಲ್ಲಿ ಅರೂರು ಪಟ್ಟಾಭಿ, ಹುಣಸೂರು ಕೃಷ್ಣಮೂರ್ತಿಗಳಂತಹ ಪ್ರತಿಭಾವಂತ ನಿರ್ದೇಶಕರು ಸಹಾಯ, ಸಹಕಾರ ಸಹ ಇತ್ತು.

ಅನುಪಮ(ಅನಂತನಾಗ್, ಮಾಧವಿ, ಬಾಲಕೃಷ್ಣ ಮುಖ್ಯಭೂಮಿಕೆಯಲ್ಲಿದ್ದ ಚಿತ್ರ)ಚಿತ್ರದ ಸ್ವತಂತ್ರ ನಿರ್ದೇಶಕರಾಗಿ ಶರ್ಮಾ ಬೆಳ್ಳಿತೆರೆಗೆ ಪರಿಚಯವಾಗಿದ್ದರು. ಆ ಬಳಿಕ ಕವಿರತ್ನ ಕಾಳಿದಾಸ, ಶಬರಿಮಲೈ ಸ್ವಾಮಿ ಅಯ್ಯಪ್ಪ, ಅಂಜದ ಗಂಡು, ಅದೃಷ್ಟರೇಖೆ, ದೈವ ಶಕ್ತಿ, ಭದ್ರಕಾಳಿ, ನಮ್ಮ ಊರ ದೇವತೆ, ಹಠಮಾರಿ ಹೆಣ್ಣು ಕಿಲಾಡಿ ಗಂಡು, ಭರ್ಜರಿ ಗಂಡು, ಮುತ್ತೈದೆ, ಕಿಂದರಜೋಗಿ, ಕೊಲ್ಲೂರು ಶ್ರೀ ಮೂಕಾಂಬಿಕೆ ಸೇರಿದಂತೆ 20ಕ್ಕೂ ಹೆಚ್ಚು ಚಿತ್ರಗಳನ್ನು ಶರ್ಮಾ ಅವರು ನಿರ್ದೇಶಿಸಿದ್ದಾರೆ.

ಕಿರುತೆರೆಯಲ್ಲೂ ಶರ್ಮಾ ಅವರು ಹೆಸರು ಮಾಡಿದ್ದಾರೆ. ಖೋಡೆ ಸಂಸ್ಥೆಗಾಗಿ 'ಈಶ್ವರ ಅಲ್ಲಾ ನೀನೇ ಎಲ್ಲಾ' ಹಾಗೂ 'ಸಂತ ಶಿಶುನಾಳ ಶರೀಫ' ಧಾರಾವಾಹಿಗಳನ್ನು ನಿರ್ದೇಶಿಸಿದ್ದಾರೆ. ರಾಜ್ ಕುಮಾರ್ ಕುಟುಂಬ ನೀಡುವ 'ಸಿಂಗನಲ್ಲೂರು ಪುಟ್ಟಸ್ವಾಮಯ್ಯ' ಪ್ರಶಸ್ತಿ 2008ರಲ್ಲಿ ಶರ್ಮಾ ಅವರನ್ನು ವರಿಸಿತ್ತು.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada