»   »  ನಾಗೇಂದ್ರ ಅರಸ್ ಅವರ ಯಾರೇ ನೀ ದೇವತೆ

ನಾಗೇಂದ್ರ ಅರಸ್ ಅವರ ಯಾರೇ ನೀ ದೇವತೆ

Subscribe to Filmibeat Kannada

ಶ್ರೀಮಾತಾ ಅನ್ನಪೂರ್ಣೇಶ್ವರಿ ಪ್ರೊಡಕ್ಷನ್ಸ್ ಲಾಂಛನದಲ್ಲಿ ಟಿ.ಚಂದ್ರಕಲಾಬೆಟ್ಟಸ್ವಾಮಿ ಅವರು ನಿರ್ಮಿಸುತ್ತಿರುವ 'ಯಾರೇ ನೀ ದೇವತೆ' ಚಿತ್ರಕ್ಕೆ ನಗರದ ಅರುಣ್ ಸ್ಟೂಡಿಯೋದಲ್ಲಿ ಮಾತುಗಳ ಜೋಡಣೆ ಮುಕ್ತಾಯವಾಗಿದೆ.

ಖ್ಯಾತ ಸಂಕಲನಕಾರ ಎಸ್.ಕೆ.ನಾಗೇಂದ್ರ ಅರಸ್ ಈ ಚಿತ್ರದ ನಿರ್ದೇಶಕರು. ಇವರೇ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದಿದ್ದು, ಸಂಕಲನ ಕಾರ್ಯದ ನಿರ್ವಹಣೆಯೊಂದಿಗೆ ನಿರ್ದೇಶನವನ್ನು ಮಾಡುತ್ತಿದ್ದಾರೆ.
ಬೆಂಗಳೂರು, ರಾಮನಗರ, ಕಾಸರಗೋಡು ಮುಂತಾದಕಡೆ ಚಿತ್ರಕ್ಕೆ 35ದಿನಗಳ ಚಿತ್ರೀಕರಣ ಮುಕ್ತಾಯವಾಗಿದೆ. ವೆಂಕಟ್ ನಾರಾಯಣ್ ಅವರ ಸಂಗೀತ ನಿರ್ದೇಶನದಲ್ಲಿ ಐದು ಹಾಡುಗಳು ಉತ್ತಮವಾಗಿ ಮೂಡಿಬಂದಿದೆ ಎಂದು ನಿರ್ಮಾಪಕರು ತಿಳಿಸಿದ್ದಾರೆ.

ಕುಮಾರ್ ಈ ಚಿತ್ರದ ಮೂಲಕ ನಾಯಕನಾಗಿ ಕನ್ನಡ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ. 'ಯಾರೇ ನೀ ದೇವತೆ' ಚಿತ್ರದ ನಾಯಕಿಯಾಗಿ ಸಂಗೀತಾ ನಟಿಸಿದ್ದಾರೆ. ಎಸ್.ಕೆ.ನಾಗೇಂದ್ರ ಅರಸ್, ಗಿರಿದಿನೇಶ್, ಧರ್ಮ, ಮೋಹನ್ ಜುನೇಜಾ, ಮಳವಳ್ಳಿ ಸಾಯಿಕೃಷ್ಣ ಮುಂತಾದ ಕಲಾವಿದರ ತಾರಾಬಳಗ ಈ ಚಿತ್ರಕ್ಕಿದೆ.

ಚಂದ್ರು ಬೆಳವಂಗಲ ಅವರ ಛಾಯಾಗ್ರಹಣವಿರುವ ಚಿತ್ರಕ್ಕೆ ವೆಂಕಟ್-ನಾರಾಯಣ್ ಅವರ ಸಂಗೀತವಿದೆ. ಕೌರವ ವೆಂಕಟೇಶ್ ಸಾಹಸ, ಹರೀಶ್ ಶೃಂಗ-ಗಿರೀಶ್ ಸಂಭಾಷಣೆ, ತಂಗಾಳಿ ನಾಗರಾಜ್, ಸಂತೋಷ್ ಗೀತರಚನೆ ಹಾಗೂ ರಾಜು ಅವರ ನಿರ್ಮಾಣ ನಿರ್ವಹಣೆ 'ಯಾರೇ ನೀ ದೇವತೆ'ಗಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada