»   » ವಿಜಯಕರ್ನಾಟಕದ ವಿಶ್ವೇಶ್ವರಭಟ್ಟರೀಗ ರಾಜ್ಯಪಾಲರು?

ವಿಜಯಕರ್ನಾಟಕದ ವಿಶ್ವೇಶ್ವರಭಟ್ಟರೀಗ ರಾಜ್ಯಪಾಲರು?

By: ನಬಾ
Subscribe to Filmibeat Kannada
Vishveshwar Bhat in Muktha teleserial
ಸದ್ಯದ ಪತ್ರಿಕೋದ್ಯಮದಲ್ಲಿ ವಿಶ್ವೇಶ್ವರ ಭಟ್‌ ಹೆಸರು ಸದಾ ಪ್ರಸ್ತುತ. ತಮ್ಮ ಎಡೆಬಿಡದ ಕೆಲಸಕಾರ್ಯಗಳ ನಡುವೆಯೂ ಅವರು ಕಿರುತೆರೆಗಾಗಿ ಬಣ್ಣ ಹಚ್ಚಿದ್ದಾರೆ! ಅವರನ್ನು ವೀಕ್ಷಕರ ಮುಂದಕ್ಕೆ ಎಳೆದು ತಂದು ನಿಲ್ಲಿಸಿದವರು; ಟಿ.ಎನ್‌.ಸೀತಾರಾಮ್‌.

ನಂ.1 ದಿನಪತ್ರಿಕೆ 'ವಿಜಯಕರ್ನಾಟಕ' ದ ಸಂಪಾದಕರಾದ ವಿಶ್ವೇಶ್ವರ ಭಟ್‌, ಟೀವಿಯಲ್ಲಿ ರಾಜ್ಯಪಾಲರಾಗಿ ರಾಜಗಾಂಭೀರ್ಯದಲ್ಲಿ ಮಿಂಚುತ್ತಿದ್ದಾರೆ. ಅವರ ಅಭಿನಯದ ಎರಡು ಎಪಿಸೋಡ್‌ಗಳು ಈಗಾಗಲೇ ಪ್ರಸಾರವಾಗಿವೆ.

ಭಟ್‌ರ ಮಿತ್ರರಾದ ರವಿಬೆಳಗೆರೆ ಜಡ್ಜ್‌ ಪಾತ್ರದಲ್ಲಿ ಇದೇ ಸೀರಿಯಲ್‌ನಲ್ಲಿ ಅಭಿನಯಿಸಿದ್ದರು. ಈ ಪತ್ರಕರ್ತ ಮಿತ್ರರ ಜೋಡಿ ಕಂಡು ಪ್ರೇಕ್ಷಕ ಪುಳಕಿತನಾಗಿದ್ದಾನೆ. ನಾಳೆ 'ಮುಕ್ತ'ದಲ್ಲಿ 'ದಟ್ಸ್‌ ಕನ್ನಡ'ದ ಶಾಮ ಸುಂದರ್‌ ಬಂದರೂ ಅಚ್ಚರಿಯೇನಿಲ್ಲ! ಆದರೆ ಈ ಪತ್ರಕರ್ತರು ಕಿರುತೆರೆಯನ್ನು ಆಕ್ರಮಿಸಿಕೊಳ್ಳದಿದ್ದರೆ ಸಾಕು ಎಂದು ಓದುಗಪ್ರಭು ಬಯಸುತ್ತಿದ್ದಾನೆ!

'ಮುಕ್ತ' ಸೀರಿಯಲ್‌ನಿಂದ ಮುಕ್ತಿಯೆಂದು ಎಂಬ ವೀಕ್ಷಕರ ಗೊಣಗಾಟ ಕೇಳಿದೊಡನೆ, ಏನಾದರೊಂದು ಚಮತ್ಕಾರ ಮಾಡುವಲ್ಲಿ ಸೀತಾರಾಮ್‌ ಸಿದ್ಧ ಹಸ್ತರು. ಜನಪ್ರಿಯ ವ್ಯಕ್ತಿಗಳನ್ನು ಸೀರಿಯಲ್‌ಗೆ ಕರೆತಂದು, ಜನರ ಕುತೂಹಲ ಕೆರಳಿಸುವುದರಲ್ಲಿ ಅವರು ಜಾಣರು.

ರವಿ ಬೆಳಗೆರೆ, ರಮೇಶ್‌ಕುಮಾರ್‌, ಸಿ.ಅಶ್ವಥ್‌, ರತ್ನಮಾಲಾ ಪ್ರಕಾಶ್‌, ರಾಣಿ ಸತೀಶ್‌, ಶ್ರೀನಿವಾಸ್‌, ಬರಗೂರು ರಾಮಚಂದ್ರಪ್ಪ, ಜೈಜಗದೀಶ್‌ ಮತ್ತಿತರರನ್ನು ಕಿರುತೆರೆಗೆ ಎಳೆದು ತಂದವರು ಸೀತಾರಾಮ್‌. ಅವರ ಪ್ರಯತ್ನಗಳನ್ನು ಮೆಚ್ಚೋಣ. 'ಮುಕ್ತ' ಜಾಗದಲ್ಲಿ ಬೇಗ 'ಮೌನ'(ಸೀತಾರಾಮ್‌ರ ಹೊಸ ಸೀರಿಯಲ್‌?) ನೆಲೆಸಲಿ ಎಂದು ಹಾರೈಸೋಣವೇ?

Read more about: karnataka, kannada, bangalore

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada