»   » ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಗೆ ಲಕ್ಷ್ಮಿ ಆಗಮನ

ಬಿಗ್ ಬಿ ಅಮಿತಾಬ್ ಬಚ್ಚನ್ ಮನೆಗೆ ಲಕ್ಷ್ಮಿ ಆಗಮನ

Posted By:
Subscribe to Filmibeat Kannada

ಬಾಲಿವುಡ್ ತಾರೆ ಐಶ್ವರ್ಯ ರೈ ಸುಸೂತ್ರ ಹೆರಿಗೆ ಮುಗಿಸಿಕೊಂಡು ತಮ್ಮ ಮುದ್ದಾದ ಮಗುವಿನೊಂದಿಗೆ ಮಂಗಳವಾರ (ನ.22) ಮುಂಬೈನ ಸೆವೆನ್ ಹಿಲ್ಸ್ ಆಸ್ಪತ್ರೆಯಿಂದ ಮನೆಗೆ ಹಿಂತಿರುಗಿದ್ದಾರೆ. ಅಮಿತಾಬ್ ಬಚ್ಚನ್ ತಮ್ಮ ಮೊಮ್ಮಗಳನ್ನು ಎತ್ತಿಕೊಂಡಿದ್ದರೆ ಪಕ್ಕದಲ್ಲೇ ಸೊಸೆ ಐಶ್ವರ್ಯ ರೈ ಇರುವುದನ್ನೂ ಚಿತ್ರದಲ್ಲಿ ಕಾಣಬಹುದು.


ನ.16ರಂದು ಐಶ್ವರ್ಯ ರೈ ಹೆಣ್ಣು ಮಗುವಿಗೆ ಜನ್ಮ ನೀಡಿದ ಮೇಲೆ ಒಂದು ವಾರ ಕಾಲ ಅವರು ಆಸ್ಪತ್ರೆಯಲ್ಲೇ ಉಳಿದಿದ್ದರು. ವಿಧಿವಿಧಾನಗಳ ಪ್ರಕಾರ ಮಗುವನ್ನು ಮನೆಗೆ ಬರಮಾಡಿಕೊಂಡಿದ್ದೇವೆ ಎಂದು ಅಮಿತಾಬ್ ಟ್ವೀಟಿಸಿದ್ದಾರೆ. ಇದಾದ ಬಳಿಕ ನ.22ರ ಸಂಜೆ ಅಮಿತಾಬ್ ಹಾಗೂ ಅಭಿಷೇಕ್ ಬಚ್ಚನ್ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದರು.

ನಮಗೆ ತುಂಬಾ ಸಂತಸವಾಗುತ್ತಿದೆ. ಐಶ್ವರ್ಯ ರೈ ಹಾಗೂ ಮೊಮ್ಮಗಳು ಇಬ್ಬರೂ ಆರೋಗ್ಯವಾಗಿದ್ದಾರೆ. ಹೊಸ ಜೀವ ಮನೆಗೆ ಬಂದ ಮೇಲೆ ನಮ್ಮ ಜೀವನ ಬದಲಾಗಿದೆ. ಮನೆಗೆ ಸಾಕ್ಷಾತ್ ಲಕ್ಷ್ಮಿಯೇ ಬಂದಂತಾಗಿದೆ. ಲಕ್ಷ್ಮಿಯನ್ನು ಮನೆಗೆ ಬರಮಾಡಿಕೊಂಡಿದ್ದೇವೆ ಎಂದು ಬಿಗ್ ಬಿ ಸಡಗರ ಸಂಭ್ರಮದಿಂದ ಹೇಳಿದ್ದಾರೆ. (ಏಜೆನ್ಸೀಸ್)

English summary
Aishwarya Rai Bachchan, along with Beti B returned to their home in Jalsa yesterday from the Seven Hills Hospital, where Aishwarya delivered a beautiful baby girl on November 16.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada