»   »  ಐಟಂ ರಾಣಿ ರಾಗಿಣಿಗೆ 'ಶೌರ್ಯ' ಛಾನ್ಸ್ ಮಿಸ್!

ಐಟಂ ರಾಣಿ ರಾಗಿಣಿಗೆ 'ಶೌರ್ಯ' ಛಾನ್ಸ್ ಮಿಸ್!

Posted By:
Subscribe to Filmibeat Kannada

ಡೆಲ್ಲಿ ಪಬ್ಲಿಕ್ ಸ್ಕೂಲ್‌ನಲ್ಲಿ ಇಂಗ್ಲಿಷ್‌ನಲ್ಲಿ ಲಲ್ಲೆಗರೆಯುತ್ತಾ ಬೆಳೆದ ಹುಡುಗಿ ರಾಗಿಣಿ ದ್ವಿವೇದಿ ಮೊನ್ನೆಮೊನ್ನೆ ಎಂ.ಜಿ.ರಸ್ತೆಯ ಲೇಕ್ ವ್ಯೂನಲ್ಲಿ ಮೂಗಿಗೆ ಐಸ್‌ಕ್ರೀಮ್ ಮೆತ್ತಿಕೊಂಡಂಥವಳು. ಈಗ 'ಗೋಕುಲ" ಚಿತ್ರದ ಐಟಂ ಹಾಡೊಂದಕ್ಕೆ ಹೆಜ್ಜೆ ಹಾಕಿ ಸುದ್ದಿಯಾಗಿದ್ದಾಳೆ. ಅಷ್ಟೇ ಅಲ್ಲ, ದರ್ಶನ್ ನಟನೆಯ 'ಶೌರ್ಯಂ" ರೀಮೇಕ್ ಚಿತ್ರಕ್ಕೆ ನಾಯಕಿಯಾಗುವ ಅವಕಾಶವನ್ನು ಆ ಕಾರಣಕ್ಕೇ ಕಳೆದುಕೊಂಡಿದ್ದಾಳೆ. 'ಶೌರ್ಯಂ" ರೀಮೇಕ್ ಇದೇ ತಿಂಗಳು ಸೆಟ್ಟೇರಬೇಕಿತ್ತು.

ಐಟಂ ಹಾಡಿಗೆ ಕುಣಿದಾಕೆ ತನಗೆ ನಾಯಕಿಯಾಗುವುದು ಸಲ್ಲ ಎಂದು ದರ್ಶನ್ ಪಟ್ಟು ಹಿಡಿದ ಕಾರಣಕ್ಕೆ ನಾಯಕಿಯನ್ನೇ ಬದಲಿಸುವ ನಿರ್ಧಾರಕ್ಕೆ ನಿರ್ಮಾಪಕರು ಬಂದಿದ್ದಾರಂತೆ. ಅಡ್ವಾನ್ಸ್ ಇಸಿದುಕೊಂಡಿದ್ದ ರಾಗಿಣಿ ದ್ವಿವೇದಿಗೆ ಇದರಿಂದ ಬೇಸರವೇನೂ ಆದಂತಿಲ್ಲ. ಸಿನಿಮಾ ತಳ್ಳಿದರೆ ರ‌್ಯಾಂಪ್ ಇದ್ದೇಇದೆ ಎಂದು ಇಂಗ್ಲಿಷ್‌ನಲ್ಲೇ ನಗುವ ರಾಗಿಣಿ 'ಶಂಕರ್ ಐಪಿಎಸ್" ಚಿತ್ರದಲ್ಲಿ ಒಂದು ಪಾತ್ರ ನಿರ್ವಹಿಸಲಿದ್ದಾರೆ. ಈ ವಿಷಯವನ್ನು ನಿರ್ದೇಶಕ ಎಂ.ಎಸ್.ರಮೇಶ್ ಗುಟ್ಟಾಗಿಟ್ಟಿದ್ದಾರೆ.

'ಈ ಶತಮಾನದ ವೀರ ಮದಕರಿ" ತೆರೆಕಂಡ ಮೇಲೆ ಸುದೀಪ್ ಜೊತೆ ಗಾಸಿಪ್ ಕಾಲಮ್ಮುಗಳಲ್ಲಿ ರಾಗಿಣಿ ಹೆಸರು ಓಡಾಡಿತ್ತು. ಆಕೆ ಬಣ್ಣ ಹಚ್ಚಿದ ಮೊದಲ ಚಿತ್ರ 'ಹೋಲಿ" ಇನ್ನೂ ಬಿಡುಗಡೆಯಾಗಿಲ್ಲ. ಅಷ್ಟರಲ್ಲಿ ಪ್ರಕಾಶ್ ನಿರ್ದೇಶನದ 'ಗೋಕುಲ"ದ ಐಟಂ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಅದು ಭಿನ್ನ ರೀತಿಯ ಹಾಡಾಗಿದ್ದರಿಂದ ಒಪ್ಪಿದ್ದೇನೆ ಎನ್ನುವ ರಾಗಿಣಿಗೆ ಆ ಹಾಡು ಹಿಟ್ ಆಗುವ ಬಗ್ಗೆ ಅಪಾರ ವಿಶ್ವಾಸವಿದೆ.

(ದಟ್ಸ್ ಕನ್ನಡ ಚಿತ್ರವಾರ್ತೆ)

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada