»   » ಚಿತ್ರೋದ್ಯಮ 'ಬಂದ್'ನಲ್ಲಿ ಒಗ್ಗಟ್ಟಿನ ಮೆರವಣಿಗೆ

ಚಿತ್ರೋದ್ಯಮ 'ಬಂದ್'ನಲ್ಲಿ ಒಗ್ಗಟ್ಟಿನ ಮೆರವಣಿಗೆ

Posted By:
Subscribe to Filmibeat Kannada
ಕೇಂದ್ರ ಸರಕಾರವು ಚಿತ್ರೋದ್ಯಮದ ಮೇಲೆ ವಿಧಿಸಿರುವ ಸೇವಾ ತೆರಿಗೆ ನೀತಿ ವಿರೋಧಿಸಿ ಇಡೀ ಭಾರತೀಯ ಚಲನಚಿತ್ರೋದ್ಯಮ ಇಂದು, ಫೆಬ್ರವರಿ 23, 2012ರಂದು ಭಾರತ ಬಂದ್‌ಗೆ ಕರೆಕೊಟ್ಟಿದೆ. ಈ ಹಿನ್ನೆಲೆಯಲ್ಲಿ ದೇಶದಾದ್ಯಂತ ಇರುವ 90,000 ಚಲನಚಿತ್ರ ಮಂದಿರಗಳು ಇಂದು ಬಂಧ್ ಆಚರಿಸಿವೆ. ಈ ರೀತಿ ಕೇಂದ್ರ ಸರ್ಕಾರದ ವಿರುದ್ಧ ಚಿತ್ರೋದ್ಯಮ ಪ್ರತಿಭಟನೆ ವ್ಯಕ್ತಪಡಿಸಿದೆ.

ಈ ಸಂಬಂಧ, ರಾಜ್ಯದಲ್ಲಿಯೂ ಇಡೀ ಚಲನಚಿತ್ರೋದ್ಯಮವನ್ನು ಬಂದ್ ಮಾಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ, ಕೇಂದ್ರ ಸರ್ಕಾರದ ವಿರುದ್ಧ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದೆ. ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ. ವಿ. ಚಂದ್ರಶೇಖರ್ ಸೇರಿದಂತೆ ಮಂಡಳೀಯ ಪದಾಧಿಕಾರಿಗಳು, ಸಂಘಗಳು, ರಾಜ್ಯಪಾಲರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿವೆ.

ಮಂಡಳಿಯಿಂದ ರಾಜಭವನದವರೆಗೆ ಮೆರವಣಿಗೆ ನಡೆಸಿದ ಪದಾಧಿಕಾರಿಗಳು ಹಾಗೂ ಚಿತ್ರರಂಗದ ಗಣ್ಯರು, ನಟ-ನಟಿಯರು, ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು, ಕೇಂದ್ರಸರ್ಕಾರದ ವಿರುದ್ಧ ಘೋಷಣೆ ಕೂಗಿದ್ದಲ್ಲದೇ, ಸೇವಾ ತೆರಿಗೆಯನ್ನು ಈ ಕೂಡಲೇ ಹಿಂಪಡೆಯುವಂತೆ ಆಗ್ರಹಿಸಿದ್ದಾರೆ. ಡಾ ರಾಜ್ ಕುಟುಂಬ, ಹಿರಿಯ ನಟಿ ಲೀಲಾವತಿ, ನಟ ಅಂಬರೀಷ್ ಕೂಡ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. (ಒನ್ ಇಂಡಿಯಾ ಕನ್ನಡ)

English summary
All film chambers of India closed today, on 23rd February. All over India 9,000 theaters are closed for protesting against the introduction of service tax by the Central government. The Kannada film industry has also supported this. 
 

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X