For Quick Alerts
  ALLOW NOTIFICATIONS  
  For Daily Alerts

  ಕನ್ನಡದ ಡರ್ಟಿ ಪಿಕ್ಚರ್ ಸೆಕ್ಸ್ ವರ್ಕರ್ ಕಥೆ; ನಿಖಿತಾ

  |

  ಕನ್ನಡದಲ್ಲಿ ನಿರ್ಮಿಸಲು ತಯಾರಿ ನಡೆಸುತ್ತಿರುವ 'ದಿ ಡರ್ಟಿ ಪಿಕ್ಚರ್' ಚಿತ್ರಕ್ಕೆ ನಿಖಿತಾ ತುಕ್ರಲ್ 'ನೋ' ಅಂದಿರುವುದು ಯಾಕೆ ಎಂಬುದು ತಡವಾಗಿಯಾದರೂ ಬೆಳಕಿಗೆ ಬಂದಿದೆ. 'ದಿ ಡರ್ಟಿ ಪಿಕ್ಚರ್; ಸಿಲ್ಕ್ ಸಖತ್ ಮಗಾ' ಇದು ನಟಿ ಸಿಲ್ಕ್ ಸ್ಮಿತಾ ಜೀವನಗಾಥೆ ಎಂದೇ ಹೇಳಲಾಗಿದೆ. ಆದರೆ ನಿಖಿತಾ ಪ್ರಖಾರ ಇದು ಶುದ್ಧ ಸುಳ್ಳು. ಈ ಕುರಿತು ನಿಖಿತಾ ಹೇಳಿಕೆ ನೀಡಿದ್ದಾರೆ.

  ತಮಗೆ ಬಂದ ಈ ಡರ್ಟಿ ಪಿಕ್ಚರ್ ಅವಕಾಶ ಹಾಗೂ ಕಥೆ ಬಗ್ಗೆ ನಿಖಿತಾ ಹೇಳುವುದಿಷ್ಟು..."ಕನ್ನಡದಲ್ಲಿ ಮಾಡಲಿರುವ ಡರ್ಟಿ ಚಿತ್ರದ ಕಥೆ 'ವೇಶ್ಯಾವಾಟಿಕೆ ಹಾಗೂ ನಟಿಯೊಬ್ಬಳ ಜೀವನ ಚರಿತ್ರೆ'ಯ ಬದಲಾಗಿ 'ಸೆಕ್ಸ್ ವರ್ಕರ್' ಕುರಿತು ಕಥೆ, ಚಿತ್ರಕಥೆ ಹೆಣೆದಂತಿದೆ. ಒಂದು ಕಾಲದಲ್ಲಿ ಸೆಕ್ಸ್ ಬಾಂಬ್ ಎಂದು ಕರೆಸಿಕೊಂಡಿದ್ದ ನಟಿ ಸಿಲ್ಕ್ ಸ್ಮಿತಾ ಹಾಗೂ ಅವರ ಜೀವನ ಚರಿತ್ರೆಗೆ ಸಂಬಂಧಿಸಿದ ಯಾವ ಘಟನೆ ಹಾಗೂ ಎಳೆಯೂ ಇದರಲ್ಲಿ ಇದ್ದಂತೆ ನನಗೆ ಕಾಣಲಿಲ್ಲ.

  ನಟಿಯೊಬ್ಬಳ ಜೀವನ ಚರಿತ್ರೆ ಬಯಸಿ ಬರುವ ಪ್ರೇಕ್ಷಕರಿಗೆ ಈ ಚಿತ್ರದಿಂದ ಯಾವ ಲಾಭವೂ ಆಗಲಾರದು ಎಂದು ನನಗನಿಸಿದೆ. ಈ ಕನ್ನಡ ಚಿತ್ರ ಸಿಲ್ಕ್ ಸ್ಮಿತಾ ಬದುಕಿಗೆ ಯಾವ ಕನ್ನಡಿಯನ್ನೂ ಹಿಡಿಯಲಿಕ್ಕಿಲ್ಲ. ಹಾಗಾಗಿ ಕಥೆ ಕೇಳಿದ ನಂತರ ನಾನು ಈ ಚಿತ್ರದಲ್ಲಿ ನಟಿಸಲು ನಿರಾಕರಿಸಿದ್ದೇನೆ" ಎಂದು ತಮ್ಮ 'ರೆಡ್ ಸಿಗ್ನಲ್' ಗೆ ಸ್ಪಷ್ಟೀಕರಣ ನೀಡಿದ್ದಾರೆ. ನಿಖಿತಾ ದೂರಮಾಡಿದ ಈ ಅವಕಾಶವನ್ನು ವೀಣಾ ಮಲಿಕ್ ಬಾಚಿಕೊಂಡಿದ್ದಾರೆ. (ಒನ್ ಇಂಡಿಯಾ ಕನ್ನಡ)

  English summary
  Nikita Thukral has spilled the bean on refusing the Dirty Picture Silk Sakkath Maga reportedly made on the life of Silk Smitha.
 

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X