»   »  ಗಣೇಶ್ ವೆಂಕಟರಾಮನ್ ರೊಂದಿಗೆ ರಮ್ಯಾ 'ಕನಸು'

ಗಣೇಶ್ ವೆಂಕಟರಾಮನ್ ರೊಂದಿಗೆ ರಮ್ಯಾ 'ಕನಸು'

Subscribe to Filmibeat Kannada

ಪ್ರಕಾಶ್ ರೈ ನಿರ್ದೇಶಿಸುತ್ತಿರುವ ಚೊಚ್ಚಲ ಚಿತ್ರ 'ನಾನು ನನ್ನ ಕನಸು'. ರಮ್ಯಾ ಅವರಿಗೆ ಜತೆಯಾಗಿ ಗಣೇಶ್ ವೆಂಕಟರಾಮನ್ ಈ ಚಿತ್ರಕ್ಕೆ ಆಯ್ಕೆಯಾಗಿದ್ದಾರೆ. ತಮಿಳಿನಲ್ಲಿ ಪ್ರಕಾಶ್ ರೈ ನಿರ್ಮಿಸಿದ್ದ 'ಅಭಿಯುಂ ನಾನುಂ' ಕನ್ನಡದಲ್ಲಿ 'ನಾನು ನನ್ನ ಕನಸು' ರೂಪದಲ್ಲಿ ಸೆಟ್ಟೇರಲಿದೆ. ಈ ಚಿತ್ರದಲ್ಲಿ ಪ್ರಕಾಶ್ ಅವರದು ತಂದೆಯ ಪಾತ್ರವಾದರೆ, ಮಗಳ ಪಾತ್ರದಲ್ಲಿ ರಮ್ಯಾ ಕಾಣಿಸಲಿದ್ದಾರೆ.

ನಾನು ನನ್ನ ಕನಸಿನ ಬಗ್ಗೆ ರಮ್ಯಾ ಮಾತನಾಡುತ್ತಾ, ಪ್ರಕಾಶ್ ಚಿತ್ರಗಳೆಂದರೆ ನಮಗೆಲ್ಲಾ ಅಭಿಮಾನ.ಅವರೊಂದಿಗೆ ಕೆಲಸ ಮಾಡುವುದೆಂದರೆ ತುಂಬಾ ಖುಷಿ. ಸಬ್ಜೆಕ್ಟ್ ತುಂಬಾ ಚೆನ್ನಾಗಿದೆ. ಈ ಚಿತ್ರದಲ್ಲಿ ನಟಿಸಲು ಸಹಾ ಅಷ್ಟೇ ಖುಷಿಯಾಗುತ್ತಿದೆ. ಮತ್ತೊಂದು ಮುಖ್ಯ ವಿಚಾರವೆಂದರೆ ಪ್ರಕಾಶ್ ಅವರು ಮಹಿಳೆಯರನ್ನು ಗೌರವದಿಂದ ಕಾಣುತ್ತಾರೆ. ಈ ರೀತಿಯ ನಿರ್ದೇಶಕರೊಂದಿಗೆ ಹೆಚ್ಚು ಹೆಚ್ಚು ಚಿತ್ರಗಳಲ್ಲಿ ನಟಿಸಬೇಕೆಂದಿದ್ದೇನೆ ಎನ್ನುತ್ತಾರೆ ರಮ್ಯಾ.

ಗಣೇಶ್ ವೆಂಕಟರಾಮನ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಅಭಿಯುಂ ನಾನುಂ ಚಿತ್ರದ ಮೂಲಕ ನನಗೆ ಉತ್ತಮ ಬ್ರೇಕ್ ನೀಡಿದವರು ಪ್ರಕಾಶ್. ಕನ್ನಡ ಚಿತ್ರದಲ್ಲೂ ನಟಿಸಬೇಕು ಎಂದು ಕೇಳಿದಾಗ ನಾನು ಕೂಡಲೆ ಒಪ್ಪಿಕೊಂಡೆ. ಪ್ರಕಾಶ್ ರೈ ನನಗೆ ಮಾರ್ಗದರ್ಶಕರಿದ್ದಂತೆ. ಅವರ ಚಿತ್ರಗಳೆಂದರೆ ನಮಗೆಲ್ಲಾ ತುಂಬಾನೇ ಇಷ್ಟ. ಆದರೆ ಅವರು ಇಷ್ಟು ಬೇಗನೆ ಚಿತ್ರ ನಿರ್ದೇಶನಕ್ಕೆ ಕೈಹಾಕುತ್ತಾರೆ ಎಂದು ಎಣಿಸಿರಲಿಲ್ಲ ಎಂಬುದು ಗಣೇಶ್ ವೆಂಕಟರಾಮನ್ ಅಭಿಪ್ರಾಯ.

(ದಟ್ಸ್ ಕನ್ನಡ ಚಿತ್ರವಾರ್ತೆ)

Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada